ಕಲಬುರಗಿ | ಕಾಯಕ ಸಮಾನತೆಯ ಸಂಕೇತ : ಮಲ್ಲಿನಾಥ ಪಾಟೀಲ್

ಕಲಬುರಗಿ : ಕೊಡುವುದಕ್ಕೆ ಧಾನ, ಪಡೆಯುದಕ್ಕೆ ಜ್ಞಾನ, ತ್ಯಜಿಸುವುದಕ್ಕೆ ಅಹಂಕಾರ ನಮ್ಮ ಜೀವನದಲ್ಲಿ ಶ್ರೇಷ್ಠವಾಗಿವೆ ಎಂದು ಚಂದ್ರಕಾಂತ ಪಾಟೀಲ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮಲ್ಲಿನಾಥ ಪಾಟೀಲ ಹೊಡಲ ಹೇಳಿದರು.
ನಗರದ ಭವಾನಿ ನಗರದಲ್ಲಿರುವ ಬಬಲಾದ ಮಠದಲ್ಲಿ 253ನೇ ಸೋಮವಾರದ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ "ಸಂತೃಪ್ತಿ ಜೀವನಕ್ಕೆ ಕಾಯಕದ ತತ್ವವೇ ಅಡಿಪಾಯ" ವಿಷಯ ಕುರಿತು ಉಪನ್ಯಾಸ ನೀಡುತ್ತಾ ನೌಕರಿಗೂ, ಕಾಯಕಕ್ಕೂ ಬಹಳ ವ್ಯತ್ಯಾಸವಿದೆ. ನೌಕರಿ ಕುಟುಂಬಕ್ಕೆ ಸೀಮಿತವಾದರೆ, ಕಾಯಕ ಸಮೃದ್ಧ ಸಮಾಜ ಕಟ್ಟುತ್ತದೆ. ಶರಣರು ಕಾಯಕದ ಮಹತ್ವ ಜಗತ್ತಿಗೆ ಸಾರಿ ಸಮಾನತೆಯ ಬೀಜ ಬಿತ್ತಿದಾರೆ ಎಂದು ಮಾರ್ಮಿಕವಾಗಿ ನುಡಿದರು.
ಮುಖ್ಯ ಅಥಿತಿಗಳಾದ ಹುಬ್ಬಳ್ಳಿ ನಗರದ ಮಹೇಂದ್ರ ಫೈನಾನ್ಸ್ ಲೀಗಲ್ ಮ್ಯಾನಂಜೆರಾದ ಅನೂಪ್ ಎಸ್ ಮಾತನಾಡಿದರು. ಶ್ರೀ ಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಗುರುಪಾದಲಿಂಗ ಶಿವಯೋಗಿಗಳು ಸಾನಿಧ್ಯ ವಹಿಸಿದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿ ಹಣಮಂತರಾಯ ಅಟ್ಟೂರ, ಸಂಗಮೇಶ ನಾಗೂರ, ಕವಿತಾ ದೇಗಾಂವ, ಮಾಣಿಕ ಮಿರ್ಕಲ್, ಶಾಂತು ಕಲಬುರಗಿ, ಸಿದ್ದಣ್ಣ ವಾಡಿ, ರೇವಣಸಿದ್ದಯ್ಯ ಶಾಸ್ತ್ರಿ, ಶರಣು ವರನಾಳ,ಚಿದಾನಂದ ಪಾಟೀಲ ಕಣ್ಣೂರ, ಗುರುರಾಜ ಹಸರಗುಂಡಗಿ, ಶಿವಕುಮಾರ ಸಾವಳಗಿ, ಆನಂದ ಪಾಟೀಲ,ಶಿವರಾಯ ಧರ್ಮವಾಡಿ, ಗುಂಡಯ್ಯ ಕುರಕೋಟಿ, ನಾಗರಾಜ ಪಾಟೀಲ, ಚಂದ್ರಕಾಂತ ಹಸರಗುಂಡಗಿ, ಶಿವರಾಜ ಅವರಳ್ಳಿ, ವಿರೂಪಾಕ್ಷಯ್ಯ ಸ್ವಾಮಿ,ರೇವಣಸಿದ್ದಯ್ಯ ಸ್ವಾಮಿ, ಗುಂಡಪ್ಪ ಜವಳಿ, ಧರ್ಮರಾಜ ಭಂಗರಗಿ, ಶ್ರೀನಾಥ ನೆಲ್ಲೂರ,ಅಮರೇಶ್ವರಿ ನಾಗೂರ,ಚನ್ನವೀರ ಮಹಿಳಾ ಭಜನಾ ಸಂಘದವರು ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅಥಿತಿ ಉಪನ್ಯಾಸಕರಿಗೆ ಸನ್ಮಾನಿಸಲಾಯಿತು.