ಕಲಬುರಗಿ | ಭೀಮ್ ಆರ್ಮಿ ನೇತೃತ್ವದಲ್ಲಿ ಮನುಸ್ಮೃತಿ ದಹನ

ಕಲಬುರಗಿ : ಭೀಮ್ ಆರ್ಮಿ ನೇತೃತ್ವದಲ್ಲಿ ಸಂಘಟನೆಯ ಮುಖಂಡರು ನಗರದ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ವೃತ್ತದ ಸಮೀಪ ಮನುಸ್ಮೃತಿ ಪ್ರತಿ ಸುಟ್ಟು ಪ್ರತಿಭಟನೆ ನಡೆಸಿದರು.
'ಮನುಸ್ಮೃತಿ'ಯೂ ದಲಿತರನ್ನು ಹಾಗೂ ದಲಿತ ಮಹಿಳೆಯರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಂಡ ಕೃತಿಯಾಗಿದೆ. ಮಾನವೀಯ ಹೃದಯವುಳ್ಳ ಯಾರು ಮನುಸ್ಮೃತಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಅದನ್ನು ಒಪ್ಪಿಕೊಳ್ಳುವವನು ಮನುಷ್ಯನಾಗಿರಲೂ ಸಾಧ್ಯವಿಲ್ಲ ಎನ್ನುವ ಘೋಷಣೆ ಮೂಲಕ ಕೃತಿಯ ಪ್ರತಿಗಳನ್ನು ದಹಿಸಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಎಸ್.ಎಸ್ ತಾವಡೆ, ಯುವ ಘಟಕದ ಅಧ್ಯಕ್ಷ ಸಂತೋಷ ಬಿ ಪಾಳಾ, ಸತೀಶ್ ಹುಗ್ಗಿ, ಉದಯ ಸಿ ಖಣಗೆ, ಸತೀಶ್ ಡಿ ಮಾಲೆ, ವಿಷ್ಣುಸ್ವಾಮಿ, ನಾಗರಾಜ ಗಾಯಕವಾಡ, ರಾಹುಲ್ ಜವಳಗಾ, ಶಿವರಾಜ್ (ಪಪ್ಪು) ಸಿನ್ನೂರು, ನವೀನ್ ಪಾಳಾ, ಹುಸೇನಿ ದಂಡಿನಕರರ್ ಸೇರಿದಂತೆ ಹಲವರು ಮುಖಂಡರು ಇದ್ದರು.
Next Story





