ಕಲಬುರಗಿ| ದಸರಾ ಕವಿಗೋಷ್ಠಿಗೆ ಮಲ್ಲಿನಾಥ ತಳವಾರ ಆಯ್ಕೆ

ಕಲಬುರಗಿ: ಮೖಸೂರು ದಸರಾ ಕವಿಗೋಷ್ಠಿಗೆ ಕಲಬುರಗಿ ಜಿಲ್ಲೆಯಿಂದ ಈ ಬಾರಿ ವಾಡಿ ಸಮೀಪದ ರಾವೂರಿನ ಗಜಲ್ ಕವಿ, ಕಲಬುರಗಿ ಎನ್.ವಿ.ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಮಲ್ಲಿನಾಥ ಎಸ್.ತಳವಾರ ಆಯ್ಕೆಯಾಗಿದ್ದಾರೆ.
ಸೆ.29 ರಂದು ಮೖಸೂರಿನಲ್ಲಿ ದಸರಾ ಉತ್ಸವದ ಪ್ರಧಾನ ವೇದಿಕೆಯಲ್ಲಿ ಪ್ರಬುದ್ಧ ಕವಿಗೋಷ್ಠಿ ನಡೆಯಲಿದ್ದು, ತಳವಾರ ಅವರು ತಮ್ಮ ಸ್ವರಚಿತ ಕವನ ವಾಚನ ಮಾಡಲಿದ್ದಾರೆ.
ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಡಾ.ಬಾನು ಮುಸ್ತಾಕ್ ಸೇರಿದಂತೆ ಇತರ ಗಣ್ಯರು ಕವಿಗೋಷ್ಠಿಯಲ್ಲಿ ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Next Story





