Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಕಲಬುರಗಿ
  4. ಕಲಬುರಗಿ | ಶರಣಬಸವೇಶ್ವರರ ತತ್ವಾದರ್ಗಳ...

ಕಲಬುರಗಿ | ಶರಣಬಸವೇಶ್ವರರ ತತ್ವಾದರ್ಗಳ ಪಾಲನೆ ಅಗತ್ಯ: ಡಾ.ದಾಕ್ಷಾಯಿಣಿ

ವಾರ್ತಾಭಾರತಿವಾರ್ತಾಭಾರತಿ21 Oct 2025 9:16 PM IST
share
ಕಲಬುರಗಿ | ಶರಣಬಸವೇಶ್ವರರ ತತ್ವಾದರ್ಗಳ ಪಾಲನೆ ಅಗತ್ಯ: ಡಾ.ದಾಕ್ಷಾಯಿಣಿ

ಕಲಬುರಗಿ : ದಾಸೋಹ, ಕಾಯಕ ಹಾಗೂ ಮಹಾಮನೆಯ ಪ್ರಸಾದದ ಸೇವೆಗೈದ ಶರಣಬಸವೇಶ್ವರರ ತತ್ವಾದರ್ಶಗಳು ನಿಜ ಜೀವನದಲ್ಲಿ ಅಳವಡಿಸಿಕೊಂಡು ಪಾಲನೆ ಮಾಡಬೇಕು ಎಂದು ಶರಣಬಸವೆಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್.ಅಪ್ಪಾ ಅವರು ನುಡಿದರು.

ನಗರದ ನಾಗನಹಳ್ಳಿ ಕ್ರಾಸ್ ಓವರ್ ಬ್ರಿಡ್ಜ್ ಹತ್ತಿರ ಶರಣಬಸವೇಶ್ವರ ನಗರದಲ್ಲಿ ಸೋಮವಾರ ಜರುಗಿದ ಶರಣಬಸವೇಶ್ವರ ನಗರ ವೆಲ್ಫರ್ ಸೊಸೈಟಿ ಹಾಗೂ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ ಅಕ್ಕನ ಬಳಗವನ್ನು ಉದ್ಘಾಟಿಸಿ ಶುಭ ನುಡಿಗಳನ್ನಾಡಿದ ಅವರು, ನಾವೆಲ್ಲ ಸ್ವಾರ್ಥ ಜೀವನ ನಡೆಸಿ ಮಾನವೀಯ ಮೌಲ್ಯಗಳು ಕಳೆದುಕೊಂಡಿದ್ದೇವೆ. ಇಂಥ ಇಂದಿನ ಕಲುಷಿತ ವಾತಾವರಣದಲ್ಲಿ ನಾವು ಶರಣಬಸವೇಶ್ವರರು ಕಂಡ ಸಾರ್ಥಕ ಜೀವನವನ್ನು ಪುನ: ಸ್ಥಾಪಿಸಬೇಕಾಗಿದೆ ಎಂದರು.

ಪ್ರೀತಿ, ವಿಶ್ವಾಸ, ನಂಬಿಕೆ, ಸತ್ಯ, ನಿಷ್ಠೆ, ಕಾಯಕ, ಮಾನವೀಯತೆ, ಹೃದಯ ವೈಶಾಲ್ಯತೆ ಮೈಗೂಡಿಸಿಕೊಂಡು ಬದುಕಬೇಕಾಗಿದೆ ಎಂದು ಹೇಳಿದ ಅವರು, ಮಹಾನಗರದಲ್ಲಿ ಶರಣಬಸವೇಶ್ವರರ ಹೆಸರಲ್ಲಿ ಸೊಸೈಟಿಯೊಂದನ್ನು ಸ್ಥಾಪಿಸಿದ್ದು, ಹೆಮ್ಮೆಯ ಸಂಗತಿ. ಶರಣರು ನುಡಿ ನಡೆದಂತೆ ದಾಸೋಹ ಸೂತ್ರಗಳನ್ನು ಪಾಲಿಸುವಂತೆ ಹೇಳಿದರು.

ಮಹಿಳೆಯರು ಆತ್ಮವಿಶ್ವಾಸ ಮತ್ತು ಸ್ವಾಭಿಮಾನಿಗಳಾಗಿ ಸ್ವತಂತ್ರರಾಗಿ ಬದುಕು ಕಟ್ಟಿಕೊಳ್ಳುವರಾಗಬೇಕು. ಇಂದಿನ ಒತ್ತಡದ ಜೀವನದಲ್ಲಿ ಮಹಿಳೆಯರು ಸಮಾಜಮುಖಿ ಚಿಂತಕರಾಗಿ ಪ್ರಗತಿ ಸಾಧಿಸಲಿ ಹಾಗೂ ಅವಳ ಶಕ್ತಿ ಸಾಮರ್ಥ್ಯದಿಂದ ಏನೆಲ್ಲ ಸಾಧಿಸಲು ಸಾಧ್ಯ ಎಂದರು.

ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಎಸ್.ಅಪ್ಪಾ ಸಾನಿಧ್ಯ ವಹಿಸಿದ್ದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಡಾ.ಅಲ್ಲಮಪ್ರಭು ದೇಶಮುಖ ಮಾತನಾಡಿದರು.

ಶರಣಬಸವೇಶ್ವರ ನಗರ ವೆಲಫೇರ್ ಸೊಸೈಟಿಯ ಅಧ್ಯಕ್ಷ ಡಾ.ಶರಣಕುಮಾರ ಕಂಠಿ ಅಧ್ಯಕ್ಷತೆ ವಹಿಸಿದ್ದರು.

ಶಾಸಕ ಅಲ್ಲಮಪ್ರಭು ಪಾಟೀಲ್‌, ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಡಾ.ಸುರೇಶ ಆರ್.ಸಜ್ಜನ್, ರಾಜೇಂದ್ರ ಕರೇಕಲ್, ಶರಣಬಸಪ್ಪ ಬೆಣ್ಣೂರ, ಅರುಣಕುಮಾರ ಪಾಟೀಲ, ಸುರೇಶ ಮುಗುಳಿ, ಸೊಸೈಟಿಯ ರವೀಂದ್ರ ಬೋಗಶೆಟ್ಟಿ, ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಸಂಜಯ ಚಿಂದೆ, ರಮೇಶ ಶಂಕರಶೆಟ್ಟಿ, ಶಿವಕುಮಾರ ನಾಸಿ, ಸೋಮಶೇಖರ ಕಲಶೆಟ್ಟಿ, ಶಿವಾನಂದ ಕೆ ಸ್ವಾಮಿ, ಮಹಾಂತೇಶ ಕುಂಬಾರ, ಗುರುಲಿಂಗ ಧನ್ನೂರ, ಗುರುರಾಜ ಪಾಟೀಲ, ಶರಣಬಸಪ್ಪ ಚಿಂಚನಸೂರ, ಮಹೇಶ ಟೆಂಗಳಿ, ವಿಷ್ಣುಕಾಂತ ಕೊಡದೂರ, ಅಮರೇಶ ಹಿರೇಮಠ, ಮಹೇಶ ಅನೀಲ, ಸಂತೋಷ ಭಾಲ್ಕಿ, ವೆಂಕಟೇಶ ತೇಲ್ಕರ್, ಬಲರಾಮ ದತ್ತು, ಡಾ. ಮುರುಳಿಧರ, ಮಾತೋಶ್ರೀ ದಾಕ್ಷಾಯಿಣಿ ಅವ್ವಾಜಿ ಅಕ್ಕನ ಬಳಗದ ಸಂಗೀತಾ ಚಿಂಚನಸೂರ, ಸುರೇಖಾ ಸ್ವಾಮಿ, ಗಂಗಮ್ಮ ಬೋಗಶೆಟ್ಟಿ, ಜ್ಯೋತಿ ಧನ್ನೂರ, ಸುನೀತಾ ತೇಲ್ಕರ್, ಮಲ್ಲಮ್ಮ ಕುಂಬಾರ, ಶಿಲ್ಪಾ ಕೋರಿ, ಶಿವಲೀಲಾ ಪಾಟೀಲ, ತನುಜಾ ಶಂಕರಶೆಟ್ಟಿ, ಡಾ.ಪ್ರಭಾವತಿ ಕಂಠಿ, ಸುವರ್ಣಾ ಹಿರೇಮಠ, ಸುಜಾತಾ ಚಿಂದೆ, ಶಿಲ್ಪಾರಾಣಿ ಮಹೇಶ, ಸುವರ್ಣಾ ಕೊಡದೂರ, ಭಾಗ್ಯಶ್ರೀ ನಾಸಿ, ಪ್ರೀತಿ ಕಲಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X