ಕಲಬುರಗಿ | ಕನ್ನಡ ಫಿಲಂ ಚೇಂಬರ್‌ಗೆ ಪದಾಧಿಕಾರಿಗಳ ಆಯ್ಕೆ

ಕಲಬುರಗಿ: ಕನ್ನಡ ಫಿಲಂ ಚೇಂಬರ್‌ಗೆ ಗೌರವಾಧ್ಯಕ್ಷರಾಗಿ ಸಾಹಿತಿ, ಚಿತ್ರನಟ ಹಾಗೂ ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಹಾಗೂ ಜಿಲ್ಲಾಧ್ಯಕ್ಷರಾಗಿ ಸಾಹಿತಿ ಹಾಗೂ ನಾಟಕಕಾರ ಡಾ. ಮಲ್ಲಿಕಾರ್ಜುನ ಎಸ್.ಆಲಮೇಲ ಅವರು ಆಯ್ಕೆಯಾಗಿದ್ದಾರೆಂದು ಕನ್ನಡ ಫಿಲಂ ಚೇಂಬರ್ ರಾಜ್ಯಾಧ್ಯಕ್ಷರಾದ ಡಾ.ಎಂ.ಎಸ್.ರವೀoದ್ರ ತಿಳಿಸಿದ್ದಾರೆ.
ಕನ್ನಡ ನಾಡು ನುಡಿ ರಕ್ಷಣೆಗಾಗಿ ಕಲೆ, ಸಾಹಿತ್ಯ, ಸಂಗೀತ, ಬೆಳವಣಿಗೆಗಾಗಿ, ಕಲಾವಿದರ ಕ್ಷೇಮಾಭಿವೃದ್ದಿಯ ಸಂಕಲ್ಪದೊಂದಿಗೆ ಕನ್ನಡ ಫಿಲಂ ಚೇಂಬರ್ ರಾಜ್ಯ ವ್ಯಾಪ್ತಿ ವಿಸ್ತರಿಸುವ ಸದಾಶಯದೊಂದಿಗೆ ಜಿಲ್ಲಾ ಘಟಕ ರಚಿಸಿದ್ದು, ಇನ್ನುಳಿದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಉಪಾಧ್ಯಕ್ಷರಾಗಿ ಅಮೃತ ದೊಡಮನಿ, ಪ್ರಧಾನ ಕಾರ್ಯದರ್ಶಿಯಾಗಿ ಖಾಜ ಅಜ್ಮಿರ , ಖಜಾಂಚಿಯಾಗಿ ಚಿಂತನಗೌಡ ಪಾಟೀಲ್, ನಿರ್ದೇಶಕರಾಗಿ ಕು. ಭಾಗಮ್ಮ ಸಿ ಸುಂಬಡ, ವೀರೇಶ ಎಸ್ ಕುಂಬಾರ, ರಮೇಶ ಎಂ ತುಪ್ಪದ, ಕರಲಿಂಗ ಹೊಸಮನಿ, ಗೊಲ್ಲಾಳಪ್ಪ ಗೊಂದಳಿ, ಶಿವಶರಣಪ್ಪ ಶಾಖಾಪುರ, ನಿಂಗರಾಜ್ ತಳಗೇರ, ಮಲ್ಲಪ್ಪ ಹೊಸಮನಿ, ದೇವೇಂದ್ರ ಗೊಂದಳಿ ಆಯ್ಕೆಯಾಗಿದ್ದಾರೆ ಎಂದು ಡಾ. ಎಂ.ಎಸ್. ರವೀಂದ್ರ ತಿಳಿಸಿದ್ದಾರೆ.




