ಕಲಬುರಗಿ ಸರ್ಕಾರಿ ಪಾಲಿಟೆಕ್ನಿಕ್: ವಿವಿಧ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಅರ್ಜಿ ಆಹ್ವಾನ

Photo credit: gpt.karnataka.gov.in
ಕಲಬುರಗಿ: ಕಲಬುರಗಿ ಸರ್ಕಾರಿ ಪಾಲಿಟೆಕ್ನಿಕ್ (ನೋಡಲ್ ಕೇಂದ್ರದಲ್ಲಿ) 2025-26ನೇ ಶೈಕ್ಷಣಿಕ ಸಾಲಿಗೆ ವಿವಿಧ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಸರ್ಕಾರಿ ಪಾಲಿಟೆಕ್ನಿಕ್ನ ಪ್ರಾಚಾರ್ಯರು ತಿಳಿಸಿದ್ದಾರೆ.
ಪ್ರವೇಶದ ಅರ್ಜಿ ನಮೂನೆ ಹಾಗೂ ಮಾಹಿತಿ ಪುಸ್ತಕವನ್ನು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ dtek.karnataka.gov.in ಅಥವಾ dtetech.karnataka.gov.in/kartechnical
ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಂಡು ಪುಸ್ತಕದಲ್ಲಿನ ಸೂಚನೆಗಳನ್ವಯ ಅಭ್ಯರ್ಥಿಗಳು ಅರ್ಜಿಗಳನ್ನು ಭರ್ತಿ ಮಾಡಿ ಅರ್ಜಿಯೊಂದಿಗೆ ಎಲ್ಲಾ ಶೈಕ್ಷಣಿಕ ದಾಖಲಾತಿಗಳ ಝೆರಾಕ್ಸ್ ಪ್ರತಿಗಳನ್ನು ಲಗತ್ತಿಸಿ ಖುದ್ದಾಗಿ 2025ರ ಮೇ 15 ರೊಳಗಾಗಿ ಪಾಲಿಟೆಕ್ನಿಕ ಕೇಂದ್ರಗಳಲ್ಲಿ ಸಿಬ್ಬಂದಿಗಳ ಸಹಕಾರದೊಂದಿಗೆ ಅರ್ಜಿಗಳನ್ನು ಸಲ್ಲಿಸಬೇಕು. ಅಭ್ಯರ್ಥಿಗಳು ತಮ್ಮ ಸ್ವ-ಇಚ್ಛೆಗನುಗುಣವಾಗಿ ಕೋರ್ಸ್ಗಳು ಆಯ್ಕೆ ಮಾಡಿ ಆಪಷನ್ ಎಂಟ್ರಿ ಮಾಡಬಹುದಾಗಿದೆ.
ಅರ್ಜಿಗಳನ್ನು ಸಲ್ಲಿಸುವಾಗ ಯಾವುದೇ ತರಹದ ಶುಲ್ಕವನ್ನು ಪಾವತಿಸಬೇಕಾಗಿರುವುದಿಲ್ಲ. ಅಭ್ಯರ್ಥಿಗಳು ಸೀಟುಗಳನ್ನು ಆಯ್ಕೆ ಮಾಡಿಕೊಂಡ ನಂತರ ಪ್ರವೇಶ ಪಡೆಯುವ ಸಮಯದಲ್ಲಿ ಅರ್ಜಿ ಶುಲ್ಕವನ್ನು ಸಹ ಪಾವತಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಪ್ರಾಚಾರ್ಯ ಭರತ-9483614450, ಉಪನ್ಯಾಸಕ ಉತ್ತಮಕುಮಾರ-9742452011, ಕುಲಸಚಿವ ಅಬ್ದುಲ್ ಜಮೀಲ್ ಖತೀಬ-9945871125 ಹಾಗೂ ಪ್ರ.ದ.ಸ. ಗಿರಿಮಲ್ಲಪ್ಪ ಬುಳ್ಳಾ-9343201655 ಇವರನ್ನು ಸಂಪರ್ಕಿಸಲು ಕೋರಲಾಗಿದೆ.





