ಕಲಬುರಗಿ | ಜ.21ರಿಂದ ಕೆಬಿಎನ್ ಪ್ರೀಮಿಯರ್ ಲೀಗ್

ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದಲ್ಲಿನ ಕ್ರೀಡಾಪಟುಗಳಿಗೆ ಒಳ್ಳೆಯ ಅವಕಾಶ ನೀಡುವ ಸಲುವಾಗಿ ಕೆಬಿಎನ್ ಪ್ರಿಮಿಯರ್ ಲೀಗ್ ಆರಂಭಿಸಲಾಗಿದ್ದು, ಪ್ರಸಕ್ತ ವರ್ಷದ ಪಂದ್ಯಾವಳಿ ಸಂಗತ್ರಾಸವಾಡಿಯ ಕೆಬಿಎನ್ ಟರ್ಫ್ ಮೈದಾನದಲ್ಲಿ ಹಗಲು ರಾತ್ರಿ ಪಂದ್ಯಗಳು ಜ.21 ರಿಂದ ಫೆ.9 ರವರೆಗೆ ನಡೆಯಲಿದೆ.
ಈ ಪಂದ್ಯಾವಳಿಯ ಕ್ರಿಡಾಪಟುಗಳ ಆಯ್ಕೆಯು ಜ.10ರಂದು ನಡೆದಿದ್ದು, 6 ತಂಡಗಳು ತಮ್ಮ ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಆರ್ ಕೆ ಮಡಕಿˌ ಐವಾನ ಈ ಶಾಹಿˌ ರಾಯಲ್ಸ್, ಗಂಗಾವತಿ ಲಯನ್ಸ್, ಎಂ ಈ ಎಂˌ ಸ್ಟೇಷನ್ ಈಗಲ್ಸ್, ಎಂ ಎಸ್ ಬಿˌ ರೌಜಾ ಸ್ಟಾರ್ಸ್ˌ ಮೊಮೀನ್ ಪುರ ಮಾಸ್ಟರ್ಸ್, ಮಾಮೂಪುರಿ ಮಾರ್ಕೆಟ್ ಸೂಪರ್ ಕಿಂಗ್ಸ್ ತಂಡಗಳು ಭಾಗವಹಿಸಲಿವೆ.
ಚಾಂಪಿಯನ್ ಶಿಪ್ ಗಾಗಿ 6 ತಂಡಗಳ ನಡುವೆ 30 ಲೀಗ್ ಪಂದ್ಯಗಳು, 3 ಪ್ಲೆಆಫ್ ಮತ್ತು 1 ಫೈನಲ್ ಒಟ್ಟು 34 ಪಂದ್ಯಗಳು ನಡೆಯಲಿವೆ. ವಿಜೇತರಿಗೆ ಬಹುಮಾನ ಮತ್ತು ವೈಯಕ್ತಿಕ ಅತ್ಯಾಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಅಲ್ಲದೇ ಪ್ರೇಕ್ಷಕರ ಮನೋರಂಜನೆಗಾಗಿ ಪತ್ರಿಕೋದ್ಯಮ ವಿಭಾಗದಿಂದ ಪ್ರಕಟವಾಗುವ ಕೆಬಿಎನ್ ನ್ಯೂಸ್ ಲೇಟರ್ ನಲ್ಲಿ ಪಂದ್ಯಾವಳಿಯ ಪ್ರತಿ ಮ್ಯಾಚ್ ಬಗ್ಗೆ ಮಾಹಿತಿ ಹಾಗೂ ರಸಪ್ರಶ್ನೆಗಳನ್ನು ಆಯೋಜಿಸಲಾಗುತ್ತದೆ. www.youtube.com/kbnhouseofsports/live ಲಿಂಕ್ ಬಳಸಿ ಎಲ್ಲ ಮ್ಯಾಚ್ ಗಳ ನೇರ ಪ್ರಸಾರ ವೀಕ್ಷಿಸಬಹುದು.
ತಂಡಗಳ ಮಾಲಕರು :
1) ರೌಜಾ ಸ್ಟಾರ್ಸ್ ಮೆಗಾ ಸ್ಪೀಡ್ ಬ್ರಾಡ್ ಬ್ಯಾಂಡ್
ಸೈಯದ್ ಮುಹಮ್ಮದ್ ಅಲಿ ಅಲ್ ಹುಸೇನಿ ಸಾಹೇಬ್ ಮತ್ತು ಡಾ.ಮುಸ್ತಫಾ ಅಲ್ ಹುಸೇನಿ
2) ಐವೆನ್ ಇ ಶಾಹಿ ರಾಯಲ್ಸ್
ಮುದಭಿರ್ ಖಾನ್ ಮತ್ತು ಶ್ರೀ ಜೀಲಾನಿ
3) ಸ್ಟೇಷನ್ ಈಗಲ್ಸ್
ಡಾ.ಮುಜೀಬ್, ಡಾ.ಅರ್ಷದ್, ಶ್ರೀ ಝಕಾ ಮತ್ತು ಶ್ರೀ ಇಂತೇಜಾರ FTC
4) ಮಾರ್ಕೆಟ ಸೂಪರ್ ಕಿಂಗ್ಸ್
ಆಸಿಫ್ ಮತ್ತು ಡಾ.ಖುಸ್ರೋ ಅನ್ಸಾರಿ
5) ಗಂಗಾವತಿ ಲಯನ್ಸ್
ಅಲಿ ಖಾನ್ ಮತ್ತು ಎಂಕೆ ಎಚ್ ಎಚ ಜೀಲಾನಿ
6) ಮೋಮಿನ್ಪುರ ಮಾಸ್ಟರ್ಸ್
ಎಂಜೆಸಿಸಿ ಗುಂಪು ಮತ್ತು ಸೌರಭ್ ಭೀಮನ್







