ಕಲಬುರಗಿ | ನೀಟ್, ಜೆಇಇ, ಕೆ-ಸಿಇಟಿ ತರಬೇತಿಗೆ ಐಡಿಯಲ್ ವಿಟ್ಜಿ ಅಕಾಡೆಮಿಯಿಂದ ಅರ್ಜಿ ಆಹ್ವಾನ

ಕಲಬುರಗಿ: 2026-27ನೇ ಸಾಲಿನ ನೀಟ್, ಜೆಇಇ, ಕೆ-ಸಿಇಟಿ ತರಬೇತಿ ಪ್ರವೇಶಾತಿಗೆ ಐಡಿಯಲ್ ವಿಟ್ಜಿ ಅಕಾಡೆಮಿ (IDEAL VIITJEE ACADEMY)ಯಿಂದ ನೀಡುವ ಪಿಯುಸಿ ಇಂಟಿಗ್ರೇಟೆಡ್ ಹಾಗೂ ಕ್ರ್ಯಾಶ್ ಕೋರ್ಸ್ ಗೆ ಅರ್ಜಿ ಆಹ್ವಾನಿಸಲಾಗಿದ್ದು, ಬಡವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅಕಾಡೆಮಿಯ ಸಂಸ್ಥಾಪಕ ಸಂಸ್ಥಾಪಕ ಮುಜಾಹಿದ್ ಪಾಷಾ ಖುರೇಷಿ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದರ್ ನ ಬಸವಕಲ್ಯಾಣದಲ್ಲಿ ಪ್ರಾರಂಭವಾದ ಸಂಸ್ಥೆ ಈಗ 25 ವರ್ಷ ಪೂರೈಸುತ್ತಿದೆ. ಹೀಗೆ ರಚನಾತ್ಮಕ ತರಬೇತಿ ನೀಡುವ ನಮ್ಮ ಸಂಸ್ಥೆಯು ಈ ಭಾಗದ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಗೆ ಕಲಬುರಗಿ ಶಾಖೆಯಿಂದ ಎರಡು ಹಂತದಲ್ಲಿ ಪ್ರವೇಶ ಪರೀಕ್ಷೆ (ಐ-ಸ್ಯಾಟ್) ನಡೆಸಲಿದ್ದು, ಅರ್ಹ ವಿದ್ಯಾರ್ಥಿಗಳು ಆನ್ ಲೈನ್, ಕ್ಯೂಆರ್ ಕೋಡ್ ಅಥವಾ ಸಂಸ್ಥೆಯ ಕಚೇರಿಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬೇಕು ಎಂದರು.
ಜ.11 ಹಾಗೂ ಜ.18 ರಂದು ಎರಡು ಹಂತದಲ್ಲಿ ನಡೆಯಲಿರುವ ಪರೀಕ್ಷೆಯು 360 ಅಂಕಗಳ 90 ಪ್ರಶ್ನೆಗಳುಳ್ಳ ಪ್ರಶ್ನೆಪತ್ರಿಕೆ ಇರುತ್ತದೆ, ಇದಕ್ಕೆ 2 ಗಂಟೆ ಕಾಲ ಸಮಯಾವಕಾಶ ಇರಲಿದೆ. ಇದರಲ್ಲಿ ಹೆಚ್ಚಿನ ಅಂಕ ಪಡೆದಿರುವ ಮೂವರಿಗೆ ವಿದ್ಯಾರ್ಥಿ ವೇತನ ನೀಡಲಿದ್ದೇವೆ. ಅರ್ಹ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ರಿಯಾಯ್ತಿ ದರದಲ್ಲಿ ಪ್ರವೇಶವೂ ಸಹ ಕೊಡುವುದಾಗಿ ತಿಳಿಸಿದರು.
ಕಲ್ಯಾಣ ಕರ್ನಾಟಕದಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಕಳಪೆ ಫಲಿತಾಂಶ ಗಮನಿಸಿದರೆ ಇಲ್ಲಿನ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿಯ ಅವಶ್ಯಕತೆ ಇದೆ, ಇಂತಹ ವೇಳೆಯಲ್ಲಿ ನುರಿತ ಉಪನ್ಯಾಸಕರನ್ನು ಒಳಗೊಂಡಿರುವ ನಮ್ಮ ಅಕಾಡೆಮಿಯು ವಿದ್ಯಾರ್ಥಿಗಳ ಜ್ಞಾನ, ಕೌಶಲ್ಯ, ಮನೋಸ್ಥೈರ್ಯ ಹೆಚ್ಚಿಸಲು ದೊಡ್ಡ ಹೆಜ್ಜೆ ಇಟ್ಟಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕ ಮುಜ್ತಾಹೀದ್ ಉಮರ್, ಆರ್.ಕೆ ಹುಡಗಿ, ರಸಾಯನಶಾಸ್ತ್ರದ ನರೇನ್ ಕುಮಾರ್, ಕೃಷ್ಣ ಕಿಶೋರ್, ಶಾಂತಲಿಂಗ ಮಠಪತಿ ಇದ್ದರು.
ಆಕರ್ಷಕ ಬಹುಮಾನ ಘೋಷಣೆ :
ಪ್ರವೇಶ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆಯುವ ಮೂಲಕ ಗಮನ ಸೆಳೆಯುವ ಮೊದಲ ಮೂರು ಸ್ಥಾನಗಳಿಗೆ ಆಕರ್ಷಕ ಬಹುಮಾನ ಘೋಷಿಸಲಾಗಿದೆ, ಪ್ರಥಮ ಸ್ಥಾನ - 25,000 ರೂ., ದ್ವಿತೀಯ- 10,000 ರೂ. ಹಾಗೂ ತೃತೀಯ ಸ್ಥಾನ ಪಡೆದವರಿಗೆ 5,000 ರೂ. ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತದೆ.
ಮುಝಾಹೀದ್ ಪಾಷಾ ಖುರೇಷಿ (ಐಡಿಯಲ್ ವಿಟ್ಜಿ ಅಕಾಡೆಮಿ ಸಂಸ್ಥಾಪಕ)







