ಕಲಬುರಗಿ | ʼಲಿವ್‌ಇನ್ ಸಂಬಂಧʼಕ್ಕೆ ಕುಟುಂಬದ ವಿರೋಧ : ಯುವಕ ಆತ್ಮಹತ್ಯೆ

ಕಲಬುರಗಿ : ʼಲಿವ್‌ಇನ್ ಸಂಬಂಧʼಕ್ಕೆ ಮನೆಯವರು ವಿರೋಧ ಮಾಡಿದ್ದಕ್ಕಾಗಿ ಯುವಕನೋರ್ವ ರೈಲ್ವೆ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ನಾಗನಹಳ್ಳಿ ರೈಲ್ವೇ ಹಳಿ ಸಮೀಪ ನಡೆದಿದೆ.
ಮೃತ ಯುವಕನನ್ನು ತಾಲ್ಲೂಕಿನ ಕುಮಸಿ ಗ್ರಾಮದ ಶಿವಕುಮಾರ್ (28) ಎಂದು ಗುರುತಿಸಲಾಗಿದೆ.
ಶಿವಕುಮಾರ್ ಆತ್ಮಹತ್ಯೆಗೂ ಮುನ್ನ ʼಲಿವ್‌ಇನ್ ಸಂಬಂಧʼ ದಲ್ಲಿದ್ದ ಯುವತಿಗೆ ಕರೆ ಮಾಡಿದ್ದು, ಯುವತಿ ಸ್ಥಳಕ್ಕೆ ಬಂದು ರಕ್ಷಣೆಗೆ ಮುಂದಾಗಿದ್ದಳು ಎನ್ನಲಾಗಿದೆ. ಆತನನ್ನು ರಕ್ಷಣೆ ಮಾಡುವ ಸಂದರ್ಭದಲ್ಲಿ ಯುವತಿ ನೆಲಕ್ಕೆ ಬಿದ್ದು ಗಾಯಗೊಂಡಿದ್ದು, ಆಕೆಯನ್ನು ಇಲ್ಲಿನ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ವಾಡಿ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
Next Story





