ಕಲಬುರಗಿ | ಕನ್ನಡ ನಾಡು-ನುಡಿ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರ ಕರ್ತವ್ಯ ಮುಖ್ಯ : ಮಾಲೀಕಯ್ಯಾ ಗುತ್ತೇದಾರ

ಕಲಬುರಗಿ : ಕನ್ನಡ ನಾಡು-ನುಡಿ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರ ಕರ್ತವ್ಯ ಮುಖ್ಯವಾಗಿದೆ ಎಂದು ಮಾಜಿ ಸಚಿವ ಮಾಲೀಕಯ್ಯಾ ಗುತ್ತೇದಾರ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಕನ್ನಡ ಭವನದ ಕಲಾ ಸೌಧದಲ್ಲಿ ಕನ್ನಡೋತ್ಸವದ ಪ್ರಯುಕ್ತ ಜರುಗಿದ ಸಮೂಹ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯನ್ನು ಒಂದು ಸಾಂಸ್ಕೃತಿಕ ಜಿಲ್ಲೆಯನ್ನಾಗಿಸುವ ವಿಜಯಕುಮಾರ್ ತೇಗಲತಿಪ್ಪಿ ಅವರ ಗುರಿ ಸಾಧನೆಗೆ ಸರ್ವರೂ ಕೈಜೋಡಿಸಬೇಕು. ಕನ್ನಡೋತ್ಸವ ಆಚರಿಸುವ ಮೂಲಕ ನಾಡಿನ ಸಾಂಸ್ಕೃತಿಕ ಮೌಲ್ಯ ಪಸರಿಸಿದಂತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಪಂ ನ ಮಾಜಿ ಅಧ್ಯಕ್ಷ ಭೀಮರಾವ ಟಿ.ಟಿ. ಮಾತನಾಡಿ, ಕಳೆದ ಮೂರು ವರ್ಷಗಳಿಂದ ಕಲೆ, ಸಾಹಿತ್ಯ, ಸಂಗೀತ ಸೇರಿ ಇನ್ನಿತರ ಕ್ಷೇತ್ರಗಳು ಶ್ರೀಮಂತಗೊಳಿಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅವಿರತವಾಗಿ ಶ್ರಮಿಸುತ್ತಿದೆ. ಜೀವ ಭಾವ ಒಂದಾಗಿಸಿ ಸರಿದೂಗಿಸಿ ಹಾಕುವ ಹೆಜ್ಜೆ ಗುರುತುಗಳು ನಾಡಿನ ಜನ ಮರೆಯಲಾಗದು. ಈ ಎರಡು ದಿನಗಳ ಕಾಲ ನಡೆಯುತ್ತಿರುವ ಕನ್ನಡೋತ್ಸವವನ್ನು ನೆಲ-ಜಲ ಸಂವರ್ಧನೆ ಸಂಕೇತವಾಗಿ ಆಚರಿಸುವಂತೆ ಹೇಳಿದರು. ಕಲೆ ಅಭಿವ್ಯಕ್ತತೆ ಜೀವ ತುಂಬಿದಾಗ ಸೌಂದರ್ಯ ಭಾವ ಮೂಡುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಜಾತಿ, ಧರ್ಮಗಳ ಗೋಡೆಗಳಾಚೆ ಬಂಧುತ್ವದ ನೆಲೆಯಲ್ಲಿ ಕನ್ನಡ ಕಟ್ಟುವ ಪ್ರಾಮಾಣಿಕ ಕಾರ್ಯ ಪರಿಷತ್ತು ಮಾಡುತ್ತಿದೆ ಎಂದರು.
ವೈದ್ಯ ಚಿಂತಕ ಡಾ.ಸಂಜೀವಕುಮಾರ ಎಂ.ವೈ.ಪಾಟೀಲ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ಎಂ.ಬಿ.ಪಾಟೀಲ, ಸಾಹಿತ್ಯ ಪ್ರೇರಕ ಶರಣಗೌಡ ಅಲ್ಲಮಪ್ರಭು ಪಾಟೀಲ, ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ ರೆಹಮಾನ್ ಪಟೇಲ್, ರವೀಂದ್ರಕುಮಾರ ಭಂಟನಳ್ಳಿ, ಶರಣರಾಜ ಛಪ್ಪರಬಂದಿ ಮಾತನಾಡಿದರು.
ರಾಜೇಂದ್ರ ಮಾಡಬೂಳ, ಪ್ರಭವ ಪಟ್ಟಣಕರ್, ಗಣೇಶ ಚಿನ್ನಾಕಾರ, ಬಾಬುರಾವ ಪಾಟೀಲ, ಧರ್ಮರಾಜ ಜವಳಿ, ರಮೇಶ ಬಡಿಗೇರ, ಎಂ.ಎನ್.ಸುಗಂಧಿ, ಶಿವಶರಣ ಹಡಪದ, ಸೈಯದ್ ನಜಿರುದ್ದೀನ್ ಮುತ್ತವಲಿ, ನವಾಬ್ ಖಾನ್, ಅಮೃತಪ್ಪ ಅಣೂರ ಕವಿ, ಶಿವಾನಮದ ಸುರವಸೆ, ಎಚ್.ಬಿ.ತೀರ್ಥೆ, ವೀರೇಂದ್ರಕುಮಾರ ಕೊಲ್ಲೂರ, ರೇವಣಸಿದ್ದಪ್ಪ ಜೀವಣಗಿ, ಶಿವಲಿಂಗಪ್ಪ ಅಷ್ಟಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಜಿಲ್ಲೆಯ 46 ಜನ ಹಿರಿಯ ಮತ್ತು ಯುವ ಚಿತ್ರಕಲಾವಿದರ ಸಮಾಜಮುಖಿ ಚಿತ್ರಕಲೆಗಳು ಪ್ರೇಕ್ಷಕರ ಗಮನ ಸೆಳೆದವು.