ಕಲಬುರಗಿ | ನ.5ರಿಂದ ಅಂತರ್ ಕಾಲೇಜು ಮಹಿಳಾ ಅಥ್ಲೇಟಿಕ್ ಮೀಟ್ : ಡಾ.ಗೀತಾ ಆರ್.ಎಂ.

ಕಲಬುರಗಿ : ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 19ನೇ ಅಂತರ್ ಕಾಲೇಜು ಅಥ್ಲೇಟಿಕ್ ಮೀಟ್ ಅನ್ನು ಶ್ರೀ ಶರಣೇಶ್ವರಿ ರೇಷ್ಮೀ ಮಹಿಳಾ ಬಿ.ಇಡಿ ಕಾಲೇಜಿನ ಸಹಯೋಗದಲ್ಲಿ ನ.5ರಿಂದ ಮೂರು ದಿನಗಳ ಕಾಲ ಗುಲ್ಬರ್ಗಾ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಶ್ರೀ ಶರಣೇಶ್ವರಿ ರೇಷ್ಮೀ ಮಹಿಳಾ ಬಿ.ಇಡಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಗೀತಾ ಆರ್.ಎಂ. ಹೇಳಿದ್ದಾರೆ.
ನಗರದ ಕುಸನೂರ ರಸ್ತೆಯಲ್ಲಿರುವ ರೇಷ್ಮೀ ಶಿಕ್ಷಣ ಸಂಸ್ಥೆಯಲ್ಲಿ ಕರೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾಳೆ(ನ.5) ಮಧ್ಯಾಹ್ನ 3ಗಂಟೆಗೆ ಗುವಿವಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭವನ್ನು ಅಂತರರಾಷ್ಟ್ರೀಯ ಕ್ರೀಡಾಪಟು ಶ್ಯದಿಯಾ ರಾಮನಗೌಡ ಅವರು ಉದ್ಘಾಟಿಸುವರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿಗಳಾದ ಫೌಝಿಯಾ ತರನ್ನುಮ್ ಅವರು ಭಾಗವಹಿಸವರು. ಗೌರವ ಅತಿಥಿಗಳಾಗಿ ಕ.ರಾ.ಅ.ಮ.ವಿ., ವಿಜಯಪುರ ಕುಲಪತಿ ಪ್ರೊ.ವಿಜಯಾ ಬಿ ಕೋರಿಶೆಟ್ಟಿ, ಗುವಿವಿ ಕುಲಪತಿಗಳಾದ ಪ್ರೊ.ಶಶಿಕಾಂತ ಎಸ್. ಉಡಿಕೇರಿ, ಕುಲಸಚಿವರು (ಆಡಳಿತ) ಗುಲ್ಬರ್ಗಾ ವಿಶ್ವವಿದ್ಯಾಲಂಯದ ಪ್ರೊ.ರಮೇಶ ಲಂಡನ್‌ಕರ್, ರೇಷ್ಮೆ ಎಜುಕೇಷನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ (ರಿ.). ಅಧ್ಯಕ್ಷರಾದ ಡಾ.ಭಾರತಿ ಎನ್.ರೇಷ್ಮೆ, ಕೆ.ಎ.ಎಸ್ ಶಂಕರಗೌಡ ಎಸ್. ಸೋಮನಾಳ, ಪ್ರೊ.ಬಿ.ಎಲ್.ಲಕ್ಕಣ್ಣವರ್ ಕುಲಸಚಿವರು, ಗುಲ್ಬರ್ಗ ವಿವಿ ಮೌಲ್ಯಮಾಪನ ಕುಲಸಚಿವರಾದ ಪ್ರೊ.ಎನ್.ಜಿ.ಕಣ್ಣೂರ, ಶ್ರೀಪಾದ ಚೌಡಾಪೂರಕರ್, ರಾಘವೇಂದ್ರ ಎಂ., ಭೈರಪ್ಪ, ಶಿವಯೋಗಿ ಎಲಿ, ಪ್ರೊ.ಹನುಮಂತಯ್ಯ ಪೂಜಾರಿ ಅವರು ಪಾಲ್ಗೊಳ್ಳಲಿದ್ದಾರೆಂದು ಮಾಹಿತಿ ನೀಡಿದರು.
ಕ್ರೀಡಾಕೂಟದಲ್ಲಿ ಸುಮಾರು 45ಕ್ಕೂ ಹೆಚ್ಚು ಕಾಲೇಜಿನಿಂದ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ನೊಂದಾಯಿಸಿಕೊಂಡಿದ್ದಾರೆಂದು ತಿಳಿಸಿದ ಅವರು, ಕ್ರೀಡಾಕೂಟದಲ್ಲಿ ಪ್ರಥಮ ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಆಯ್ಕೆ ಮಾಡಲಾಗುವುದೆಂದು ತಿಳಿಸಿದರು.
ಮೂರು ದಿನಗಳ ಕಾಲ ನಡೆಯಲಿರುವ ಕ್ರೀಡಾಕೂಟದಲ್ಲಿ ಭಾಗವಹಿಸುವ ಸುಮಾರು 1 ಸಾವಿರಕ್ಕೂ ಹೆಚ್ಚು ವಿದ್ಯರ್ಥಿಗಳು ಮತ್ತು ಕೋಚ್‌ಗಳಿಗೆ ರೇಷ್ಮೀ ಶಿಕ್ಷಣ ಸಂಸ್ಥೆಯಿಂದ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಶರದ್ ರೇಷ್ಮಿ, ಟ್ರಸ್ಟಿ ಶಶೀರ ಎನ್.ರೇಷ್ಮಿ, ಡಾ.ವಿಶ್ವನಾಥ ನಡಕಟ್ಟಿ, ಸಂಗಣ್ಣ ಕೆ, ಅಶೋಕ ದೈಹಿಕ ಶಿಕ್ಷಕರು ಇದ್ದರು.







