ಕಲಬುರಗಿ| ಅ.15ರಿಂದ ಕೆಬಿಎನ್ ದರ್ಗಾದ ಕುಬ್ಲೊಲ್ಲಾಹ ಹುಸೈನಿ ಖಾಜಾ ಗಂಜ್ ಬಕ್ಷ (ರ.ಅ) ಉರೂಸ್

ಕಲಬುರಗಿ: ಕೆಬಿಎನ್ ದರ್ಗಾದ ಆವರಣದಲ್ಲಿರುವ ಜನಶೀನ್ ಹಜರತ್ ಖ್ವಾಜಾ ಬಂದಾ ನವಾಜ್ ಕುತುಬ್-ಉಲ್ ಅಕ್ತಾಬ್ ಹಜರತ್ ಸೈಯದ್ ಶಾ ಕುಬೂಲ್ ಉಲ್ಲಾ ಹುಸೇನಿ ಖ್ವಾಜಾ ಗುಂಜ್ ಬಕ್ಷ್ (ರ.ಅ) ದರ್ಗಾದ ಉರೂಸ್ ಅ.15, 16 ಮತ್ತು 17 ರಂದು ನಡೆಯಲಿದೆ ಎಂದು ರೋಜಾ ಎ ಕುರ್ದ್ ದರ್ಗಾ ಪೀಠಾಧಿಪತಿ ಹಜರತ್ ಸೈಯದ್ ಯದ್ದುಲ್ಲಾ ಹುಸೈನಿ ನಿಜಾಮ್ ಬಾಬಾ ಅವರು ತಿಳಿಸಿದ್ದಾರೆ.
ಈ ನಿಮಿತ್ತ ಅ.10 ರಿಂದ ಕಾರ್ಯಕ್ರಮ ಮತ್ತು ಸಭೆಗಳು ನಡೆಯುತ್ತಿದ್ದು, ಅ.14 ರಂದು ಅಜಮತ್ ಎ ಔಲಿಯಾ ಕಿರಾಮ ಸಮಾವೇಶ ನಡೆಯಲಿದೆ. ಅ.15 ರಂದು ಮುಂಜಾನೆ 5:30ಕ್ಕೆ ಖ್ವಾಜಾ ಗುಂಜ್ ಬಕ್ಷ್ ದರ್ಗಾದ ಒಳಗೆ ಮಹೆಫಿಲ್ ಖಿರಾತ್ ಮತ್ತು ನಾತ್, ಸಂಜೆ ಅಸರ್ ನಮಾಝ್ ನಂತರ ಗಂಧದ ಮೆರವಣಿಗೆ ಮೂಲಕ ರಾತ್ರಿ 1 ಗಂಟೆ ಸುಮಾರಿಗೆ ದರ್ಗಾಕ್ಕೆ ತಲುಪಲಿದ್ದು, ರಾತ್ರಿ 9 ಗಂಟೆಗೆ ಮಹೆಫಿಲ್ ಸಮಾ ಜರುಗಲಿದೆ.
ಅ.16 ರಂದು ದರ್ಗಾದ ಪೀಠಾಧಿಪತಿಗಳಿಂದ ಗಂಧದ ವಿಧಿವಿಧಾನಗಳು ನೆರವೇರಲಿದೆ. ನಂತರ ಸಮಾದ ನಂತರ ವಿಶೇಷ ಪ್ರಾರ್ಥನೆ ಮತ್ತು ರಾತ್ರಿ 10 ಗಂಟೆಗೆ ಮಹೆಫಿಲ್ ಸಮಾ ನಡೆಯಲಿದೆ. ಅ.17 ರಂದು ಸಾರ್ವಜನಿಕರಿಗೆ ವಿಶೇಷ ಪ್ರಾರ್ಥನೆ ಮತ್ತು ದರ್ಶನದ ಕಾರ್ಯಕ್ರಮಗಳು ನಡೆಯಲಿದೆ ಎಂದು ರೋಜಾ ಕುರ್ದ್ ದರ್ಗಾದ ಸಹಾಯಕ ಕಾರ್ಯದರ್ಶಿ ಮಿನಾಜ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





