ಕಲಬುರಗಿ| ಪತ್ರಕರ್ತರ ಸಂಘದ ಚುನಾವಣೆ : 4ನೇ ಬಾರಿಗೆ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಬಾಬುರಾವ್ ಯಡ್ರಾಮಿ

ಕಲಬುರಗಿ: ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಬಾಬುರಾವ್ ಯಡ್ರಾಮಿ ಅವರು ನಾಲ್ಕನೇ ಬಾರಿಗೆ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
170 ಮತಗಳನ್ನು ಪಡೆಯುವ ಮೂಲಕ ಬಾಬುರಾವ್ ಯಡ್ರಾಮಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. 120 ಮತಗಳನ್ನು ಪಡೆದು ಚಂದ್ರಶೇಖರ್ ಕೌಲಗಾ ಪರಭಾವಗೊಂಡಿದ್ದಾರೆ.
ಇದಲ್ಲದೆ ರಾಜ್ಯ ಕಾರ್ಯಕಾರಣಿ ಸದಸ್ಯರಾಗಿ ರಾಜು ಉದನೂರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಭೀಮಾಶಂಕರ್ ಫಿರೋಜಾಬಾದ, ಜಿಲ್ಲಾ ಉಪಾಧ್ಯಕ್ಷರಾಗಿ ಅರುಣಕುಮಾರ್ ಕದಂ, ಶಿವರಂಜನ್ ಸತ್ಯಂಪೇಟೆ, ಹನಮಂತರಾವ್ ಭೈರಮಡಗಿ, ಜಿಲ್ಲಾ ಕಾರ್ಯದರ್ಶಿಗಳಾಗಿ ಅನೀಲ್ ಸ್ವಾಮಿ, ವಾಸುದೇವ್ ಚವ್ಹಾಣ ಹಾಗೂ ಬಾಬುರಾವ್ ಕೋಬಾಳ ಆಯ್ಕೆಯಾಗಿದ್ದಾರೆ.
ಅಶೋಕ್ ಕಪನೂರ್ ಜಿಲ್ಲಾ ಖಜಾಂಚಿಯಾಗಿ ಆಯ್ಕೆಯಾಗಿದ್ದು, ಜಿಲ್ಲಾ ಕಾರ್ಯಕಾರಣಿ ಸದಸ್ಯರಾಗಿ ಅಕ್ರಂ ಪಾಷಾ ಮೊಮಿನ್, ಶರಣಬಸಪ್ಪ ಜಿಡಗಾ, ರಾಚಪ್ಪ ಜಂಬಗಿ ಸೇರಿದಂತೆ 15 ಮಂದಿ ಸದಸ್ಯರು ಆಯ್ಕೆಯಾಗಿದ್ದಾರೆ.
Next Story





