ಕಲಬುರಗಿ | ಜಗತ್ತಿನ ಅದ್ಭುತ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮುತ್ತಿದೆ : ಶಶೀಲ್ ನಮೋಶಿ

ಕಲಬುರಗಿ: ಆರ್ಥಿಕ ಕ್ಷೇತ್ರದಲ್ಲಿ, ನಮ್ಮ ಸಾಧನೆಗಳು ಹೆಚ್ಚು ಗಮನಾರ್ಹವಾಗಿವೆ. ಕಳೆದ ಹಣಕಾಸು ವರ್ಷದಲ್ಲಿ ಶೇ. 6.5 ರ ಜಿಡಿಪಿ ಬೆಳವಣಿಗೆ ದರದೊಂದಿಗೆ, ಭಾರತವು ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ವೇಗವಾಗಿ ಬೆಳೆಯುತ್ತಿದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಹೇಳಿದರು.
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಕೇಂದ್ರ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕೇಂದ್ರ ಸರ್ಕಾರವು ಉತ್ತಮ ಆಡಳಿತದ ಮೂಲಕ ಹೆಚ್ಚಿನ ಸಂಖ್ಯೆಯ ಜನರನ್ನು ಬಡತನದಿಂದ ಹೊರತಂದಿದೆ. ದುರ್ಬಲರಿಗೆ ಸರ್ಕಾರವು ಹಲವಾರು ಕಲ್ಯಾಣ ಉಪಕ್ರಮಗಳನ್ನು ನಡೆಸುತ್ತಿದೆ ಎಂದು ಹೇಳಿದರು.
ಪ್ರಾದೇಶಿಕ ಅಸಮಾನತೆಗಳು ಸಹ ಕಣ್ಮರೆಯಾಗುತ್ತಿವೆ. ಹಿಂದೆ ದುರ್ಬಲ ಆರ್ಥಿಕ ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿದ್ದ ರಾಜ್ಯಗಳು ಮತ್ತು ಪ್ರದೇಶಗಳು ಈಗ ತಮ್ಮ ನಿಜವಾದ ಸಾಮರ್ಥ್ಯವನ್ನು ತೋರಿಸುತ್ತಿವೆ ಮತ್ತು ಮುಂಚೂಣಿಯಲ್ಲಿರುವವರನ್ನು ಹಿಡಿಯುತ್ತಿವೆ ಎಂದರು.
ಈ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿಗಳಾದ ಡಾ ಕೈಲಾಸ ಪಾಟೀಲ್ ಆಡಳಿತ ಮಂಡಳಿ ಸದಸ್ಯರು ಹಾಗೂ ಎಸ್ ನಿಜಲಿಂಗಪ್ಪ ದಂತ ಮಹಾವಿದ್ಯಾಲಯದ ಸಂಚಾಲಕರಾದ ಡಾ.ಅನಿಲಕುಮಾರ ಪಟ್ಟಣ, ಆಡಳಿತ ಮಂಡಳಿ ಸದಸ್ಯರಾದ ಡಾ.ಶರಣಬಸಪ್ಪ ಹರವಾಳ, ಡಾ.ಮಹಾದೇವಪ್ಪ ರಾಂಪೂರೆ, ಡಾ.ನಾಗೇಂದ್ರ ಮಂಠಾಳೆ, ಸಾಯಿನಾಥ ಪಾಟೀಲ್, ನಾಗಣ್ಣ ಘಂಟಿ, ಡಾ.ಗುರುಲಿಂಗಪ್ಪ ಪಾಟೀಲ್, ಕಾಲೇಜಿನ ಪ್ರಾಚಾರ್ಯರಾದ ಡಾ.ಜಯಶ್ರೀ ಮುದ್ದಾ, ಉಪ ಪ್ರಾಚಾರ್ಯರಾದ ಡಾ ವಿರೇಂದ್ರ ಪಾಟೀಲ್, ಡಾ.ಸುಭಾಷ್ ಪಾಟೀಲ್ ಹಾಗೂ ಸಂಸ್ಥೆಯ ವಿವಿಧ ಕಾಲೇಜುಗಳ ಪ್ರಾಚಾರ್ಯರು, ಮುಖ್ಯಸ್ಥರು ಉಪಸ್ಥಿತರಿದ್ದರು.
ಧ್ವಜಾರೋಹಣ ಕಾರ್ಯಕ್ರಮ ಮುಗಿದ ನಂತರ ಕಲಬುರಗಿಯ ಶರಣ ಬಸವೇಶ್ವರ ಸಂಸ್ಥಾನದ 8 ನೇ ಪೀಠಾಧಿಪತಿಗಳು ಹಾಗೂ ಕಲ್ಯಾಣ ಕರ್ನಾಟಕದ ಗುಣಮಟ್ಟದ ಶೈಕ್ಷಣಿಕ ಕ್ರಾಂತಿಯ ಪಿತಾಮಹ ಲಿಂಗೈಕ್ಯ ಡಾ.ಶರಣಬಸಪ್ಪ ಅಪ್ಪ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ ಸಂತಾಪ ಸೂಚಕ ಸಭೆ ನಡೆಸಲಾಯಿತು







