ಕಲಬುರಗಿ | ಕೆಕೆಆರ್‌ಟಿಸಿಯಲ್ಲಿ ಖಾಲಿ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ವಿಸ್ತರಣೆ

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ 300 ನಿರ್ವಾಹಕ (240 ಸ್ಥಳೀಯ ವೃಂದ ಮತ್ತು 60 ಮಿಕ್ಕುಳಿದ ವೃಂದ) ಮತ್ತು 16 ಸಹಾಯಕ ಲೆಕ್ಕಿಗ (13 ಸ್ಥಳೀಯ ವೃಂದ ಮತ್ತು 03 ಮಿಕ್ಕುಳಿದ ವೃಂದ) ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2025ರ ನ.14 ರವರೆಗೆ ವಿಸ್ತರಿಸಿದೆ.
ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರಾಧಿಕಾರದ ಅಧಿಕೃತ https://cetonline.karnataka.gov.in/kea ವೆಬ್‍ಸೈಟ್‍ಗೆ ಸಂಪರ್ಕಿಸಬೇಕೆಂದು ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ತಿಳಿಸಿದ್ದಾರೆ.
Next Story





