ಕಲಬುರಗಿ | ಗುಲ್ಬರ್ಗಾ ವಿವಿ ಯುವಜನೋತ್ಸವ : ಶರಣಬಸವೇಶ್ವರ ವಿಜ್ಞಾನ ಕಾಲೇಜಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ

ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದ ಅಂತರ್ ಮಹಾವಿದ್ಯಾಲಯ ಯುವ ಜನೋತ್ಸವ 2025ರಲ್ಲಿ ಇಲ್ಲಿನ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾರೆ.
ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದ ಕಾಲೇಜಿನ ವಿದ್ಯಾರ್ಥಿಗಳಿಗೆ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ ಹಾಗೂ ಕಾರ್ಯದರ್ಶಿಗಳಾದ ಬಸವರಾಜ ದೇಶಮುಖ್ ಅವರು ಅಭಿನಂದಿಸಿದರು.
27 ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಚಾಂಪಿಯನ್ ಆಗಿ ಹೊಮ್ಮಿದರು.
ಮ್ಯೂಸಿಕ್ ಇವೆಂಟ್ಸ್ ರನ್ನರ್ ಅಪ್, ಡಾನ್ಸ್ ಇವೆಂಟ್ಸ್ ವಿನ್ನರ್, ಥಿಯೇಟರ್ ಇವೆಂಟ್ಸ್ ವಿನ್ನರ್, ಲೀಟರರಿ ಇವೆಂಟ್ಸ್ ರನ್ನರ್ ಆಫ್, ವೆಸ್ಟೆರ್ನ್ ಗ್ರೂಪ್ ಸಾಂಗ್ ಸಾಕ್ಷಿ ಚಿಕ್ಕಳ್ಳಿ ಮತ್ತು ತಂಡ ಪ್ರಥಮ, ವೆಸ್ಟೆರ್ನ್ ಒಕಲ್ ಸೋಲೋ ಪಲ್ಲವಿ ಪಾಟೀಲ್ ಪ್ರಥಮ, ವೆಸ್ಟೆರ್ನ್ ಇನ್ಸ್ಟ್ರುಮೆಂಟಲ್ ಸೋಲೋ ಮಧುರಾ ಶೆಟ್ಟಿ ಪ್ರಥಮ,ಕ್ಲಾಸಿಕಲ್ ಇನ್ಸ್ಟ್ರುಮೆಂಟಲ್ ಪರ್ಕುಶನ್ ಅಭಿಷೇಕ್ ಧರ್ಮಾಪುರ್ ತೃತೀಯ, ಫೋಕ್ ಆರ್ಕೆಸ್ಟ್ರಾ ಸ್ನೇಹಾ ಜಾಧವ್ ಮತ್ತು ತಂಡ ಪ್ರಥಮ, ಫೋಕ್ ಡಾನ್ಸ್ ಸ್ನೇಹ ಮತ್ತು ತಂಡ ತೃತಿಯ, ಕ್ಲಾಸಿಕಲ್ ಡಾನ್ಸ್ ಕುಸುಮಾ ದ್ವಿತೀಯ, ಕ್ರಿಯೇಟಿವ್ ಕೊರಿಯೋಗ್ರಾಫಿ ಪ್ರಥಮ ಭವಾನಿ ಮತ್ತು ತಂಡ, ಡ್ರಾಮಾ ರಜತ್ ಐನೋಳಿ ಮತ್ತು ತಂಡ ಪ್ರಥಮ, ಸ್ಕೀಟ್ ಕಲ್ಯಾಣ್ ಸಿತಾಳಗೆರಿ ಮತ್ತು ತಂಡ ಪ್ರಥಮ, ಮಿಮಿಕ್ರಿ ದೀಪಿಕಾ ತಮಶೆಟ್ಟಿ ಪ್ರಥಮ.
ಭಾಷಣ ಸ್ಪರ್ಧೆ ಇಂಗ್ಲಿಷ್ ಭವಾನಿ ಪ್ರಥಮ, ಡಿಬೇಟ್ ಇಂಗ್ಲಿಷ್ ಸ್ಪರ್ಧೆ ಶ್ರೀದೇವಿ ಪ್ಯಾಟಿ ಮತ್ತು ವೈಷ್ಣವಿ ಅಲ್ಲೂರ್ ದ್ವಿತೀಯ, ಡಿಬೇಟ್ ಹಿಂದಿ ಸಾಕ್ಷಿ ಮತ್ತು ಸುಮನ್ ತೃತೀಯ. ಪೋಸ್ಟರ್ ಮೇಕಿಂಗ್ ಸಿಂಚನಾ ತೃತೀಯ, ರಂಗೋಲಿ ಲಕ್ಷ್ಮೀ ಸಿ.ಕೆ ತೃತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.







