ಕಲಬುರಗಿ | ಡೋಹರ್ ಕಕ್ಕಯ್ಯ ಸಮಾಜದ ನೂತನ ಸಮುದಾಯ ಭವನಕ್ಕೆ ಶಾಸಕರಿಂದ ಗುದ್ದಲಿ ಪೂಜೆ

ಕಲಬುರಗಿ: ವಾರ್ಡ ನಂ.34.ರ ಸುಂದರ ನಗರ ಬಡಾವಣೆಯಲ್ಲಿ 25 ಲಕ್ಷ ರೂ. ವೆಚ್ಚದ ಶಾಸಕರ ಅನುದಾನದಲ್ಲಿ ಹೈದರಾಬಾದ್ ಕರ್ನಾಟಕ ಡೋಹರ್ ಕಕ್ಕಯ್ಯ ಸಮಾಜದ (ರಿ) ನೂತನ ಸಮುದಾಯ ಭವನವನ್ನು ದಕ್ಷಿಣ ಮತ ಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಹಂಗಾಮಿ ಅಧ್ಯಕ್ಷರಾದ ಲಿಂಗೋಜಿ ಗಜರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಮಹಾನಗರದ ಪೂಜ್ಯ ಮಹಾಪೌರರಾದ ವರ್ಷ ರಾಜೀವ್ ಜಾನೆ, ಉಪ ಮಹಾಪೌರರಾದ ತೃಪ್ತಿ ಶಿವಶರಣಪ್ಪ ಲಾಖೆ, ಪಾಲಿಕೆ ಸದಸ್ಯರಾದ ರಾಗಮ್ಮ ಇನಾಮದಾರ, ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ವೇತಾ ಗಾಜರೆ, ಸಮಾಜದ ಮುಖಂಡರಾದ ಸೈಬಣ್ಣ ಹೋಳಕರ್, ಅರ್ಜುನ ಸೊನಕವಡೆ, ಅರುಣ ಗಜರೆ, ಅರುಣ ಇಂಗಳೆ, ಸೂರ್ಯಕಾಂತ್ ಸಾವಳ್ಕರ್, ಸಂದೀಪ ಹೋಟಕರ್, ಸಚಿನ್ ಹೋಟಕರ್, ಅನಿಲ ಸಾವಳ್ಕರ್ ಅಲ್ಲದೆ, ದೇವಿಂದ್ರ ದಡಕೆ, ಸಮಾಜದ ಮಹಿಳಾ ಅಧ್ಯಕ್ಷೆ ಸುಮಿತ್ರಾಭಾಯಿ ಹೋಟಕರ್, ಮಹಿಳಾ ಮುಖಂಡರಾದ ಅನುರಾದ ನೀನೆ, ಸೇರಿದಂತೆ ಸಮಾಜದ ಹಲವಾರು ಮುಖಂಡರು, ಯುವಕರು, ಮಹಿಳೆಯರು ಇದ್ದರು.





