ಕಲಬುರಗಿ | ಕನ್ನಡಿಗರಿಗೆ ಮಾತೃಭಾಷೆ ಕನ್ನಡ ಹೆತ್ತ ತಾಯಿಗೆ ಸಮ : ನೀಲಪ್ರಭಾ ಬಬಲಾದ

ಕಲಬುರಗಿ: ಕನ್ನಡಿಗರಿಗೆ ಮಾತೃಭಾಷೆ ಕನ್ನಡ ಹೆತ್ತ ತಾಯಿಗೆ ಸಮಾನ ಎಂದು ತಹಶೀಲ್ದಾರ್ ನೀಲಪ್ರಭಾ ಬಬಲಾದ ಹೇಳಿದರು.
ಶನಿವಾರ ಶಹಾಬಾದ್ ತಾಲೂಕಾಡಳಿತ ವತಿಯಿಂದ ನಗರದ ಸರಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಆಯೋಜಿಸಲಾದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ನಮಗೆ ತಾಯಿ ಜೀವ ಕೊಟ್ಟಿದ್ದಾಳೆ. ಈ ನಾಡು ನಮಗೆ ಅನ್ನ ಕೊಟ್ಟಿದೆ. ಈ ನಾಡಿನ ಭಾಷೆಯಾದ ಕನ್ನಡವನ್ನು ಬೆಳೆಸುವಂತ ಕೆಲಸವನ್ನು ಕನ್ನಡಿಗರಾದ ನಾವು ಮಾಡಬೇಕಿದೆ ಎಂದರು.
ಕನ್ನಡಕ್ಕೆ ತನ್ನದೇ ಆದ ವಿಶಿಷ್ಟ ಪರಂಪರೆಯಿದೆ. ಹಲವಾರು ಕವಿಗಳು ಕನ್ನಡಕ್ಕೆ ತನ್ನದೆಯಾದ ಕೊಡುಗೆ ನೀಡಿದ್ದಾರೆ. ಹಲವಾರು ಜನರು ಅನ್ಯ ಭಾಷಿಕರಾದರೂ ಕನ್ನಡದಲ್ಲಿಯೇ ಅತ್ಯಂತ ಶ್ರೇಷ್ಠ ಸಾಹಿತ್ಯವನ್ನು ರಚಿಸಿದ್ದಾರೆ. ಇದಕ್ಕೆ ಕಾರಣ ಕನ್ನಡ ಭಾಷೆ ಅತ್ಯಂತ ಶ್ರೀಮಂತಿಕೆಯಿಂದ ಕೂಡಿದ ಭಾಷೆ ಎಂಬುದನ್ನು ಮರೆಯಬಾರದು ಎಂದರು.
ತಾಪಂ ಇಒ ಮಲ್ಲಿನಾಥ ರಾವೂರ ಮಾತನಾಡಿ, ಜಾಗತೀಕರಣ, ಉದಾರೀಕರಣಗಳ ಪ್ರಭಾವ ಹಾಗೂ ಇಂಗ್ಲೀಷ್ ನ ವ್ಯಾಮೋಹ ಕನ್ನಡವನ್ನು ದುಸ್ಥಿತಿಗೆ ತಂದಿದೆ. ಇಂದು ಕನ್ನಡದ ರಕ್ಷಣೆ ಕನ್ನಡಿಗರಾದ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಮನೆಯಲ್ಲಿ ಪ್ರತಿಯೊಬ್ಬರೂ ಕನ್ನಡ ಬಳಸುವ ಸಂಕಲ್ಪ ಮಾಡಬೇಕಾಗಿದೆ ಎಂದರು.
ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಮಾತನಾಡಿ, ಕನ್ನಡ ಭಾಷೆ, ಕನ್ನಡ ನುಡಿ, ನೆಲ ಹಾಗೂ ಜಲದ ಬಗ್ಗೆ ಕೇವಲ ನವೆಂಬರ್ ತಿಂಗಳಿಗೆ ಹಾಡೊಕೆ, ಆಡೋಕೆ ಸಿಮೀತವಾಗಿದೆ. ಬಿಲದಿಂದ ಹೊರ ಬರುವ ಇಲಿಗಳಂತೆ ಆಗದೇ ಕನ್ನಡವನ್ನು ಬೆಳೆಸುವಲ್ಲಿ ಕಿಂಚಿತ್ತು ಪ್ರಾಮಾಣಿಕ ಪ್ರಯತ್ನ ನಮ್ಮೆಲ್ಲರದಿಂದಾಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಹಾಗೂ ಕನ್ನಡದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿ ಪ್ರಶಸ್ತಿ ಪತ್ರವನ್ನು ವಿತರಿಸಿದರು.
ನಗರಸಭೆ ಅಧ್ಯಕ್ಷರಾದ ಚಂಪಾಬಾಯಿ ಮೇಸ್ತ್ರಿ, ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಶಿವಪುತ್ರ ಕರಣಿಕ್, ಕಸಾಪ ತಾಲೂಕಾಧ್ಯಕ್ಷ ಶರಣಬಸಪ್ಪ ಕೋಬಾಳ ವೇದಿಕೆಯ ಮೇಲಿದ್ದರು. ಶಿಕ್ಷಕ ಬನ್ನಪ್ಪ ಸೈದಾಪೂರ ನಿರೂಪಿಸಿದರು, ಉಪತಹಸೀಲ್ದಾರ ಅಣವೀರಪ್ಪ ಸ್ವಾಗತಿಸಿದರು, ಹಣಮಂತರಾವ ಪಾಟೀಲ ವಂದಿಸಿದರು.
ಗ್ರೇಡ್ 2 ತಹಶೀಲ್ದಾರ್ ಗುರುರಾಜ ಸಂಗಾವಿ, ನಗರಸಭೆಯ ಸದಸ್ಯರಾದ ಡಾ.ಅಹ್ಮದ್ ಪಟೇಲ್, ಸಾಬೇರಾಬೇಗಂ, ಲಕ್ಷ್ಮಿಬಾಯಿ ಕುಸಾಳೆ, ಕರವೇ ಅಧ್ಯಕ್ಷರಾದ ಯಲ್ಲಾಲಿಂಗ ಹೈಯ್ಯಾಳಕರ್, ವಿಶ್ವರಾಜ ಫಿರೋಜಾಬಾದ, ಬಾಬುರಾವ ಪಂಚಾಳ, ಶರಣು ವಸ್ತ್ರದ್,ಮರಲಿಂಗ ಗಂಗಭೋ, ಪಿ.ಎಸ್.ಮೇತ್ರೆ,ಮಲ್ಕಣ್ಣ ಮುದ್ದಾ, ಕನಕಪ್ಪ ದಂಡಗುಲಕರ್, ಶರಣು ಪಗಲಾಪೂರ,ಸೂರ್ಯಕಾಂತ ಕೋಬಾಳ,ಶ್ರೀಕಾಂತ ಗಂಗಭೋ, ಮಲ್ಲಿಕಾರ್ಜುನ ಕಟ್ಟಿಮನಿ, ನಿಂಗಣ್ಣ ಸಂಗಾವಿಕರ ಇತರರು ಇದ್ದರು.
ಕಾರ್ಯಕ್ರಮದ ಮುಂಚಿತವಾಗಿ ನಾಡ ದೇವಿಯ ಭಾವಚಿತ್ರದ ಮೆರವಣಿಗೆಗೆ ತಹಶೀಲ್ದಾರ್ ನೀಲಪ್ರಭಾ ಬಬಲಾದ ಚಾಲನೆ ನೀಡಿದರು. ನಂತರ ನಗರದ ಮುಖ್ಯಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.







