ಕಲಬುರಗಿ | ಒಳಮೀಸಲಾತಿ ಜಾರಿ : ಛಲವಾದಿ ಮಹಾಸಭಾದಿಂದ ಸಂಭ್ರಮಾಚರಣೆ

ಕಲಬುರಗಿ: ರಾಜ್ಯ ಸರ್ಕಾರದ ಒಳಮೀಸಲಾತಿ ಜಾರಿಯಿಂದ ಆಳಂದ ಪಟ್ಟಣದಲ್ಲಿ ಛಲವಾದಿ ಮಹಾಸಭಾ ವತಿಯಿಂದ ಸಂಭ್ರಮಾಚರಣೆ ನಡೆಯಿತು.
ಆಳಂದ ಪಟ್ಟಣದ ಬಸ್ ನಿಲ್ದಾಣ ಎದುರಿನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಮುದಾಯದ ಸದಸ್ಯರು ಈ ಐತಿಹಾಸಿಕ ಕ್ಷಣವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಮಹದೇವ ಮೋಘಾ ಮಾತನಾಡಿ, "ಒಳಮೀಸಲಾತಿ ಜಾರಿಯಿಂದ ನಮ್ಮ ಸಮುದಾಯಕ್ಕೆ ನ್ಯಾಯ ದೊರೆತಿದೆ. ಈ ಹೋರಾಟಕ್ಕೆ ಕೈಜೋಡಿಸಿದ ಎಲ್ಲರಿಗೂ ಧನ್ಯವಾದಗಳು. ಸಮುದಾಯದವರು ಇದರ ಸದುಪಯೋಗ ಪಡೆದುಕೊಳ್ಳಬೇಕು," ಎಂದು ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ತಾಲೂಕು ಛಲವಾದಿ ಮಹಾಸಭಾದ ಅಧ್ಯಕ್ಷ ಚಂದ್ರಕಾಂತ್ ಜಂಗ್ಲೆ ಮಾತನಾಡಿ, "ಮೂರು ದಶಕಗಳ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ. ಒಳಮೀಸಲಾತಿಯಿಂದ ನಮ್ಮ ಸಮಾಜ ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಅಭಿವೃದ್ಧಿಯಾಗಲಿದೆ," ಎಂದು ಸಂತಷ ವ್ಯಕ್ತಪಡಿಸಿದರು.
ಮಲ್ಲಿಕಾರ್ಜುನ ಬೋಳಣಿ ಮಾತನಾಡಿ, "ನಮ್ಮ ದೀರ್ಘಕಾಲದ ಹೋರಾಟ ಫಲ ನೀಡಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳೋಣ," ಎಂದರು.
ಡಾ. ಶಿವಪ್ಪ, ಮಲ್ಲಿಕಾರ್ಜುನ ಶೃಂಗೇರಿ ಮಾತನಾಡಿದರು..
ಈ ವೇಳೆ ಪಂಡಿತ್ ದೋಣಿ, ಸುಧಾಕರ್‍ಮೊದಲೆ, ದತ್ತಾ ಮೇಲಿನಕೇರಿ, ರತಿಕಾಂತ್, ಭರತ್ ಸಜ್ಜನ್, ಅಂಬುಶ ಮಾದನಹಿಪ್ಪರಗಾ, ಲಕ್ಷ್ಮಿಕಾಂತ್ ಭಜನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.







