ಕಲಬುರಗಿ | ಅಕ್ರಮ ನಾಡ ಪಿಸ್ತೂಲ್ ಹೊಂದಿದ್ದ ವ್ಯಕ್ತಿಯ ಬಂಧನ

ಅಶೋಕ್ ಯಮನಯ್ಯ ಗುತ್ತೇದಾರ್
ಕಲಬುರಗಿ: ಅಕ್ರಮವಾಗಿ ನಾಡ ಪಿಸ್ತೂಲ್ ಹೊಂದಿದ್ದ ವ್ಯಕ್ತಿಯೋರ್ವನನ್ನು ಜೇವರ್ಗಿ ಪೊಲೀಸರು ಬಂಧಿಸಿದ್ದಾರೆ.
ಜೇವರ್ಗಿ ತಾಲೂಕಿನ ಯಾಳವಾರ ಗ್ರಾಮದ ಅಶೋಕ್ ಯಮನಯ್ಯ ಗುತ್ತೇದಾರ್ (30) ಬಂಧಿತ ವ್ಯಕ್ತಿ. ಈತನಿಂದ ಒಂದು ನಾಡ ಪಿಸ್ತೂಲು ಹಾಗೂ ಮೂರು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿ ಅಶೋಕ್, ರಾಜಸ್ಥಾನದಿಂದ ನಾಡ ಪಿಸ್ತೂಲನ್ನು ಅಕ್ರಮವಾಗಿ ತಂದು ತನ್ನ ಬಳಿ ಇಟ್ಟುಕೊಂಡಿದ್ದ ಎನ್ನಲಾಗಿದೆ. ಕೆಲ ದಿನಗಳ ಹಿಂದಷ್ಟೇ ಈತ ಪಿಸ್ತೂಲ್ ಹಿಡಿದುಕೊಂಡು ತನ್ನ ಸ್ನೇಹಿತರ ಮುಂದೆ ತೋರಿಸಿದ್ದ ಎನ್ನಲಾಗಿದ್ದು, ಈ ಬಗ್ಗೆ ಖಚಿತ ಮಾಹಿತಿ ಪಡೆದ ಜೇವರ್ಗಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





