ಕಲಬುರಗಿ | ಗುರಿ ತಲುಪಲು ಕಠಿಣ ಪರಿಶ್ರಮ ಅಗತ್ಯ : ಎ.ಕೆ.ರಾಮೇಶ್ವರ

ಕಲಬುರಗಿ: ನಗರದ ರಮಾಬಾಯಿ ಜಹಾಗೀರದಾರ (ಆರ್.ಜೆ) ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವತಿಯಿಂದ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ “ಪರಿಚಯ” ಎಂಬ ಸ್ವಾಗತ ಸಮಾರಂಭವನ್ನು ನೀಲಾಂಬಿಕಾ ಕಲ್ಯಾಣ ಮಂಟಪದಲ್ಲಿ ನಡೆಸಲಾಯಿತು.
ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಮಹತ್ವದ ಘಟ್ಟ ಇದಾಗಿದ್ದು, ವಿದ್ಯಾರ್ಥಿಗಳು ಗುರಿ ತಲುಪಬೇಕಾದರೆ ಕಠಿಣ ಪರಿಶ್ರಮ ಅಗತ್ಯ. ವಿದ್ಯಾರ್ಥಿಗಳಿಗೆ ಪ್ರಶಸ್ತಿ, ಬಹುಮಾನ ಕೊಡುವ ಕಾಯಕ ಶ್ಲಾಘನೀಯ ಎಂದು ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ ಹೇಳಿದರು.
ಡಾ.ಭುರ್ಲಿ ಪ್ರಹ್ಲಾದ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಖ್ಯಾತ ವೈದ್ಯ ಡಾ.ಕೆ.ವಿಜಯ ಮೋಹನ್, ಕೆ.ಎನ್ ಕುಲಕರ್ಣಿ, ಆಡಳಿತ ಮಂಡಳಿಯ ಸದಸ್ಯರಾದ ಆರ್.ಜಿ.ಕುಲಕರ್ಣಿ, ಸಂಜೀವ ಕುಮಾರ ಕರಿಕಲ್, ಪ್ರಾಚಾರ್ಯ ಡಾ.ಭುರ್ಲಿ ಪ್ರಹ್ಲಾದ ಹಾಗೂ ಜ್ಯೋತಿ ಪಿ.ಭುರ್ಲಿ, ಜ್ಯೋತಿ ಬೆಳಿಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಂಜಾರಾ ನೃತ್ಯವನ್ನು ರಕ್ಷಿತಾ ಮತ್ತು ಅಂಕಿತಾ, ಕಲ್ಪನಾ ನೃತ್ಯವನ್ನು ಪಲ್ಲವಿ ಹಾಗೂ ಸಂಗಡಿಗರು ಹಾಗೂ ವಿವಿಧ ನೃತ್ಯ ಕಲಾ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡಿದವು. ಕೇದಾರ ದೀಕ್ಷಿತ್ ನಿರೂಪಿಸಿದ್ದರು. ದಿವ್ಯಾ ಪಟವಾರಿ ಸ್ವಾಗತಿಸಿದ್ದರು. ಸಂತೋಷ ಮಠಪತಿ ವಂದಿಸಿದ್ದರು. ಕಾಲೇಜಿನಲ್ಲಿ ಅಭ್ಯಾಸ ಮಾಡಿ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆ, ನೀಟ್ ಮತ್ತು ಕೆ.ಸಿ.ಇ.ಟಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸತ್ಕರಿಸಲಾಯಿತು.







