Kalaburagi | ಮುಧೋಳದಲ್ಲಿ ಯುವಜನೋತ್ಸವ : ಗೋದುತಾಯಿ ಕಾಲೇಜಿಗೆ ಓವರ್ ಆಲ್ ರನ್ನರ್ ಅಪ್ ಪ್ರಶಸ್ತಿ

ಕಲಬುರಗಿ: ಬಾಗಲಕೋಟೆಯ ಮುಧೋಳದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ಹಾಗೂ ಬಿ.ವ್ಹಿ.ವ್ಹಿ. ಸಂಘದ ದಾನಮ್ಮದೇವಿ ಮಹಿಳಾ ಮಹಾವಿದ್ಯಾಲಯವು ಜ.16ರಿಂದ 18 ವರೆಗೆ ಆಯೋಜಿಸಿದ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವ 20ನೇ ಶಕ್ತಿ ಸಂಭ್ರಮದಲ್ಲಿ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯವು ಓವರ್ ಆಲ್ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದೆ.
ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ವಿವಿಧ ಸ್ಪರ್ಧೆಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಸಂಗೀತ ಸ್ಪರ್ಧೆ :
ವೆಸ್ಟರ್ನ್ ಗ್ರೂಫ್ ಸಾಂಗ್, ಭಾವಗೀತೆ, ವೆಸ್ಟರ್ನ್ ಇನ್ಸ್ಟ್ರೂಮೆಂಟಲ್ ಸೋಲೊದಲ್ಲಿ ಪ್ರಥಮ, ಇಂಡಿಯನ್ ಗ್ರೂಫ್ ಸಾಂಗ್ ನಲ್ಲಿ ದ್ವಿತೀಯ, ಇನ್ಸ್ಟ್ರೂಮೆಂಟಲ್ ಸೋಲೊ ನಾನ್ ಪರ್ಕಾಶನ್, ಕ್ಲಾಸಿಕಲ್ ವೋಕಲ್ ಸೋಲೊದಲ್ಲಿ ತೃತೀಯ.
ಸಾಹಿತ್ಯ ಸ್ಪರ್ಧೆ :
ವಾದವಿವಾದ ಸ್ಪರ್ಧೆಯಲ್ಲಿ ಪ್ರಥಮ, ಡಿಬೇಟ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಸಾಹಿತ್ಯ ಸ್ಪರ್ಧೆಯಲ್ಲಿ ವಿನ್ನರ್, ಸಂಗೀತ ಸ್ಪರ್ಧೆಯಲ್ಲಿ ರನ್ನರ್ ಪ್ರಶಸ್ತಿ ಪಡೆದಿದ್ದಾರೆ.
ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ವೀರಭದ್ರಯ್ಯ ಸ್ಥಾವರಮಠ, ಕೃಪಾಸಾಗರ ಗೊಬ್ಬುರ್, ಬಾಬುರಾವ ಮಡಿವಾಳ, ಪ್ರಭಾವತಿ ಎಚ್. ಸಹಕಲಾವಿದರಾಗಿ ಪ್ರಶಾಂತ ಗೋಲ್ಡಸ್ಮೀತ್, ಪೂಜಾ ಮಡಿವಾಳಪ್ಪ ಇವರ ನೇತೃತ್ವದಲ್ಲಿ ವಿದ್ಯಾರ್ಥಿನಿಯರಾದ ಪ್ರೀತಿ ಬಿರಾದಾರ, ಅಕ್ಷತಾ ಹಿರೇಮಠ, ಶಾಂಭವಿ ವಿಶ್ವನಾಥಮಠ, ಸ್ಪೂರ್ತಿ ಪಂಚಾಳ, ಸ್ನೇಹ, ಪ್ರಿಯಾಂಕಾ, ಮಹಾದೇವಿ, ಐಶ್ವರ್ಯ, ಸಾಧನ ಪವಾರ್, ಈಶ್ವರಿ, ಲಕ್ಷ್ಮಿ, ಬಸಮ್ಮ, ಭವಾನಿ ಪಾಟೀಲ, ಭಾಗ್ಯಶ್ರೀ, ನಾಗವೇಣಿ ಮತ್ತು ಪಲ್ಲವಿ ಯುವಜನೋತ್ಸವದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಹಣಮಂತ ಆರ್.ನಿರಾಣಿ, ವಿಶ್ರಾಂತ ಕುಲಪತಿ ಪ್ರೊ.ಗೀತಾ ಬಾಲಿ, ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಪ್ರೊ.ಹೂವಣ್ಣ ಸಕ್ಪಾಲ್, ಪ್ರೊ.ಪಿ.ಜಿ.ತಡಸದ್, ಪ್ರೊ.ಜ್ಯೋತಿ ಉಪಾಧ್ಯೆ, ಕಾಲೇಜಿನ ಪ್ರಾಚಾರ್ಯ ಪ್ರೊ.ಎಂ.ಎo.ಹಿರೇಮಠ ವೇದಿಕೆ ಮೇಲಿದ್ದರು.
ವಿದ್ಯಾರ್ಥಿನಿಯರ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಡಾ.ದಾಕ್ಷಾಯಿಣಿ ಎಸ್.ಅಪ್ಪ, 9ನೆಯ ಪೀಠಾಧಿಪತಿ ದೊಡ್ಡಪ್ಪ ಅಪ್ಪ, ಸಂಸ್ಥೆಯ ಕಾರ್ಯದರ್ಶಿ ಬಸವರಾಜ ದೇಶಮುಖ ಹರ್ಷವ್ಯಕ್ತಪಡಿಸಿ ಆಶೀರ್ವದಿಸಿದ್ದಾರೆ. ಮಹಾವಿದ್ಯಾಲಯ ಪ್ರಾಚಾರ್ಯೆ ಡಾ.ಸೀಮಾ ಪಾಟೀಲ, ಎಲ್ಲ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.







