ಕಲಬುರಗಿ| ಉಪನ್ಯಾಸಕ ಶಾಂತಪ್ಪ ಪಂಡಿತ ಹೆಬಳಿಗೆ ಪಿಎಚ್.ಡಿ ಪದವಿ ಪ್ರದಾನ

ಕಲಬುರಗಿ: ಆಳಂದ ತಾಲೂಕಿನ ಕಡಗಂಚಿ ಗ್ರಾಮದ ಉಪನ್ಯಾಸಕ ಶಾಂತಪ್ಪ ಪಂಡಿತ ಹೆಬಳಿ ಅವರಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರ ವಿಷಯದಲ್ಲಿ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್.ಡಿ) ಪದವಿ ಪ್ರದಾನ ಮಾಡಲಾಗಿದೆ.
ಶಾಂತಪ್ಪ ಅವರು “ಜಾಗತೀಕರಣದ ನಂತರ ಕರ್ನಾಟಕದಲ್ಲಿ ಹೊಸ ಸಾಮಾಜಿಕ ಚಳುವಳಿಗಳ ಉದಯ: ಒಂದು ಅಧ್ಯಯನ” ಎಂಬ ವಿಷಯದ ಕುರಿತು ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದರು. ರಾಜ್ಯಶಾಸ್ತ್ರ ವಿಭಾಗದ ಪ್ರೊ. ಚಂದ್ರಕಾಂತ ಯಾತನೂರ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಜಾಗತೀಕರಣದ ನಂತರ ಕರ್ನಾಟಕದಲ್ಲಿ ಉಂಟಾದ ಸಾಮಾಜಿಕ ಚಳುವಳಿಗಳ ಸ್ವರೂಪ, ಅವುಗಳ ಬೆಳವಣಿಗೆ ಹಾಗೂ ಸಾಮಾಜಿಕ ಪರಿಣಾಮಗಳ ಕುರಿತು ಈ ಅಧ್ಯಯನವು ವಿಶ್ಲೇಷಣಾತ್ಮಕವಾಗಿ ಮಂಡಿಸಲಾಗಿದೆ ಎಂದು ಪಿಎಚ್.ಡಿ ಪದವೀಧರ ಶಾಂತಪ್ಪ ಅವರು ತಿಳಿಸಿದ್ದಾರೆ.
ಪಿಎಚ್.ಡಿ ಪದವಿ ದೊರೆತ ಹಿನ್ನೆಲೆಯಲ್ಲಿ ಶಾಂತಪ್ಪ ಪಂಡಿತ ಹೆಬಳಿ ಅವರಿಗೆ ಕುಟುಂಬದವರು, ಬಂಧು-ಬಳಗ, ಸ್ನೇಹಿತರು ಹಾಗೂ ಹಿತೈಷಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
Next Story




