Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಕಲಬುರಗಿ
  4. Kalaburagi | ಎತ್ತಿನ ಗಾಡಿಯಲ್ಲಿ...

Kalaburagi | ಎತ್ತಿನ ಗಾಡಿಯಲ್ಲಿ ಮದುಮಗನ ಮೆರವಣಿಗೆ: ‘ಉಳುವ ಯೋಗಿ ನೋಡಿರಲಿ’ ಹಾಡಿಗೆ ರೈತರ ಹೆಜ್ಜೆ!

ಆಧುನಿಕ ಮದುವೆ ಸಂಭ್ರಮದ ನಡುವೆ ಹಳೆಯ ಗ್ರಾಮೀಣ ಸಂಪ್ರದಾಯಕ್ಕೆ ಮರುಜೀವ

ಸಾಜಿದ್‌ ಅಲಿ/ವಾರ್ತಾಭಾರತಿಸಾಜಿದ್‌ ಅಲಿ/ವಾರ್ತಾಭಾರತಿ23 Nov 2026 12:40 PM IST
share
Kalaburagi | ಎತ್ತಿನ ಗಾಡಿಯಲ್ಲಿ ಮದುಮಗನ ಮೆರವಣಿಗೆ: ‘ಉಳುವ ಯೋಗಿ ನೋಡಿರಲಿ’ ಹಾಡಿಗೆ ರೈತರ ಹೆಜ್ಜೆ!

ಕಲಬುರಗಿ: ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಮದುವೆಗಳ ಹಳೆಯ ಸಂಪ್ರದಾಯಗಳು ಮರೆಯಾಗುತ್ತಿರುವ ಹೊತ್ತಿನಲ್ಲಿ, ಕಾಳಗಿ ತಾಲೂಕಿನ ಚಿಂಚೋಳಿ (ಹೆಚ್) ಗ್ರಾಮದಲ್ಲಿ ನಡೆದ ಮದುವೆಯೊಂದು ಗ್ರಾಮೀಣ ಸಂಸ್ಕೃತಿ, ಕೃಷಿ ಪರಂಪರೆ ಹಾಗೂ ರೈತರ ಒಗ್ಗಟ್ಟಿನ ಸಂದೇಶ ಸಾರಿತು.

ಗ್ರಾಮದ ಪ್ರಗತಿಪರ ರೈತ ಮಶಾಕ್ ಪಟೇಲ್ ಅವರ ಪುತ್ರ ಯೂಸುಪ್ ಪಟೇಲ್ ಅವರ ವಿವಾಹದ ಅಂಗವಾಗಿ ರವಿವಾರ (ನ.22) ಸಂಜೆ ಆಯೋಜಿಸಿದ್ದ ಮೆರವಣಿಗೆಯಲ್ಲಿ ಮದುಮಗನನ್ನು ಸಾಂಪ್ರದಾಯಿಕವಾಗಿ ಅಲಂಕರಿಸಿದ ಎತ್ತಿನ ಗಾಡಿಯಲ್ಲಿ ಕೂರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಹಲಗಿ ಬಾಜೆಯ ಸದ್ದು, ರೈತರ ಸಂಭ್ರಮದ ಕುಣಿತ ಹಾಗೂ ಗ್ರಾಮಸ್ಥರ ಉತ್ಸಾಹ ಮದುವೆಗೆ ವಿಶೇಷ ಮೆರುಗು ನೀಡಿತು.

ಇಂದಿನ ಮದುವೆ ಸಮಾರಂಭಗಳಲ್ಲಿ ದುಬಾರಿ ವಾಹನಗಳು, ಆಧುನಿಕ ಅಲಂಕಾರ ಮತ್ತು ವಿಭಿನ್ನ ಆಚರಣೆಗಳು ಸಾಮಾನ್ಯವಾಗಿವೆ. ಆದರೆ, ಪೂರ್ವಜರ ಕಾಲದಿಂದ ನಡೆದುಬಂದ ಗ್ರಾಮೀಣ ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂಬ ಆಶಯದಿಂದ ಮಶಾಕ್ ಪಟೇಲ್ ಕುಟುಂಬ ಎತ್ತಿನ ಗಾಡಿಯಲ್ಲಿ ಮದುಮಗನ ಮೆರವಣಿಗೆ ನಡೆಸುವ ಮೂಲಕ ಗಮನ ಸೆಳೆಯಿತು.

ಮೆರವಣಿಗೆಯ ಮತ್ತೊಂದು ವಿಶೇಷ ಆಕರ್ಷಣೆಯಾಗಿದ್ದು ರೈತರ ಕುಣಿತ. ರೈತರ ಬದುಕು, ಕೃಷಿಯ ಮಹತ್ವ ಹಾಗೂ ಅನ್ನದಾತನ ಶ್ರಮವನ್ನು ಸಾರುವ ‘ಉಳುವ ಯೋಗಿ ನೋಡಿರಲಿ’ ಎಂಬ ಜನಪ್ರಿಯ ಹಾಡು ಮೊಳಗುತ್ತಿದ್ದಂತೆ ರೈತರು ಹಾಗೂ ರೈತ ಮುಖಂಡರು ಹಲಗಿ ಬಾಜೆಯ ತಾಳಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಹಾಡಿನ ಸಾಹಿತ್ಯಕ್ಕೆ ತಕ್ಕಂತೆ ರೈತರು ಉತ್ಸಾಹದಿಂದ ಕುಣಿದು ಕುಪ್ಪಳಿಸಿದ ದೃಶ್ಯ ಮದುವೆಗೆ ಆಗಮಿಸಿದ್ದವರ ಗಮನ ಸೆಳೆಯಿತು.

ಒಂದು ಕಾಲದಲ್ಲಿ ಹಳ್ಳಿಗಳಲ್ಲಿ ಮದುವೆ ಎಂದರೆ ಎತ್ತಿನ ಗಾಡಿ, ಹಲಗಿ ಬಾಜೆ, ಬಂಧು-ಬಳಗದ ಸಂಭ್ರಮ ಹಾಗೂ ಗ್ರಾಮಸ್ಥರ ಸಾಮೂಹಿಕ ಪಾಲ್ಗೊಳ್ಳುವಿಕೆ ಪ್ರಮುಖ ಆಕರ್ಷಣೆಯಾಗಿದ್ದವು. ಕೃಷಿ ಬದುಕಿನ ಅವಿಭಾಜ್ಯ ಅಂಗವಾಗಿದ್ದ ಎತ್ತುಗಳು ಮದುವೆ ಸೇರಿದಂತೆ ಗ್ರಾಮೀಣ ಆಚರಣೆಗಳಲ್ಲಿಯೂ ಮಹತ್ವದ ಸ್ಥಾನ ಹೊಂದಿದ್ದವು. ಕಾಲ ಬದಲಾದಂತೆ ಇಂತಹ ಸಂಪ್ರದಾಯಗಳು ನಿಧಾನವಾಗಿ ಮರೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ನಡೆದ ಎತ್ತಿನ ಗಾಡಿ ಮೆರವಣಿಗೆ ಹಳೆಯ ಗ್ರಾಮೀಣ ಬದುಕಿನ ನೆನಪುಗಳನ್ನು ಮರುಕಳಿಸಿತು.

ಮೆರವಣಿಗೆಯಲ್ಲಿ ಸಮಾಜದ ಮುಖಂಡರಾದ ಇಮ್ತಿಹಾಜ್ ಅಲಿ ಹೇರೂರು, ರಸುಲ್ ಪಟೇಲ್, ರೈತ ಮುಖಂಡರಾದ ಶರಣಬಸಪ್ಪ ಮಮಷ್ಯೆಟ್ಟಿ, ಶಿವರಾಜ್ ಪಾಟೀಲ್, ಪವನ್ ಪಾಟೀಲ್, ಚಂದ್ರಶೇಖರ್ ತೆಂಗಳಿ, ಬಸವರಾಜ್ ರಾಕ, ಶಿವಕುಮಾರ್ ತೆಂಗಳಿ, ಮಲ್ಲು ತೆಲಿ, ಸುಂದರ್ ಸಾಗರ್, ರಮೇಶ್ ಹೆಬ್ಬಾಳ್, ರೇವಣಸಿದ್ಧ ದರಿ, ಮಲ್ಲು ಹೂಗಾರ್, ಅಶೋಕ್ ಪೂಜಾರಿ, ಜಗನ್ನಾಥ ತೇಲಿ, ಶರಣು ಪೂಜಾರಿ, ಶಂಕರ್ ತವಾಡಿ ಸೇರಿದಂತೆ ಅನೇಕ ರೈತರು, ರೈತ ಮುಖಂಡರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಸಂಪ್ರದಾಯದೊಂದಿಗೆ ಒಗ್ಗಟ್ಟಿನ ಸಂದೇಶ :

ಈ ಮದುವೆ ಕೇವಲ ಕುಟುಂಬದ ಸಂಭ್ರಮವಾಗಿ ಉಳಿಯದೆ, ಗ್ರಾಮೀಣ ಸಂಸ್ಕೃತಿಯ ಸಂರಕ್ಷಣೆ, ಕೃಷಿಯ ಮೇಲಿನ ಅಭಿಮಾನ ಹಾಗೂ ರೈತರ ಒಗ್ಗಟ್ಟಿನ ಸಂಕೇತವಾಗಿತ್ತು. ಎತ್ತುಗಳ ಮಹತ್ವ, ರೈತರ ಶ್ರಮ ಮತ್ತು ಹಳ್ಳಿಯ ಸಾಮೂಹಿಕ ಬದುಕಿನ ಸೊಗಡನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಇಂತಹ ಪ್ರಯತ್ನಗಳು ಗ್ರಾಮೀಣ ಪರಂಪರೆಯನ್ನು ಜೀವಂತವಾಗಿಡಲು ಸಹಕಾರಿಯಾಗಿವೆ ಎಂದು ರೈತ ಮುಖಂಡ ಕಾಳಗಿಯ ವೀರಣ್ಣ ಗಂಗಾಣಿ ಅಭಿಪ್ರಾಯಪಟ್ಟರು. ಇಂತಹ ಪ್ರಯತ್ನಕ್ಕೆ ಮುಂದಾದ ಪ್ರಗತಿಪರ ರೈತ ಮಶಾಕ್ ಪಟೇಲ್ ಅವರ ಕುಟುಂಬ ಹಾಗೂ ನವದಂಪತಿಗಳಾದ ಯೂಸುಪ್ ಪಟೇಲ್ ಮತ್ತು ಆಯಿಷಾ ಸಿದ್ದಿಕಾ ಅವರನ್ನು ಅಭಿನಂದಿಸಿದರು.

ದುಂದು ವೆಚ್ಚದ ಮದುವೆಗಳಿಗೆ ನಮ್ಮ ವಿರೋಧ :

“ದುಂದು ವೆಚ್ಚದ ಮದುವೆ ಸಂಪ್ರದಾಯಗಳಿಗೆ ನಾವು ವಿರೋಧವಾಗಿದ್ದೇವೆ. ನಾವು ರೈತರು, ಕೃಷಿಯೇ ನಮ್ಮ ವೃತ್ತಿ ಮತ್ತು ಬದುಕು. ಮದುವೆ ಸಮಾರಂಭದಲ್ಲಿ ಕಾರುಗಳಂತಹ ದುಬಾರಿ ವಾಹನಗಳನ್ನು ಬಳಸುವ ಬದಲು, ನಮ್ಮ ಬಳಿಯೇ ಇರುವ ಎತ್ತುಗಳು ಮತ್ತು ಎತ್ತಿನ ಗಾಡಿಯನ್ನು ಬಳಸಿಕೊಂಡು ಸಂಭ್ರಮಿಸಬೇಕು ಎಂಬ ಆಲೋಚನೆ ನಮ್ಮದಾಗಿತ್ತು. ನಮ್ಮ ಕೃಷಿ ಸಂಸ್ಕೃತಿಯ ಭಾಗವಾಗಿರುವ ಎತ್ತುಗಳು ಮತ್ತು ಎತ್ತಿನ ಗಾಡಿಯನ್ನು ಗೌರವಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದೇವೆ. ಈ ಭಾಗದಲ್ಲಿ ಈ ರೀತಿಯ ಮದುವೆ ನಡೆದಿರುವುದು ಇದೇ ಮೊದಲು. ಇದರಿಂದ ನಮಗೆ ಸಂತೋಷವಾಗಿದೆ” ಎಂದು ವರನ ತಂದೆ ಮಶಾಕ್ ಪಟೇಲ್ ತಿಳಿಸಿದರು.

Tags

KalaburagiGroomBullock CartFarmers
share
ಸಾಜಿದ್‌ ಅಲಿ/ವಾರ್ತಾಭಾರತಿ
ಸಾಜಿದ್‌ ಅಲಿ/ವಾರ್ತಾಭಾರತಿ

ಸಾಜಿದ್ ಅಲಿ ಅವರು 12 ವರ್ಷಗಳ ಪತ್ರಿಕೋದ್ಯಮ ಅನುಭವ ಹೊಂದಿದ್ದಾರೆ. ವಾರ್ತಾಭಾರತಿ ಮಂಗಳೂರು ಡೆಸ್ಕ್ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿರುವ ಇವರು, ಕಳೆದ ಏಳು ವರ್ಷಗಳಿಂದ ವಾರ್ತಾಭಾರತಿ ಡಿಜಿಟಲ್ ವೆಬ್‌ಸೈಟ್‌ನ ಕಲಬುರಗಿ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ವಾರ್ತಾಭಾರತಿ ಪತ್ರಿಕೆಯ ಜಿಲ್ಲಾ ವರದಿಗಾರರಾಗಿ ಹಾಗೂ ಕಲ್ಯಾಣ ಕರ್ನಾಟಕ ವಿಭಾಗದ ಕೋಆರ್ಡಿನೇಟರ್ ಆಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ

Next Story
X