ಕಲಬುರಗಿ | ಉಚಿತ ಫೋಟೋಗ್ರಾಫಿ–ವಿಡಿಯೋಗ್ರಾಫಿ ಕಾರ್ಯಗಾರ

ಕಲಬುರಗಿ : ನಗರದ ಮಾತೋಶ್ರೀ ನೀಲಗಂಗಮ್ಮ ಗುರುಪ್ಪಾ ಅಂದಾನಿ ಆರ್ಟ್ ಗ್ಯಾಲರಿಯಲ್ಲಿ ಗುರುವಾರ ಕಲಬುರಗಿ ಜಿಲ್ಲಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಮತ್ತು ಕರ್ನಾಟಕ ಛಾಯಾಗ್ರಾಹಕರ ಸಂಘ ಬೆಂಗಳೂರು ಅವರುಗಳ ಸಂಯುಕ್ತಾಶ್ರಯದಲ್ಲಿ ಒಂದು ದಿನದ ಫೋಟೋಗ್ರಾಫಿ, ವಿಡಿಯೋಗ್ರಾಫಿ ಹಾಗೂ ವ್ಯಕ್ತಿತ್ವ ವಿಕಸನ ಬಗ್ಗೆ ಉಚಿತ ಕಾರ್ಯಗಾರ ನಡೆಯಿತು.
ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಬಿ.ಎಂ.ರಾವೂರ, ಆಧುನಿಕ ಸಮಾಜದಲ್ಲಿ ಫೋಟೋಗ್ರಾಫಿ ವೃತ್ತಿಯನ್ನು ಮಾಡುವವರಿಗೆ ಸಮಾಜದಲ್ಲಿ ಗೌರವಯುತ ಸ್ಥಾನವಿದೆ, ಪ್ರತಿ ಕುಟುಂಬದ ಹಾಗೂ ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ದಿನ ಪತ್ರಿಕೆಗಳಲ್ಲಿ ಛಾಯಾಚಿತ್ರ ಮೂಲಕ ಸಾಮಾಜಿಕ ಬದಲಾವಣೆಗೆ ಪರಿಣಾಮ ಬೀರುತ್ತವೆ ಎಂದು ಹೇಳಿದರು.
ಕರ್ನಾಟಕ ಛಾಯಾಗ್ರಾಹಕರ ಸಂಘದ ತರಬೇತಿ ದಾರರಾದ ಛಾಯಾ ರತ್ನ ಕಾಶಿನಾಥ್ ಹಾಗೂ ಛಾಯಾ ಬಂಧು ದೀಪಕ್ ಅವರು ಮಾತನಾಡಿ, ಫೋಟೋಗ್ರಾಫಿ ಕಲೆಯಾಗಿದೆ, ಪ್ರತಿಯೊಬ್ಬ ಛಾಯಾಚಿತ್ರಗಾರರು ಗುಣಮಟ್ಟದ ಛಾಯಾಚಿತ್ರ ತೆಗೆಯುವುದರ ಮೂಲಕ ಗ್ರಾಹಕರ ಸ್ನೇಹಿ ವ್ಯಾಪಾರವನ್ನು ಸುಗಮವಾಗಿ ಮಾಡಬಹುದೆಂದು ತಿಳಿ ಹೇಳಿದರು.
ಕಲಬುರಗಿ ಜಿಲ್ಲಾ ಫೋಟೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ ಬಸವರಾಜ್ ತೋಟದ್ ಅಧ್ಯಕ್ಷತೆ ವಹಿಸಿದ್ದರು. ಗೌರವ ಸಲಹೆಗಾರರಾಗಿ ನಾಗೇಂದ್ರ ಸಕ್ಕರಗಿ, ಆಡಳಿತ ಮಂಡಳಿಯ ಸದಸ್ಯರಾಗಿ ನಾರಾಯಣ ಎಂ.ಜೋಶಿ, ಪ್ರಕಾಶ ಶೇರಖಾನೆ ಅವರನ್ನು ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಶತಮಾನೋತ್ಸವದ ಹಿರಿಯ ಛಾಯಾಗ್ರಾಹಕ ಮಡಿವಾಳಪ್ಪ ಹತ್ತುರೆ ಹಾಗೂ ಡಿ.ಬಿ ಶಿರವಾಳಕರ್ ಅವರಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ತರಬೇತಿ ಕೌಶಲ್ಯ ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ಉಪಾಧ್ಯಕ್ಷ ಸೈಯದ್ ನಸೀರುದ್ದೀನ್ ಪಟೇಲ್, ಕಾರ್ಯದರ್ಶಿ ಮುಹಮ್ಮದ್ ಅಪ್ಸರ್ ಪಟೇಲ್, ಖಜಾಂಚಿ ಶ್ರೀನಿವಾಸ್ ಮಡಕಿ, ಗೌರವ ಸಲಹೆಗಾರರಾದ ಚಂದ್ರಶೇಖರ್ ಬ್ಯಾಕೋಡ್, ಮುಹಮ್ಮದ್ ಅಯಾಜುದ್ದೀನ್ ಪಟೇಲ್, ಪ್ರಭುಲಿಂಗ ಜೂಮಣ್ಣ, ಪ್ರಕಾಶ್ ಜಂಗ್ಲೆ, ಶ್ರೀಕಾಂತ್ ಎಸ್.ಪಾಟೀಲ್, ವಿಜಯಕುಮಾರ್ ರಾಠೋಡ್, ಫಿರೋಜ್ ಖಾನ್, ಹಮೀದ್, ಅಂಬಾದಾಸ್ ಗಾಯ್ಕ್ವಾಡ್, ಆಕಾಶ್ ಪೂಜಾರಿ, ಸಿದ್ದರಾಮಯ್ಯ ಬೆಲ್ಲದಮಠ, ಮಲ್ಲಿಕಾರ್ಜುನ್ ತುಪ್ಪದ್ಮಟ್, ಗಣೇಶ್ ಎಸ್, ಈರಣ್ಣ ಕಿರಣಗಿ, ಬಸವ ರೆಡ್ಡಿ, ಮಾಕಾಶಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು ಎಂದು ಸಂಘದ ಕಾರ್ಯದರ್ಶಿ ಮಮ್ಮದ್ ಅಫ್ಸರ್ ಪಟೇಲ್ ಪತ್ರಿಕಾ ಪ್ರಕಟಣೆ ಮೂಲಕ ತಿಸಿದ್ದಾರೆ.







