Kalaburagi | ಜು.30ರಂದು ಬೌದ್ಧ ನಾಟಕಗಳ ಕುರಿತು ಉಪನ್ಯಾಸ, ಸಂವಾದ ಕಾರ್ಯಕ್ರಮ

ಕಲಬುರಗಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ರಂಗಾಯಣದ ಸಂಯುಕ್ತ ಆಶ್ರಯದಲ್ಲಿ ಜುಲೈ 30ರಂದು (ಗುರುವಾರ) ಬೆಳಿಗ್ಗೆ 11 ಗಂಟೆಗೆ ಕಲಬುರಗಿ ರಂಗಾಯಣ ಸಭಾಂಗಣದಲ್ಲಿ ಹಿರಿಯ ಸಾಹಿತಿ ಡಾ. ಈಶ್ವರ ಎಂ. ಇಂಗನ್ ಅವರ ‘ಹತ್ತು ಬೌದ್ಧ ನಾಟಕಗಳು’ ವಿಷಯದ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಲಬುರಗಿ ವಲಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ ಡಾ. ಶ್ರೀಶೈಲ ನಾಗರಾಳ ಅವರು ಉಪನ್ಯಾಸ ನೀಡಲಿದ್ದಾರೆ. ಗುಲ್ಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಹಾಗೂ ಮಿಲಿಂದ್ ಪದವಿಪೂರ್ವ ಮಹಾವಿದ್ಯಾಲಯದ ನಿವೃತ್ತ ಹಿರಿಯ ಆಂಗ್ಲ ಉಪನ್ಯಾಸಕ ಡಾ. ಈಶ್ವರ ಎಂ. ಇಂಗನ್ ಗೌರವ ಉಪಸ್ಥಿತಿ ವಹಿಸಲಿದ್ದಾರೆ.
ಕರ್ನಾಟಕ ರಂಗಾಯಣದ ಮಾಜಿ ನಿರ್ದೇಶಕ ಪ್ರಭಾಕರ ಜೋಶಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಕರ್ನಾಟಕ ರಂಗಾಯಣದ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ರಂಗಾಯಣ ರೆಪರ್ಟರಿ ಕಲಾವಿದರಿಂದ ರಂಗಗೀತೆಗಳ ಗಾಯನ ನಡೆಯಲಿದ್ದು, ಶ್ರೀನಿವಾಸ ದೊರನಹಳ್ಳಿ ನಿರೂಪಣೆ ಮಾಡಲಿದ್ದಾರೆ.
ಸಂವಾದದಲ್ಲಿ ಎಂ.ಬಿ. ಕಟ್ಟಿ, ಸಂತೋಷ ಕುಂಬಾರ, ನಾರಾಯಣ ಕುಲಕರ್ಣಿ, ಡಾ. ಶೈಲಜಾ ಬಾಗೇವಾಡಿ, ಸೂರ್ಯಕಾಂತ ಸುಜ್ಯಾತ, ಪ್ರೊ. ಸಂತೋಷ ಕಂಬಾರ, ಅರುಣ್ ಜೋಳದಕೂಡ್ಲಿಗಿ, ಪ್ರೊ. ವಸಂತ ನಾಸಿ ಹಾಗೂ ಕಲಬುರಗಿ ರಂಗಾಯಣದ ರೆಪರ್ಟರಿ ಕಲಾವಿದರು ಭಾಗವಹಿಸಲಿದ್ದಾರೆ.






