ಕಲಬುರಗಿ | ಎಲೆಕ್ಟ್ರಿಕ್ ಬೈಕ್ ಗೆ ಲಾರಿ ಢಿಕ್ಕಿ : ವ್ಯಕ್ತಿ ಮೃತ್ಯು

ಕಲಬುರಗಿ : ಸಿಗ್ನಲ್ ದಾಟುವಾಗ ಎಲೆಕ್ಟ್ರಿಕ್ ಬೈಕ್ ಗೆ ಲಾರಿ ಢಿಕ್ಕಿ ಹೊಡೆದು ಇರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ ಹಾಗರಗಾ ಕ್ರಾಸ್ ನಲ್ಲಿ ನಡೆದಿದೆ.
ನಗರದ ನೂರಾನಿ ಮೊಹಲ್ಲಾದ ನಿವಾಸಿ ಅಬ್ದುಲ್ ನಬಿ (65) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಕಟಲರಿ ವ್ಯಾಪಾರಿಯಾಗಿದ್ದು, ಇವರು ಅಂಗಡಿಯ ಸಾಮಾನುಗಳನ್ನು ತೆಗೆದುಕೊಂಡು ಹಾಗರಗಾ ಕ್ರಾಸ್ ನಲ್ಲಿ ಸಿಗ್ನಲ್ ದಾಟುವಾಗ ಅಪಘಾತ ಸಂಭವಿಸಿದೆ.
ತೀವ್ರಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸುವಾಗ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆ ಕಲಬುರಗಿ ನಗರ ಸಂಚಾರಿ ಪೊಲೀಸ್ ಠಾಣೆ -2 ವ್ಯಾಪ್ತಿಯಲ್ಲಿ ನಡೆದಿದೆ.
Next Story







