ಕಲಬುರಗಿ | ಐಟಿಐ ಕೇಂದ್ರಗಳು ನಿರುದ್ಯೋಗ ಸಮಸ್ಯೆಗಳನ್ನು ಪರಿಹರಿಸುವ ಕೇಂದ್ರಗಳಾಗಿವೆ: ಬಿ.ಆರ್.ಪಾಟೀಲ್

ಕಲಬುರಗಿ: ಕೈಗಾರಿಕಾ ತರಬೇತಿ ಕೇಂದ್ರಗಳು ನಿರುದ್ಯೋಗ ಸಮಸ್ಯೆಗಳನ್ನು ಪರಿಹರಿಸುವ ಸಂಜೀವಿನಿಗಳಾಗಿವೆ ಎಂದು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾದ ಬಿ.ಆರ್.ಪಾಟೀಲ್ ಹೇಳಿದರು.
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಕೈಗಾರಿಕಾ ತರಬೇತಿ ಕೇಂದ್ರ ನಿಂಬರ್ಗಾ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕರಾಗಿ ಮಾತನಾಡಿದರು.
ಕೈಗಾರಿಕಾ ತರಬೇತಿ ಕೇಂದ್ರಗಳು ವ್ಯಕ್ತಿಗಳಿಗೆ ಉದ್ಯೋಗ ಪಡೆಯಲು ಅಗತ್ಯವಾದ ನೈಜ-ಜಗತ್ತಿನ ಕೌಶಲ್ಯಗಳನ್ನು ನೀಡುತ್ತವೆ. ಇಂತಹ ಕೈಗಾರಿಕಾ ತರಬೇತಿ ಕೇಂದ್ರಗಳನ್ನು ಹಳ್ಳಿ ಹಳ್ಳಿಗಳಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಲಿಂ. ಮಹಾದೇವಪ್ಪ ರಾಂಪೂರೆಯವರು ಸ್ಥಾಪನೆ ಕಲ್ಯಾಣ ಕರ್ನಾಟಕ ಭಾಗದ ಹಳ್ಳಿಗಳ ವಿಧ್ಯಾರ್ಥಿಗಳಿಗೆ ಉದ್ಯೋಗದಾತರಾಗಿದ್ದಾರೆ ಎಂದು ಸ್ಮರಿಸಿದರು.
ಸಂಸ್ಥೆಯ ಇನ್ನೂ ಹೆಚ್ಚು ಕಾಲಕ್ಕೆ ಅವಶ್ಯಕತೆ ಇರುವ ನವನವೀನಕೌಶಲ್ಯ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ಜನರಿಗೆ ಉದ್ಯೋಗ ನೀಡುವಂತಾಗಲಿ ಎಂದು ಹೇಳಿದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯು ರೈತರಿಂದ ಸ್ಥಾಪನೆಯಾಗಿದೆ. ನಮ್ಮ ಪ್ರದೇಶ ಕೃಷಿ ಪ್ರಧಾನ ಪ್ರದೇಶವಾಗಿದ್ದು, ರೈತರ ಮಕ್ಕಳಿಗೆ ಅನೂಕೂಲವಾಗುವ ಆಧುನಿಕ ಕೃಷಿ ಪದ್ಧತಿಗೆ ಸಂಭಂದಿಸಿದ ಕೃಷಿ ಕೌಶಲ್ಯ ತರಬೇತಿ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಸಂಸ್ಥೆಯ ಅಧ್ಯಕ್ಷರಾದ ಶಶೀಲ್ ನಮೋಶಿ ಅವರಿಗೆ ಮನವಿ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಶಶೀಲ್ ನಮೋಶಿ, ದಾವಣಗೇರಿಯ ಐಟಿಓಟಿ ಜಂಟಿ ನಿರ್ದೇಶಕ ರವಿಂದ್ರನಾಥ ಬೆಳ್ಳಿ ಮಾತನಾಡಿದರು.
ಈ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ ಹಾಗೂ ತರಬೇತಿ ಕೇಂದ್ರದ ಸಂಚಾಲಕರಾದ ಡಾ.ಮಹಾದೇವಪ್ಪ ರಾಂಪೂರೆ, ಸದಸ್ಯರಾದ ಅನೀಲಕುಮಾರ ಮರಗೋಳ, ನಾಗಣ್ಣ ಘಂಟಿ ಹಾಗೂ ಆಡಳಿತ ಮಂಡಳಿ ಸದಸ್ಯರು ಮಾಜಿ ಜಿ ಪಂ ಸದಸ್ಯರಾದ ಗುರುಶಾಂತಪ್ಪ ನಿಂಬಾಳ, ಮಾಜಿ ಗ್ರಾ.ಪಂ ಅಧ್ಯಕ್ಷ ಸೈಬಣ್ಣ ಕರಿಚೆನ್, ಶ್ರೀಮಂತ ವಾಗ್ದರಗಿ, ವೀರಣ್ಣ ಬಿರಾದಾರ ಉಪಸ್ಥಿತರಿದ್ದರು.
ಪ್ರಾಚಾರ್ಯರಾದ ಅಣ್ಣಾರಾವ ದುಗೊಂಡ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಯ್ಯ ಸ್ವಾಮಿ ಹಿತ್ತಲಶಿರೂರು ಪ್ರಾರ್ಥನೆ ಮಾಡಿದರು, ಶರಣಬಸಪ್ಪ ಕಾರ್ಯಕ್ರಮ ನಿರೂಪಿಸಿದರು. ನಾಗೇಶ್ ಅಲ್ಮದ ಸ್ವಾಗತಿಸಿ, ವಂದಿಸಿದರು.







