Kalaburagi | ಇಂಜಿನಿಯರ್ಸ್ ದಿನಾಚರಣೆ ; ನಿವೃತ್ತ ಅಧಿಕಾರಿ–ಸಿಬ್ಬಂದಿಗಳಿಗೆ ಸೇವಾಭೂಷಣ ಪ್ರಶಸ್ತಿ

ಕಲಬುರಗಿ: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ 165ನೇ ಜನ್ಮದಿನೋತ್ಸವದ ಅಂಗವಾಗಿ ಕರ್ನಾಟಕ ಇಂಜಿನಿಯರಿಂಗ್ ಸೇವಾ ಸಂಘದ ಜಿಲ್ಲಾ ಘಟಕ ಹಾಗೂ ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆ ನೌಕರರ ಸಂಘದ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಲೋಕೋಪಯೋಗಿ ಭವನದಲ್ಲಿ ಇಂಜಿನಿಯರ್ಸ್ ದಿನಾಚರಣೆ, ಸೇವಾಭೂಷಣ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಸೇವಾಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಪರ್ಕ ಮತ್ತು ಕಟ್ಟಡ ಈಶಾನ್ಯ ವಲಯ, ಕಲಬುರಗಿಯ ಮುಖ್ಯ ಇಂಜಿನಿಯರ್ ಸುಭಾಷ್ ಎಲ್. ಶಿಕ್ಷಣಕರ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಧೀಕ್ಷಕ ಅಭಿಯಂತರರಾದ ಅಮೀನ್ ಮುಕ್ತಾರ್ ಅಹಮದ್ ಹಾಗೂ ಪ್ರಶಾಂತ್ ಪಿ., ಕಾರ್ಯನಿರ್ವಾಹಕ ಅಭಿಯಂತರರಾದ ರಾಹುಲ್ ಕಾಂಬಳೆ, ಸೂರ್ಯಕಾಂತ್ ಕಾರ್ಬರಿ, ಬಸವರಾಜ ಹಾಗೂ ಮೊಹಮ್ಮದ್ ಇಬ್ರಾಹಿಂ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಉಷಾ ರಾಣಿಪಾಟೀಲ್ ಹಾಗೂ ಖುಷಿದ್ ಬಾನು ಉಪಸ್ಥಿತರಿದ್ದರು.
ಕರ್ನಾಟಕ ಇಂಜಿನಿಯರಿಂಗ್ ಸೇವಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕಾಳಪ್ಪ ಚೆಂಗಟಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪದಾಧಿಕಾರಿಗಳಾದ ಮಾರ್ತಾಂಡ ಶಾಸ್ತ್ರಿ, ರಮೇಶ್ ನಾಯಕ್, ಶಶಿಕಾಂತ್ ಕಮಲಾಪುರ್ಕರ್, ಶೇಕ್ ರಫೀಕ್, ಶಾಂತಪ್ಪ ನಂದೂರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಸಂಘದ ಹಿರಿಯ ಉಪಾಧ್ಯಕ್ಷ ಭೀಮಣ್ಣ ನಾಯಕ್, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಸಂಗೊಳ್ಳಗಿ, ಉಜ್ಜರ್ ಅಹಮದ್ ಖಾನ್, ಕಮಲಾಕರ್ ಆನೆಗುಂದಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಕಟ್ಟಿಮನಿ, ಖಜಾಂಚಿ ಉಮಾಕಾಂತ ಹಿರೋಳ್ಳಿ, ಸಹಕಾರ್ಯದರ್ಶಿ ಖಾಸಿಂ ಅಲಿ, ಸಂಘಟನಾ ಕಾರ್ಯದರ್ಶಿ ಅಶೋಕ ಸಜ್ಜನ, ಕ್ರೀಡಾ ಕಾರ್ಯದರ್ಶಿ ರಾಮಕೃಷ್ಣ ಸಿಂಗ್, ಸಲಹೆಗಾರ ಶರಣಗೌಡ ಪಾಟೀಲ್, ಕಾರ್ಯಕಾರಿ ಸದಸ್ಯರಾದ ರಾಜಕುಮಾರ್, ಪಾಂಡುರಂಗ ಕುಲಕರ್ಣಿ, ಮಹಮ್ಮದ್ ಮಜಾರ್ ಸೇರಿದಂತೆ ಸಂಘದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಶರಣರಾಜ ಛಪ್ಪರಬಂದಿ ಕಾರ್ಯಕ್ರಮ ನಿರೂಪಿಸಿದರು.
ಈ ವೇಳೆ ನಿವೃತ್ತ ಮುಖ್ಯ ಇಂಜಿನಿಯರ್ ಶರಣಪ್ಪ ಸುಲುಗಂಟೆ, ನಿವೃತ್ತ ಅಧೀಕ್ಷಕ ಅಭಿಯಂತರ ಸುರೇಶ್ ಮೇದ, ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರ ಶ್ರೀಧರ್ ಸಾರ್ವಾಡ್, ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಸುಭಾಷ್ ಚಂದ್ರ ಶಿವುಗೋಳ ಹಾಗೂ ದಿಲೀಪ್ ಜಾದವ್, ನಿವೃತ್ತ ಸಹಾಯಕ ಅಭಿಯಂತರರಾದ ಗುಲಾಮ್ ಮೈನುದ್ದೀನ್ ಹಾಗೂ ನಾರಾಯಣ ಹರನುರ್ಕರ್, ನಿವೃತ್ತ ಕಿರಿಯ ಅಭಿಯಂತರ ಚಂದ್ರಶೇಖರ್ ನಾಸಿ, ನಿವೃತ್ತ ಲೆಕ್ಕ ಅಧೀಕ್ಷಕ ಶಿವಶರಣಪ್ಪ ಆಲೂರು, ನಿವೃತ್ತ ದ್ವಿತೀಯ ದರ್ಜೆ ಸಹಾಯಕ ಮಲ್ಲಿಕಾರ್ಜುನ ಸಾಗೊಳ್ಳಗಿ, ನಿವೃತ್ತ ಬೆರಳಚ್ಚುಗಾರ ಸಲೀಂ, ಹಿರಿಯ ವಾಹನ ಚಾಲಕ ಗುರುಶಾಂತಪ್ಪ ಓಗಿ ಹಾಗೂ ನಿವೃತ್ತ ಗ್ರೂಪ್-ಡಿ ಸಿಬ್ಬಂದಿ ಮಲ್ಲಮ್ಮ ಅವರಿಗೆ ಸೇವಾಭೂಷಣ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.






