Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಕಲಬುರಗಿ
  4. ಕಲಬುರಗಿ | ನ.15, 16ರಂದು ʼಕಾಲಚಕ್ರʼ...

ಕಲಬುರಗಿ | ನ.15, 16ರಂದು ʼಕಾಲಚಕ್ರʼ ನಾಟಕ ಪ್ರದರ್ಶನ: ಡಾ.ಸುಜಾತಾ ಜಂಗಮಶೆಟ್ಟಿ

ವಾರ್ತಾಭಾರತಿವಾರ್ತಾಭಾರತಿ13 Nov 2025 6:21 PM IST
share
ಕಲಬುರಗಿ | ನ.15, 16ರಂದು ʼಕಾಲಚಕ್ರʼ ನಾಟಕ ಪ್ರದರ್ಶನ: ಡಾ.ಸುಜಾತಾ ಜಂಗಮಶೆಟ್ಟಿ

ಕಲಬುರಗಿ: ವಯೋವೃದ್ಧರ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ʼಕಾಲಚಕ್ರʼ ನಾಟಕ ಪ್ರದರ್ಶನ ನ.15 ಮತ್ತು 16 ರಂದು ಸಂಜೆ 6 ಗಂಟೆಗೆ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ರಂಗಾಯಣದ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ ಹೇಳಿದರು.

ಬುಧವಾರ ಇಲ್ಲಿನ ರಂಗಾಯಣದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಲಬುರಗಿ ರಂಗಾಯಣದಿಂದ ಪ್ರಸ್ತುತ ಪಡಿಸುತ್ತಿರುವ ಮತ್ತು ರೆಪರ್ಟಿ ಕಲಾವಿದರ ಅಭಿನಯದ ಈ ನಾಟಕವನ್ನು ಅಫಜಲಪುರ ಶಾಸಕ ಎಂ.ವೈ.ಪಾಟೀಲ್‌ ಉದ್ಘಾಟಿಸಲಿದ್ದಾರೆ. ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್‌ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಪ್ರದರ್ಶನದಲ್ಲಿ ಅಂದು ನಮ್ಮೊಂದಿಗೆ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್, ನಾಟಕದ ನಿರ್ದೇಶನ ಮಾಡಿದ ಹಿರಿಯ ರಂಗ ನಿರ್ದೇಶಕ ಹುಲುಗಪ್ಪ ಕಟ್ಟಿಮನಿ ಸೇರಿದಂತೆ ಅನೇಕರು ಉಪಸ್ಥಿತರಿರಲಿದ್ದಾರೆ ಎಂದರು.

ಪ್ರತಿ ವರ್ಷ ರಂಗಾಯಣದಿಂದ ಪ್ರತಿ ಮೂರು ನಾಟಕ ಪ್ರಸ್ತುತಪಡಿಸಬೇಕು. ಈ ವರ್ಷ ಎರಡು ನಾಟಕ ಮಾಡಲು ಮಾತ್ರ ಸಾಧ್ಯವಾಗಿದೆ. ಮುಂದಿನ ವರ್ಷ ಮೂರು ನಾಟಕ ಪ್ರಸ್ತುತಪಡಿಸಲಾಗುವುದು. ಮರಾಠಿ ರಂಗಭೂಮಿ ಖ್ಯಾತ ನಾಟಕಕಾರ ಜಯವಂತ ದಳ್ವಿ ಅವರ ರಚನೆ ಮತ್ತು ಎಚ್.ಕೆ.ಕರ್ಕೇರ ಅವರ ಕನ್ನಡ ಅನುವಾದದ ಈ ನಾಟಕವನ್ನು ಹಿರಿಯ ಕಲಾವಿದ ಹುಲುಗಪ್ಪ ಕಟ್ಟಿಮನಿ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದು, ತುಂಬಾ ಸೊಗಸಾದ ನಾಟಕವನ್ನು ಪ್ರಸ್ತುಪಡಿಸಲಾಗಿದೆ. ಈಗಾಗಲೇ ಕಳೆದ ನ.8 ಮತ್ತು 9 ರಂದು ಪ್ರೀಮಿಯರ್ ಪ್ರದರ್ಶನ ನೀಡಲಾಗಿದ್ದು, ನ.15 ಮತ್ತು 16ಕ್ಕೆ ಸಾರ್ವಜನಿಕರ ವೀಕ್ಷಣೆಗೆ ಪ್ರದರ್ಶನ ಆಯೋಜಿಸಿದೆ. ಹೆಚ್ಚಿನ ಕಲಾವಿದರು, ರಂಗ ಪ್ರೇಮಿಗಳು, ಸಾರ್ವಜನಿಕರು ನಾಟಕ ವೀಕ್ಷಿಸಬೇಕೆಂದು ಅವರು ಮನವಿ ಮಾಡಿದರು.

“ಕಾಲಚಕ್ರ” ನಾಟಕವು ಮನೆ ಮನೆಯ ಕತೆಯಾಗಿದೆ. ಸರ್ವಕಾಲಕ್ಕೂ ಸಲ್ಲುವ ನಾಟಕವಾಗಿದೆ. ಕುಟುಂಬ ಸದಸ್ಯರ ನಿರ್ಲಕ್ಷ್ಯದಿಂದ ಹಿರಿಯ ಜೀವಿಗಳು ಪಡುವ ಸಂಕಷ್ಟ, ಒಂಟಿತನದ ವೇದನೆ ಒಳಗೊಂಡಿದೆ. ವಿಶೇಷವಾಗಿ ವಿಭಕ್ತ ಕುಟುಂಬ ಸದಸ್ಯರು, ಯುವ ಪೀಳಿಗೆ, ಉದ್ಯೋಗಸ್ಥ ಜನರು ಇದನ್ನು ವೀಕ್ಷಿಸಬೇಕಿದೆ. ಕಲಬುರಗಿ ರೆಪರ್ಟರಿ ಕಲಾವಿದರು ಅಷ್ಟೇ ಮನೋಜ್ಞವಾಗಿ ಅಭಿನಯಿಸಿದ್ದಾರೆ ಎಂದು ಡಾ.ಸುಜಾತಾ ಜಂಗಮಶೆಟ್ಟಿ ಅವರು ತಿಳಿಸಿದರು.

ಗಮನ ಸೆಳೆದ ʼಕಾಲಚಕ್ರʼ ನಾಟಕ :

ಬುಧವಾರ ಇಲ್ಲಿನ ರಂಗಾಯಣದ ಸಭಾಂಗಣದಲ್ಲಿ ಮಾಧ್ಯಮದವರಿಗಾಗಿಯೆ ʼಕಾಲಚಕ್ರʼ ವಿಶೇಷ ನಾಟಕ ಪ್ರದರ್ಶನ ಮಾಡಲಾಯಿತು. ವಯೋವೃದ್ಧರ ನಿರ್ಲಕ್ಷ್ಯತೆಯ ಭಾವನಾತ್ಮಕ ಪ್ರಸಂಗದ ನಾಟಕ ವೀಕ್ಷಿಸಿದ ಪತ್ರಕರ್ತರೆಲ್ಲರು ಕಣ್ಣೀರು ಹಾಕಿದರು. ವೃದ್ಧ ದಂಪತಿಗಳು ಹಾಗೂ ಅವರ ಇಬ್ಬರ ಗಂಡು ಮಕ್ಕಳು ಹಾಗೂ ವೃದ್ಧ ದಂಪತಿಗಳನ್ನು ದತ್ತು ಪಡೆದ ಯುವಕನ ಕುಟುಂಬ ಸುತ್ತ ನಾಟಕ ಆವರಿಸಿಕೊಂಡಿದೆ.

ಕಾಯಿಲೆಯಿಂದ ನರಳುತ್ತಿರುವ ತಾಯಿ, ವಯೋವೃದ್ಧ ತಂದೆಯನ್ನು ನಿರ್ಲಕ್ಷಿಸುವ ಮಕ್ಕಳು-ಸೊಸೆಯಂದಿರು. ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸಲು ನಿರ್ಧರಿಸುತ್ತಾರೆ. ಮಕ್ಕಳ ನಿರ್ಲಕ್ಷ್ಯಕ್ಕೆ ಒಳಗಾದ ದಂಪತಿ ಯಾರಿಗೆ ಮಕ್ಕಳಿಲ್ಲವೊ ಅಂತವರು ಮಕ್ಕಳನ್ನು ದತ್ತು ತೆಗೆದು ಕೊಳ್ಳುತ್ತಾರೆ. ಹಾಗೆಯೇ ಯಾರಿಗೆ ತಂದೆ-ತಾಯಿ ಇಲ್ಲವೊ ಅಥವಾ ಅಜ್ಜ-ಅಜ್ಜಿ ಇಲ್ಲವೊ ಅಂತವರು ಯಾಕೆ ಈ ಮುದುಕರನ್ನು ದತ್ತು ತೆಗೆದುಕೊಳ್ಳಬಾರದು ? ಇಚ್ಚಿಸುವುದಾದರೆ. 70-75 ವಯಸ್ಸಿನ ಇಬ್ಬರು ವೃದ್ಧ ದಂಪತಿಗಳಿದ್ದಾರೆ. ಅವರನ್ನು ಕರೆದು ಕೊಂಡು ಹೋಗಿ ಎಂಬ ಸುದ್ದಿ ಪತ್ರಿಕೆಯಲ್ಲಿ ಪ್ರಕಟಣೆ ನೀಡುತ್ತಾರೆ. ಇದನ್ನು ಓದಿದ ಉಪನ್ಯಾಸಕ ಯುವಕನೊಬ್ಬ ವಯೋವೃದ್ಧರನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಇಳಿ ವಯಸ್ಸಿನಲ್ಲಿ ಅವರ ಆರೈಕೆ ಮಾಡುವ ಸಾಮಾಜಿಕ ಚಿತ್ರಣ ಇಲ್ಲಿ ಬಿಂಬಿಸಲಾಗಿದೆ.

ಮಕ್ಕಳ ಮೇಲಿನ ಅವಲಂಬನೆ, ಭವಿಷ್ಯದ ಮೇಲಿನ ಅನಿಶ್ಚಿತತೆಗಳು, ಕುಟುಂಬ ಸದಸ್ಯರ ನಿರ್ಲಕ್ಷ್ಯ, ಸಾಮಾಜಿಕ ಸಂಪರ್ಕಗಳ ಕೊರತೆಯಿಂದ ಒಂಟಿತನದ ವೇದನೆ ಕಾಲಚಕ್ರ ನಾಟಕದ ಮೂಲ ಸ್ವರೂಪವಾಗಿದೆ. ಈ ನಾಟಕದಲ್ಲಿ ವೃದ್ಧಾಪ್ಯದ ಸೂಕ್ಷ್ಮ ಸಂವೇದನೆಗಳು ಬಹಳ ಸೊಗಸಾಗಿ ಮೂಡಿಬಂದಿದೆ. ಹುಲುಗಪ್ಪ ಕಟ್ಟಿಮನಿ ಅವರು ಮನ ಮುಟ್ಟುವಂತೆ ನಿರ್ದೇಶಿಸಿದ್ದು, ಎಲ್ಲರು ನೋಡಲೇಬೇಕಾದ‌ ನಾಟಕ ಇದಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X