Kalaburagi | ಪ್ರಿಯಾಂಕ್ ಖರ್ಗೆ ಜನ್ಮದಿನದ ಅಂಗವಾಗಿ ನ.18ರಿಂದ ಉಚಿತ ಕಂಪ್ಯೂಟರ್ ತರಬೇತಿ : ಶಾಂತರೆಡ್ಡಿ

ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಅಂಗವಾಗಿ ನಗರದ ರೆಡ್ಡಿಸ್ ಇನ್‌ಸ್ಟಿಟ್ಯೂಟ್ ಕಂಪ್ಯೂಟರ್ ತರಬೇತಿ ಕೇಂದ್ರ ಹಾಗೂ ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಸಂಘದ ಜಂಟಿ ಸಹಯೋಗದಲ್ಲಿ ಯುವಕ-ಯುವತಿಯರಿಗೆ ಒಂದು ತಿಂಗಳ ಉಚಿತ ಬೇಸಿಕ್ ಕಂಪ್ಯೂಟರ್ ತರಬೇತಿ ಆಯೋಜಿಸಲಾಗಿದೆ.
18ರಿಂದ 30 ವರ್ಷ ವಯೋಮಿತಿಯೊಳಗಿನ, 10ನೇ ತರಗತಿ ಅಥವಾ ಪಿಯುಸಿಯಲ್ಲಿ ಉತ್ತೀರ್ಣರಾಗಿರುವ ಅಥವಾ ಅನುತ್ತೀರ್ಣರಾಗಿರುವ ಹಾಗೂ ಮುಂದಿನ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗದ ಯುವಕ-ಯುವತಿಯರಿಗೆ ಮಾತ್ರ ಈ ತರಬೇತಿ ನೀಡಲಾಗುವುದು. ನವೆಂಬರ್ 18ರಿಂದ ತರಬೇತಿ ಆರಂಭವಾಗಲಿದ್ದು, ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರ ನೀಡಲಾಗುವುದು ಎಂದು ತರಬೇತಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಾಂತರೆಡ್ಡಿ ಪೇಠಶಿರೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತರು ಎಸೆಸೆಲ್ಸಿ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ ಹಾಗೂ ಆಧಾರ್ ಕಾರ್ಡ್‌ನ ಜೆರಾಕ್ಸ್ ಪ್ರತಿಗಳೊಂದಿಗೆ ಎರಡು ಭಾವಚಿತ್ರಗಳನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ರೆಡ್ಡಿಸ್ ಇನ್‌ಸ್ಟಿಟ್ಯೂಟ್, ಮೊದಲನೇ ಮಹಡಿ, ಜವಳಕರ್ ಕಾಂಪ್ಲೆಕ್ಸ್, ಲಾಲಗೇರಿ ಕ್ರಾಸ್, ಎಸ್.ಬಿ. ಟೆಂಪಲ್ ರಸ್ತೆ, ಕಲಬುರಗಿ ಇಲ್ಲಿಗೆ ಸಂಪರ್ಕಿಸಬಹುದು. ಮೊಬೈಲ್: 9845550722, 8970298888.




