Kalaburagi | ಖ್ವಾಜಾ ಬಂದೇ ನವಾಝ್ ಉರೂಸ್ : ಇಂಡಸ್ಟ್ರಿಯಲ್ ಎಗ್ಸಿಬಿಷನ್ ಉದ್ಘಾಟನೆ

ಕಲಬುರಗಿ : ನಗರದ ದರ್ಗಾ ಹಝರತ್ ಖ್ವಾಜಾ ಬಂದೇ ನವಾಝ್ ರಹಮತುಲ್ಲಾಹ್ ಅಲೈಹ್ ಅವರ 622ನೇ ಉರೂಸ್ ಶರೀಫ್ ಅಂಗವಾಗಿ ಆಲ್ ಇಂಡಿಯಾ ಇಂಡಸ್ಟ್ರಿಯಲ್ ಎಗ್ಸಿಬಿಷನ್‌ನ್ನು ಭವ್ಯವಾಗಿ ಉದ್ಘಾಟಿಸಲಾಯಿತು.
ಈ ಸಮಾರಂಭದ ಅಧ್ಯಕ್ಷತೆಯನ್ನು ಸಜ್ಜಾದಾ ನಶೀನ್ ಹಜರತ್ ಡಾ.ಹಾಫಿಜ್ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಸಾಹೇಬ್ ಅವರು ವಹಿಸಿದ್ದರು. ವಿಶೇಷ ಅತಿಥಿಗಳಾಗಿ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕರಾದ ಅಲ್ಲಂಪ್ರಭು ಪಾಟೀಲ್, ಕುಡಾ ಅಧ್ಯಕ್ಷರಾದ ಜನಾಬ್ ಮಜ್ಹರ್ ಅಲ್ಲಂ ಖಾನ್ ಭಾಗವಹಿಸಿದರು.
ಕಾರ್ಯಕ್ರಮದ ವೇಳೆ ಹಜರತ್ ಡಾ. ಹಾಫಿಜ್ ಮುಹಮ್ಮದ್ ಅಲಿ ಅಲ್ ಹುಸೈನಿ ಸಾಹೇಬ್ ಅವರು ಇಬ್ಬರು ಗಣ್ಯ ಅತಿಥಿಗಳನ್ನು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ದರ್ಗಾ ಶರೀಫ್ ಕಾರ್ಯದರ್ಶಿಗಳಾದ ಜನಾಬ್ ಅಬ್ದುಲ್ ಬಸಿತ್ ಸಾಹೇಬ್ ಅವರು ಎಲ್ಲ ಗಣ್ಯ ಅತಿಥಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.
ಇದಾದ ಬಳಿಕ ಎಗ್ಸಿಬಿಷನ್‌ನ ವಿವಿಧ ಪ್ರಮುಖ ಸ್ಟಾಲ್‌ಗಳನ್ನು ವೀಕ್ಷಿಸಲಾಯಿತು. ಈ ಸಂದರ್ಭದಲ್ಲಿ ವ್ಯಾಪಾರಿಗಳು ಹೂಮಾಲೆ ಹಾಗೂ ಶಾಲುಗಳನ್ನು ಅರ್ಪಿಸಿ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಡಾ.ಸೈಯದ್ ಮುಸ್ತಫಾ ಹುಸೈನಿ ಸಾಹೇಬ್, ಸೈಯದ್ ಶಾಹ್ ತುಖಿಯುಲ್ಲಾ ಹುಸೈನಿ ಸಾಹೇಬ್, ಸೈಯದ್ ಮೊಹಮ್ಮದ್ ಹುಸೈನಿ ಸಾಹೇಬ್, ಸೈಯದ್ ಶಾಹ್ ಮುರ್ತುಜಾ ಹುಸೈನಿ ಸಾಹೇಬ್, ಸೈಯದ್ ಅಕೀಬ್ ಹುಸೈನಿ ಸಾಹೇಬ್, ಮಿರ್ ರೌಫ್ ಅಲಿ ಖಾನ್ ಸೇರಿದಂತೆ ಖಾನ್ವಾಡಾ-ಎ-ಬಂದೆನವಾಜ್ ಕುಟುಂಬದ ಅನೇಕರು ಉಪಸ್ಥಿತರಿದ್ದರು.
ಇದೇ ವೇಳೆ ಕಾರ್ಪೊರೇಟರ್ ಖುಸ್ರೋ ಜಾಗೀರ್ದಾರ, ಮಜ್ಹರ್ ಹುಸೇನ್, ಸಜ್ಜಾದ್ ಹುಸೇನ್ ಮನಿಯಾಲ್, ಡಾ.ಮಜೀದ್ ದಾಗಿ ಸೇರಿದಂತೆ ಉಲಮಾ, ಮಶಾಯಿಖ್, ಮುರೀದೀನ್, ಪಂಡಿತರು, ವೈದ್ಯರು, ಕಾರ್ಪೊರೇಟರ್‌ಗಳು ಹಾಗೂ ನಗರ ಮತ್ತು ಸುತ್ತಮುತ್ತಲಿನ ಸಾವಿರಾರು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.






