ಕಲಬುರಗಿ| ಯಡ್ರಾಮಿ ತಾಲೂಕು ಗ್ಯಾರಂಟಿ ಸಮಿತಿ ಸದಸ್ಯರಾಗಿ ಮಹೀಬೂಬ ಮನಿಯಾರ, ಭೀಮಣ್ಣ ಕೆಂಭಾವಿ ಆಯ್ಕೆ

ಕಲಬುರಗಿ(ಯಡ್ರಾಮಿ): ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ತಾಲೂಕು ಅನುಷ್ಠಾನ ಸಮಿತಿ ಸದಸ್ಯರಾಗಿ ಮಹೀಬೂಬ ಮನಿಯಾರ ಹಾಗೂ ಭೀಮಣ್ಣ ಕೆಂಭಾವಿ ನೇಮಕಗೊಂಡಿದ್ದಾರೆ.
ಯಡ್ರಾಮಿ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಹೀಬೂಬ ಮನಿಯಾರ, ಭೀಮಣ್ಣ ಕೆಂಭಾವಿ ಅವರನ್ನು ಗುರುತಿಸಿ ಶಾಸಕರಾದ ಡಾ.ಅಜಯ ಸಿಂಗ್ ಶಿಫಾರಸ್ಸಿನ ಮೇರೆಗೆ ಸಮಿತಿ ಸದಸ್ಯರಾಗಿ ರಾಜ್ಯ ಹಾಗೂ ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ಮಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಹಾಗೂ ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಮಹೀಬೂಬ ಮನಿಯಾರ ಹಾಗು ಭೀಮಣ್ಣ ಕೆಂಭಾವಿ ಅವರನ್ನು ಗುರುತಿಸಿ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಿರುವ ಶಾಸಕ ಡಾ. ಅಜಯ ಸಿಂಗ್ ಅವರಿಗೆ ನೂತನ ಸದಸ್ಯರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
Next Story





