ಕಲಬುರಗಿ| ಹಾಸ್ಟೆಲ್ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹಾಸ್ಟೆಲ್ ಕಾರ್ಮಿಕರಿಗೆ ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘ ಹಾಗೂ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಸೆಂಟರ್ (Aiutuc) ವತಿಯಿಂದ ಜಿಲ್ಲಾಧಿಕಾರಿಯ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಆಗ್ರಹಿಸಲಾಯಿತು.
ಎಲ್ಲಾ ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನ 36 ಸಾವಿರ ನಿಗದಿಪಡಿಸಬೇಕು, ಹೊರಗುತ್ತಿಗೆ ಪದ್ಧತಿಯನ್ನು ರದ್ದತಿ ಮಾಡಿ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಿ, ಸೇವಾಭದ್ರತೆ ಒದಗಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಸೆಂಟರ್ ನ ಜಿಲ್ಲಾಧ್ಯಕ್ಷ ವಿ.ಜಿ ದೇಸಾಯಿ, ಗುತ್ತಿಗೆ ಕಾರ್ಮಿಕರಿಗೆ ಸರಿಯಾಗಿ ಸಂಬಳ ಆಗುತ್ತಿಲ್ಲ. ಸರ್ಕಾರ ವೇತನ ನೀಡುತ್ತಿದ್ದರೂ ಮಧ್ಯವರ್ತಿಗಳ ಹಾವಳಿಯಿಂದ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಹಾಗಾಗಿ ಸರ್ಕಾರ, ಸಹಕಾರಿ ಸಂಘ ರಚಿಸಿ, ಕಾರ್ಮಿಕರಿಗೆ ಸಿಗುವ ಸಮವಸ್ತ್ರ ಸೇರಿದಂತೆ ಇತರೆ ಸೌಲಭ್ಯಗಳು ಸಿಗುತ್ತವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ರಾಘವೇಂದ್ರ ಎಂ.ಜಿ, ಶರಣು ಹೇರೂರು, ಬಸವರಾಜ ಹುಳಗೊಳ, ರಮೇಶ್ ಕುಂಬಾರ, ಸಂಗಮ್ಮ, ಸಂತೋಷ್ ದೊಡ್ಡಮನಿ, ರಾಜು ಒಡೆಯರ್, ಶರಣಮ್ಮ ಕಟ್ಟಿಮನಿ, ಅಶೋಕ್ ಅಂಬಲಗಿ, ಮಲ್ಲಮ್ಮ ನಾಟಿಕಾರ, ಮಾರುತಿ ಬೋವಿ, ಮಲ್ಲಿಕಾರ್ಜುನ್ ಜೇವರ್ಗಿ ಸೇರಿದಂತೆ ಮತ್ತಿತರರು ಇದ್ದರು.







