ಕಲಬುರಗಿ | 2026ರ ಇಂಜಿನಿಯರಿಂಗ್ ದಿನಚರಿ ಬಿಡುಗಡೆ

ಕಲಬುರಗಿ: ಕರ್ನಾಟಕ ಇಂಜಿನಿಯರಿಂಗ್ ಸೇವಾ ಸಂಘ ಬೆಂಗಳೂರು ಜಿಲ್ಲಾ ಘಟಕದ ವತಿಯಿಂದ ಪ್ರಕಟಿಸಲಾದ 2026ನೇ ವರ್ಷದ ಇಂಜಿನಿಯರಿಂಗ್ ದಿನಚರಿಯನ್ನು ಸಂಪರ್ಕ ಮತ್ತು ಕಟ್ಟಡಗಳ ವಿಭಾಗದ ಮುಖ್ಯ ಅಭಿಯಂತರ ಶರಣಪ್ಪಾ ಸುಲಗಂಟೆ ಅವರು ಬುಧವಾರ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ (ವಿನ್ಯಾಸ) ಮುಖ್ಯ ಅಭಿಯಂತರರ ಕಚೇರಿಯ ಅಧೀಕ್ಷಕ ಅಭಿಯಂತರ ಸುರೇಶ ಎಲ್. ಶರ್ಮಾ, ಉಪಮುಖ್ಯ ಇಂಜಿನಿಯರರಾದ ಶ್ರೀಮಂತ ಬೆನ್ನೂರ ಹಾಗೂ ಶಿವರಾಜ ಪಾಟೀಲ್, ಕಾರ್ಯನಿರ್ವಕ ಅಭಿಯಂತ ಸೂರ್ಯಕಾಂತ್ ಕಾರ್ಬರಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಇಂಜಿನಿಯರಿಂಗ್ ಸೇವಾ ಸಂಘದ ಗೌರವಾಧ್ಯಕ್ಷ ನೀಲಕಂಠ ಜಮಾದಾರ್, ಜಿಲ್ಲಾ ಘಟಕದ ಅಧ್ಯಕ್ಷ ಕಾಳಪ್ಪ, ಕಾರ್ಯದರ್ಶಿ ಮಾರ್ತಾಂಡ ಶಾಸ್ತ್ರಿ, ಉಪಾಧ್ಯಕ್ಷ ರಮೇಶ್ ನಾಯಕ್, ಕೋಶ್ಯಾಧ್ಯಕ್ಷ ಶಶಿಕಾಂತ್ ಕಮಲಾಪುರ, ತಜಮುಲ್ ಹುಸೇನ್, ಶರಣಗೌಡ ಪಾಟೀಲ್, ದುಂಡೇಶ್ ಸುಬೇದಾರ್, ಮುಸ್ತಕ ಅಹಮದ್ ಸೇರಿದಂತೆ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
ಇದೇ ವೇಳೆ ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣ್ ರಾಜ್ ಚಪ್ಪರಬಂದಿ ಸೇರಿದಂತೆ ವಿವಿಧ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.





