ಕಲಬುರಗಿ: ಜಯ ಕರ್ನಾಟಕ ಜನಪರ ವೇದಿಕೆಯ ಪದಾಧಿಕಾರಿಗಳ ಸಭೆ

ಕಲಬುರಗಿ: ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ ಚಟುವಟಿಕೆಗಳನ್ನು ವಿಸ್ತರಿಸುವ ಮೂಲಕ ಜನರಿಗೆ ಸಾಮಾಜಿಕ ನ್ಯಾಯ, ಆರ್ಥಿಕ ಸಬಲೀಕರಣ ಮತ್ತು ಶಿಕ್ಷಣದ ಮೂಲಕ ಉತ್ತಮ ಜೀವನವನ್ನು ಒದಗಿಸಲು ವೇದಿಕೆಯಿಂದ ಶ್ರಮಿಸಲು ಮುಂದಾಗಬೇಕು ಎಂದು ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ಬಸವರಾಜ ಕೊರಳ್ಳಿ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
ಆಳಂದ ಚೆಕ್‌ಪೋಸ್ಟ್ ಬಳಿಯಿರುವ ಸಂಘಟನೆಯ ಕಚೇರಿಯಲ್ಲಿ ಕರೆದ ಜಿಲ್ಲಾ ಮಟ್ಟದ ಮತ್ತು ತಾಲೂಕು ಪದಾಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘಟನೆಯ ಮೂಲ ಉದ್ದೇಶವೇ ಈಡೇರಲು ಕಾರ್ಯಕರ್ತರಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಂಘಟನೆಯ ಸದಸ್ಯತ್ವವನ್ನು ಹೆಚ್ಚಿಸುವ, ಸ್ಥಳೀಯ ಸಮಸ್ಯೆಗಳಿಗೆ ಒಗ್ಗಿಕೊಂಡ ಕಾರ್ಯಕ್ರಮಗಳನ್ನು ರೂಪಿಸುವ, ಮತ್ತು ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆಗೆ ಸೇರಿಸಿಕೊಳ್ಳುವ ಭಾಗವಾಗಿ "ನಾವು ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಹೇಳಿದರು.
ಇದಕ್ಕಾಗಿ, ಗ್ರಾಮೀಣ ಭಾಗದಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು, ಶಿಬಿರಗಳನ್ನು ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ, ಜಯ ಕರ್ನಾಟಕ ಜನಪರ ವೇದಿಕೆಯ ಧ್ವನಿಯನ್ನು ಕಲಬುರಗಿಯ ಮೂಲೆಮೂಲೆಗೆ ತಲುಪಿಸಬಹುದು," ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
"ನಾವು ಯುವಕರಿಗೆ, ಮಹಿಳೆಯರಿಗೆ ಮತ್ತು ರೈತರಿಗೆ ಸಂಬoಧಿಸಿದ ವಿಷಯಗಳ ಮೇಲೆ ಕೇಂದ್ರೀಕರಿಸಬೇಕು. ಇದರಿಂದ ಸಂಘಟನೆಯು ಜನರಿಗೆ ಇನ್ನಷ್ಟು ಹತ್ತಿರವಾಗುತ್ತದೆ," ಎಂದು ಅವರು ಹೇಳಿದರು.
ಸಭೆಯಲ್ಲಿ ರಾಜ್ಯ ಸಲಹೆಗಾರ ಉಮೇಶ್ ಬೀರಬಿಟ್ಟೆ ಅವರು, ಕಲಬುರಗಿ ಜಿಲ್ಲೆಯಲ್ಲಿ ಸಂಘಟನೆಯನ್ನು ವಿಸ್ತರಿಸಲು ತಾಲೂಕು ಮಟ್ಟದ ಕಾರ್ಯಕರ್ತರಿಗೆ ಹೆಚ್ಚಿನ ಅಧಿಕಾರ ಮತ್ತು ಜವಾಬ್ದಾರಿಗಳನ್ನು ವಹಿಸುವ ಬಗ್ಗೆ ಒತ್ತು ನೀಡಿದರು.
ದೀರ್ಘಕಾಲೀನ ಗುರಿಗಳ ಬಗ್ಗೆ ಒತ್ತು ನೀಡಿದರು. "ನಮ್ಮ ಸಂಘಟನೆಯು ಕೇವಲ ರಾಜಕೀಯ ಸಂಘಟನೆಯಾಗಿರದೆ, ಜನರ ಸಮಸ್ಯೆಗಳಿಗೆ ಧ್ವನಿಯಾಗಬೇಕು. ಕಲಬುರಗಿ ಜಿಲ್ಲೆಯಂತಹ ಕೃಷಿ ಪ್ರಧಾನ ಪ್ರದೇಶದಲ್ಲಿ, ರೈತರ ಸಮಸ್ಯೆಗಳಿಗೆ ಆದ್ಯತೆ ನೀಡಬೇಕು. ಶಿಕ್ಷಣ, ಆರೋಗ್ಯ, ಮತ್ತು ಉದ್ಯೋಗ ಸೃಷ್ಟಿಯ ಕ್ಷೇತ್ರಗಳಲ್ಲಿ ನಾವು ಕಾರ್ಯಕ್ರಮಗಳನ್ನು ರೂಪಿಸಬೇಕು," ಎಂದು ಅವರು ಹೇಳಿದರು.
ಜಿಲ್ಲಾ ಉಪಾಧ್ಯಕ್ಷ ವರದಾ ಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಅರುಣ ನಾಮದಾರ, ಜಿಲ್ಲಾ ಪದಾಧಿಕಾರಿಗಳಾದ ಶರಣು ಕುಲಕರ್ಣಿ, ರಾಹುಲ್ ಹಂಚಾಟಿ, ಆಳಂದ ಅಧ್ಯಕ್ಷ ನಾಗರಾಜ್ ಘೋಡಕೆ, ಆಫಜಲಪುರ ತಾಲೂಕು ಅಧ್ಯಕ್ಷ ಸದಾನಂದ ಕ್ಷತ್ರಿಯ, ಜೇವರ್ಗಿ ತಾಲೂಕು ಅಧ್ಯಕ್ಷ ಸತೀಶ್ ಕಲಬುರಗಿ, ಸೇಡಂ ತಾಲೂಕು ಅಧ್ಯಕ್ಷ ಅಶೋಕ್ ಯಡ್ರಾಮಿ, ಯಡ್ರಾಮಿ ತಾಲೂಕು ಅಧ್ಯಕ್ಷ ಜಗದೀಶ್ ಮಡಿವಾಳ, ಮತ್ತು ಆಫಜಲಪುರ ಕಾನೂನು ಘಟಕದ ಅಧ್ಯಕ್ಷ ದಯಾನಂದ್ ಪಾಟೀಲ್ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.
ರೈತರಿಗೆ ಕೃಷಿ ಆಧಾರಿತ ತರಬೇತಿಗಳು ಮತ್ತು ಶಿಬಿರಗಳನ್ನು ಆಯೋಜಿಸುವುದು. ಯುವಕರಿಗೆ ಉದ್ಯೋಗ ಮತ್ತು ಶಿಕ್ಷಣಕ್ಕೆ ಸಂಬAಧಿಸಿದ ಕಾರ್ಯಕ್ರಮಗಳನ್ನು ರೂಪಿಸುವುದು. ಮಹಿಳೆಯರಿಗೆ ಸ್ವಾವಲಂಬನೆಗೆ ಸಂಬoಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುವುದು. ತಾಲೂಕು ಮಟ್ಟದ ಕಾರ್ಯಕರ್ತರಿಗೆ ಸಂಘಟನೆಯ ಗುರಿಗಳ ಬಗ್ಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಕುರಿತು ಸಭೆಯಲ್ಲಿ ಚರ್ಚಿಸಿದರು.







