ಕಲಬುರಗಿ| ಅಂತರ್ ಮಹಾವಿದ್ಯಾಲಯ ಕ್ರೀಡಾಕೂಟ; ದ್ವಿತೀಯ ಸ್ಥಾನ ಪಡೆದ ಶರಣಬಸವೇಶ್ವರ ಕಾಲೇಜು

ಕಲಬುರಗಿ: ಬಿ.ಶಾಮಸುಂದರ್ ಕಾಲೇಜಿನಲ್ಲಿ ನಡೆದ ಅಂತರ್ ಮಹಾವಿದ್ಯಾಲಯ ಕ್ರೀಡಾಕೂಟದ ವಾಲಿಬಾಲ್ ಸ್ಪರ್ಧೆಯಲ್ಲಿ ನಗರದ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಮಹಿಳಾ ತಂಡ ದ್ವಿತೀಯ ಸ್ಥಾನ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದೆ.
ಅಂತರ್ ಮಹಾವಿದ್ಯಾಲಯ ಕ್ರೀಡಾಕೂಟದಲ್ಲಿ ವಾಲಿಬಾಲ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದ ಕಾಲೇಜಿನ ವಿದ್ಯಾರ್ಥಿಗಳಿಗೆ ಹಿರಿಯ ಪ್ರಾಧ್ಯಾಪಕರಾದ ಡಾ.ಜಗದೇವಿ ಗುಡ್ಡ ಅವರು ಪ್ರಶಸ್ತಿ ಪತ್ರಗಳನ್ನು ವಿತರಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕರು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಈ ಬಗ್ಗೆ ಮಾತನಾಡಿದ ಪ್ರಾಧ್ಯಾಪಕ ಪವನ್ ಮೋಹನ್ ರಾವ್, ಕಾಲೇಜಿನಲ್ಲಿ ಬೋಧನೆ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಾದ ಸಂಗೀತ, ನೃತ್ಯ ಭಾಷಣ ಸ್ಪರ್ಧೆ ಸೆಮಿನಾರ್, ಚರ್ಚಾ ಸ್ಪರ್ಧೆ, ರಂಗೋಲಿ, ಮೆಹಂದಿ, ಪ್ರಬಂಧ ಸ್ಪರ್ಧೆ ಹಾಗೂ ನುರಿತ ಅನುಭವಿವ್ಯಕ್ತಿಗಳಿಂದ ವಿಭಾಗಕ್ಕೆ ಅನುಸಾರವಾಗಿ ಬೋಧನೆ ಹಾಗೂ ವಿಶೇಷ ಉಪನ್ಯಾಸ ಏರ್ಪಡಿಸುತ್ತಿರುವುದರಿಂದ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಮೇಲುಗೈ ಸಾಧಿಸುತ್ತಿದ್ದಾರೆ ಎಂದು ಹೇಳಿದರು.





