Kalaburagi | ಜಾಫ್ರಾಬಾದ್‌ನಲ್ಲಿ 1.55 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅಲ್ಲಮ ಪ್ರಭು ಪಾಟೀಲ್ ಅಡಿಗಲ್ಲು

ಕಲಬುರಗಿ: ಭೀಮಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಾಫ್ರಾಬಾದ್ ಗ್ರಾಮದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಕಾಮಗಾರಿಗಳಿಗೆ ಅಡಿಗಲ್ಲು ಸಮಾರಂಭ ನೆರವೇರಿತು. ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣ, ಸುಮಾರು 20 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿ ಹಾಗೂ ಸುಮಾರು 1.20 ಕೋಟಿ ರೂ. ವೆಚ್ಚದಲ್ಲಿ ಕೊಳವೆಬಾವಿ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿದರು.
ಹಝರತ್ ರುಕ್ಮುದ್ದೀನ್ ತೋಲಾ ದರ್ಗಾದ ಅನ್ವರ್ ಹುಸೇನ್ ಸಾಹೇಬರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಂತೋಷ್ ಪಾಟೀಲ್ ದಣ್ಣೂರ್, ಲಿಂಗರಾಜ ಕಣ್ಣಿ, ನಾಗರಾಜ ಜಿ. ಭಂಗೂರ, ವೀರಣ್ಣ ಬಂಗುರ್, ಲಡ್ಲೆ ಸಾಬ್ ಹರಸೂರ್, ಜಾಕಿರ್ ಹುಸೇನ್ ಹರಸೂರ್, ನಿಸಾರ್ ಅಹಮದ್, ಅಸ್ಲಾಂ ಸಿಂದಗಿ, ತೋಲಾ ಭಾಷಾ ಮುಜಾವರ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಬಹುಕೋಟಿ ವೆಚ್ಚದ ಈ ಅಭಿವೃದ್ಧಿ ಕಾಮಗಾರಿಗಳು ಜಾಫ್ರಾಬಾದ್ ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳನ್ನು ಮತ್ತಷ್ಟು ಬಲಪಡಿಸಲಿವೆ. ಹಳ್ಳಿಗಳು ಮೂಲ ಸೌಕರ್ಯಗಳಿಂದ ಬಲಗೊಂಡಷ್ಟು ಅನುಕೂಲವಾಗಲಿದೆ. ಹಳ್ಳಿಗರಿಗೆ ರಸ್ತೆ, ನೀರು, ನಿಲ್ದಾಣ ಸೇರಿದಂತೆ ಹಲವು ಸವಲತ್ತು ನೀಡಲು ಆದ್ಯತೆ ನೀಡುವುದಾಗಿ ಸಾರ್ವಜನಿಕರಿಗೆ ಭರವಸೆ ನೀಡಿದರು.






