ಕಲಬುರಗಿ | 'ಆಪರೇಶನ್ ಸಿಂಧೂರ' ಬೆಂಬಲಿಸಿ ಬೃಹತ್ ತಿರಂಗಾ ಯಾತ್ರೆ

ಕಲಬುರಗಿ : ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಬೆಂಬಲಿಸಿ ನಗರದಲ್ಲಿ ಬೃಹತ್ ತಿರಂಗಾ ಯಾತ್ರೆ ನಡೆಯಿತು.
ನಗರದ ಗಂಜ್ ಪ್ರದೇಶದ ನಗರೇಶ್ವರ ಶಾಲೆಯಿಂದ ಪ್ರಾರಂಭವಾದ ತಿರಂಗಾ ಯಾತ್ರೆ ಜಗತ್ ವೃತ್ತದಲ್ಲಿ ಸಮಾಪ್ತಿಯಾಯಿತು. ಯಾತ್ರೆಯ ಉದ್ದಕ್ಕೂ 'ಜೈ ಜವಾನ್, ಜೈ ಕಿಸಾನ್', 'ವಂದೇ ಮಾತರಂ' ಸೇರಿದಂತೆ ದೇಶಭಕ್ತಿಯ ಹಲವು ಘೋಷಣೆಗಳನ್ನು ಕೂಗುತ್ತಾ ವಿದ್ಯಾರ್ಥಿಗಳು, ಮುಖಂಡರು, ಹೆಜ್ಜೆಗಳನ್ನು ಇಟ್ಟರು.
'ನಾವು ಸೇನಾ ಪಡೆಯೊಂದಿಗೆ ಇದ್ದೇವೆ' ಮತ್ತು 'ಆಪರೇಷನ್ ಸಿಂಧೂರ ಜೊತೆ ರಾಷ್ಟ್ರ' ಎಂಬ ಬ್ಯಾನರ್ ಗಳನ್ನು ಅಳವಡಿಸಿಕೊಂಡು ರ್‍ಯಾಲಿಯ ಉದ್ದಕ್ಕೂ ದೇಶದ ಪರ ಘೋಷಣೆಗಳನ್ನು ಕೂಗುತ್ತಾ ಸೈನಿಕರಿಗೆ ಬೆಂಬಲ ವ್ಯಕ್ತಪಡಿಸಿದರು.
ಅಪರೇಷನ್ ಸಿಂಧೂರ ಕಾರ್ಯಾಚರಣೆಗೆ ಮತ್ತಷ್ಟು ಶಕ್ತಿ ನೀಡಲಿ, ಭಯೋತ್ಪಾದಕರನ್ನು ಹೊಡೆದುರುಳಿಸಲಿ ಎಂದು ಅಲ್ಲಿನ ನಾಗರಿಕರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ಬಸವರಾಜ ಬಿರಾದಾರ, ಸಿದ್ದು ಬಲಶೆಟ್ಟಿ, ಭೋಜರಾಜ ಪಾಟೀಲ್, ಶಿವಾನಂದ ಪಾಟೀಲ, ಅಶೋಕ್ ಗುತ್ತೇದಾರ್, ಈರಣ್ಣ ಹೂಗಾರ, ಅರ್ಜುನ್ ಕೇಂಗಲ್, ಚಂದ್ರಶೇಖರ ಉದನೂರ, ನಿಂಗಣ್ಣ ಬಿರಾದಾರ, ಶಿವಪುತ್ರಪ್ಪ ನಂದಿಕೂರ, ದಯಾನಂದ ಸ್ವಾಮಿ, ಪರಮೇಶ್ವರ ಶಿವಗೊಂಡ, ಸಿದ್ದಲಿಂಗ ಮಲಶೆಟ್ಟಿ, ಆರ್ ಎಸ್ ಜೀವಣಗಿ, ಶಾಸಕರಾದ ಬಸವರಾಜ ಮತ್ತಿಮಡು, ಅವಿನಾಶ್ ಜಾಧವ್, ಮಾಜಿ ಸಂಸದ ಡಾ.ಉಮೇಶ್ ಜಾಧವ್, ಎಂಎಲ್ಸಿ ಬಿ.ಜಿ.ಪಾಟೀಲ್, ಶಶೀಲ್ ನಮೋಶಿ, ಚಂದು ಪಾಟೀಲ್, ಅಶೋಕ ಬಗಲಿ, ರಾಜಕುಮಾರ್ ಪಾಟೀಲ್ ತೇಲ್ಕೂರ್, ದತ್ತಾತ್ರೇಯ ಪಾಟೀಲ ರೇವೂರ್, ಮಾಶಾಳದ ಕೇದಾರ ಶ್ರೀಗಳು, ಚವದಾಪುರಿ ಶ್ರೀ, ಬಡದಾಳ ಶ್ರೀ, ಪಾಳಾ ಶ್ರೀ, ಚಿಣಮಗೇರಿ ಶ್ರೀ, ಅಂಕಲಗಾ ಶ್ರೀ, ನೀಲೂರ ಶ್ರೀ, ಗದ್ದಗಿಮಠದ ಶ್ರೀ, ಮಹೇಶ್ ದೇಶಪಾಂಡೆ, ಉಮೇಶ್ ಪಾಟೀಲ್, ಶಿವಕುಮಾರ್ ಬೊಳಶೆಟ್ಟಿ, ಶಿವರಾಜ್ ಸಂಗೋಳಗಿ, ಪ್ರಶಾಂತ್ ಗುಡ್ಡಾ, ಸತೀಶ್ ಮಾವೂರ, ಸುಧಾ ಹಾಲಕಾಯಿ, ಸವಿತಾ ಪಾಟೀಲ್, ಸುವರ್ಣ ವಾಡೆ, ವಿಜಯಲಕ್ಷ್ಮಿ ಗೊಬ್ಬುರಕರ, ಅರವಿಂದ್ ನವಲಿ, ಹರ್ಷಾ ಗುತ್ತೇದಾರ್, ಶಿವರಾಜ್ ಪಾಟೀಲ್ ರದ್ದೇವಾಡಗಿ, ಸಂತೋಷ ಹಾದಿಮನಿ, ಸಚಿನ್ ಕಡಗoಚಿ, ಮಲ್ಲು ಉದೂನೂರ್, ಬಸವರಾಜ ಮುನ್ನಲಿ, ಅನಿಲ್ ಜಾಧವ, ಗುರುರಾಜ್ ಭರದ ನೂರ್, ವಿರು ರಾಯ್ಕೊಡು, ಅಶೋಕ್ ಮನಕರ್ ವರಾಧ ಶಕರ್ ಶೇಟ್ಟಿ, ಮಂಜುನಾಥ್ ಚೀಲಶೆಟ್ಟಿ, ಶಿವು ಕಾಳಗಿ, ನಾಗರಾಜ್ ಮಹಾಗಾಂವಕರ್, ಸಂಗಮೇಶ ಮುನ್ನಳ್ಳಿ, ಗಂಗಾಧರ್ ಬಿಲಗುಂದಿ ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಈ ತಿರಂಗಾ ಯಾತ್ರೆಯಲ್ಲಿ ಭಾಗಿಯಾಗಿದ್ದರು.







