Kalaburagi | ಲೋಕೋಪಯೋಗಿ ಭವನದಲ್ಲಿ ಸ್ವಾತಂತ್ರ್ಯೋತ್ಸವ, ಸಂಗೊಳ್ಳಿ ರಾಯಣ್ಣ ಜಯಂತಿ ಆಚರಣೆ

ಕಲಬುರಗಿ: ನಗರದ ಲೋಕೋಪಯೋಗಿ ಭವನದಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೋಕೋಪಯೋಗಿ ಇಲಾಖೆಯ ಸಂಪರ್ಕ ಮತ್ತು ಕಟ್ಟಡ ಈಶಾನ್ಯ ವಲಯ, ಕಲಬುರಗಿಯ ಮುಖ್ಯ ಎಂಜಿನಿಯರ್ ಸುಭಾಷ್ ಎಲ್. ಶಿಕ್ಷಣಕರ ವಹಿಸಿದ್ದರು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶಭಕ್ತಿ, ಪರಿಸರ ಸಂರಕ್ಷಣೆ ಹಾಗೂ ಇಲಾಖೆಯ ಸಿಬ್ಬಂದಿ ಕಲ್ಯಾಣಕ್ಕೆ ಆದ್ಯತೆ ನೀಡುವ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗೆ ಪ್ರಶಸ್ತಿ ವಿತರಿಸಿ ಗೌರವಿಸಲಾಯಿತು. ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಉದ್ದೇಶದಿಂದ 110 ಸಸಿಗಳನ್ನು ನೆಡುವ ಕಾರ್ಯಕ್ರಮ ಆಯೋಜಿಸಲಾಯಿತು.
ಇದೇ ವೇಳೆ ಇಲಾಖೆಯ ಮಹಿಳಾ ಸಿಬ್ಬಂದಿಗಾಗಿ ನೂತನವಾಗಿ ನಿರ್ಮಿಸಲಾದ ವಿಶ್ರಾಂತಿ ಕೊಠಡಿಯನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್‌ಗಳಾದ ರಾಹುಲ್ ಕಾಂಬಳೆ, ಶ್ರೀಧರ್ ಸರ್ವಾಡ್, ಶ್ರೀಮಂತ ಬೆನ್ನೂರ್ ಹಾಗೂ ಮೊಹಮ್ಮದ್ ಇಬ್ರಾಹಿಂ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಗಳಾದ ಶಿವರಾಜ್ ಪಾಟೀಲ್, ಬಸವರಾಜ್ ಹಾಗೂ ಉಷಾ ರಾಣಿಪಾಟೀಲ್, ಖುಷಿದ್ ಬಾನು ಹಾಗೂ ಜಯರಾಜ್ ಆರ್.ಎನ್., ತಾಂತ್ರಿಕ ಸಹಾಯಕ ನಾಗರಾಜ್ ಸೇರಿದಂತೆ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಕರ್ನಾಟಕ ಇಂಜಿನಿಯರಿಂಗ್ ಸೇವಾ ಸಂಘದ ಕಲಬುರಗಿ ಘಟಕದ ಅಧ್ಯಕ್ಷ ಕಾಳಪ್ಪ ಹಾಗೂ ಕರ್ನಾಟಕ ರಾಜ್ಯ ಲೋಕೋಪಯೋಗಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶರಣರಾಜ ಛಪ್ಪರಬಂದಿ ಸೇರಿದಂತೆ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಂಘದ ಹಿರಿಯ ಉಪಾಧ್ಯಕ್ಷ ಭೀಮಣ್ಣ ನಾಯಕ್, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಸಂಗೊಳ್ಳಗಿ, ಉಜ್ಜರ್ ಅಹಮದ್ ಖಾನ್, ಕಮಲಾಕರ್ ಆನೆಗುಂದಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಕಟ್ಟಿಮನಿ, ಖಜಾಂಚಿ ಉಮಾಕಾಂತ ಹಿರೋಳ್ಳಿ, ಕಾರ್ಯದರ್ಶಿ ಕಿಟೇಂದ್ರ, ಸಹಕಾರ್ಯದರ್ಶಿಗಳಾದ ಶಶಿನಾಥ ಸೊನೆ ಹಾಗೂ ಖಾಸಿಂ ಅಲಿ, ಸಂಘಟನಾ ಕಾರ್ಯದರ್ಶಿಗಳಾದ ಅಕ್ಟರ್ ಪಾಶಾ ಹಾಗೂ ಅಶೋಕ ಸಜ್ಜನ, ಕ್ರೀಡಾ ಕಾರ್ಯದರ್ಶಿ ರಾಮಕೃಷ್ಣ ಸಿಂಗ್, ಸಲಹೆಗಾರರಾದ ಶರಣಗೌಡ ಪಾಟೀಲ್ ಹಾಗೂ ಮಂಜುನಾಥ ಧೂಳೆ, ಕಾರ್ಯಕಾರಿ ಸದಸ್ಯರಾದ ನಾಗೇಂದ್ರಪ್ಪ, ರಾಜಕುಮಾರ್, ಅಕ್ಷತ ಜಮ್‌ಶೆಟ್ಟಿ, ಪಾಂಡುರಂಗ ಕುಲಕರ್ಣಿ, ಕಾರ್ತಿಕ್, ಪ್ರಭು ರಾಥೋಡ್, ಮಹಮ್ಮದ್ ಮಜಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಕರ್ನಾಟಕ ರಾಜ್ಯ ಲೋಕೋಪಯೋಗಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶರಣರಾಜ ಛಪ್ಪರಬಂದಿ ನೆರವೇರಿಸಿದರು.






