ಕಲಬುರಗಿ | ತ್ಯಾಗ-ಸ್ಪೂರ್ತಿಯ ಸಂಕೇತ ಮಾತೆ ರಮಾಬಾಯಿ ಅಂಬೇಡ್ಕರ್ : ಮಿಲಿಂದ ಸಾಗರ

ಕಲಬುರಗಿ : ಪ್ರತಿಯೊಬ್ಬ ಮಹಿಳೆಯು ಕೂಡ ಮಾತೆ ರಮಾಬಾಯಿ ಅಂಬೇಡ್ಕರ್ ರವರ ಮಾರ್ಗದಲ್ಲಿ ಬದುಕಬೇಕು. ತ್ಯಾಗ-ಸ್ಪೂರ್ತಿಯ ಸಂಕೇತ ಮಾತೆ ರಮಾಬಾಯಿ ಅಂಬೇಡ್ಕರ್ ಎಂದು ಸಿ ಭಾರತೀಯ ಬೌದ್ಧ ಮಹಾಸಭಾ ತಾಲೂಕು ಕಾರ್ಯದರ್ಶಿ ಮಿಲಿಂದ ಸಾಗರ್ ಅಭಿಮತಪಟ್ಟರು.
ಜೇವರ್ಗಿ ಪಟ್ಟಣದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಭವನದಲ್ಲಿ ಮಾತೇ ರಮಾಬಾಯಿ ಅಂಬೇಡ್ಕರ್ ಅವರ 127 ನೇ ಜನ್ಮದಿನವನ್ನು ಸರಳವಾಗಿ ಆಚರಣೆ ಮಾಡಲಾಯಿತು.
ರಮಾಬಾಯಿ ಅಂಬೇಡ್ಕರ್ ಅವರ ಪೊಟೋಗೆ ಪುಷ್ಪಾರ್ಚನೆ ಸಲ್ಲಿಸಿ ಭಾರತೀಯ ಬೌದ್ಧ ಮಹಾಸಭಾ ತಾಲೂಕು ಕಾರ್ಯದರ್ಶಿ ಮಿಲಿಂದ ಸಾಗರ್ ಮಾತನಾಡಿ, ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆಯ ಬೆಂಬಲ ಇದ್ದೇ ಇರುತ್ತದೆ. ಈ ಸಾಲು ಹಳೆಯದಾದರೂ ತಾತ್ಪರ್ಯ ಮಾತ್ರ ನಿತ್ಯ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಬದುಕಿನಲ್ಲಿ ಅವರ ಪತ್ನಿ ರಮಾಬಾಯಿ ಅಂಬೇಡ್ಕರ್ ಬೆನ್ನುಲುಬಾಗಿ ನಿಂತಿದ್ದರು. ಅವರ ತ್ಯಾಗ ಮನೋಭಾವವನ್ನು ನಮ್ಮ ಮಹಿಳೆಯರು ಅರಿಯಬೇಕು. ಮಹಿಳೆ ಹೇಗೆ ಬದುಕಬೇಕು ಎಂಬುವುದನ್ನು ಕಲಿಯಲು ಮಾತೆ ರಮಾಬಾಯಿ ಅಂಬೇಡ್ಕರ್ ರವರ ಜೀವನ ಚರಿತ್ರೆಯನ್ನ ಓದಬೇಕು ಎಂದರು.
ಈ ಸಂದರ್ಭದಲ್ಲಿ ಭಾರತೀಯ ಬೌದ್ಧ ಮಹಾಸಭಾ ತಾಲೂಕು ಅಧ್ಯಕ್ಷ ಮಲ್ಲಣ್ಣ ಕೊಡಚಿ, ಸಿದ್ರಾಮ ಕಟ್ಟಿ, ಮಲ್ಲಮ್ಮ ಕೊಬಿನ್, ಸಿದ್ದು ಕೇರೂರ, ಯಶ್ವಂತ್ ಬಡಿಗೇರ್, ರವಿ ಕುಳಗೇರಿ, ಶ್ರೀಹರಿ ಕರಕಳ್ಳಿ, ಶ್ರೀಮಂತ ಹರನೂರ, ವಿಕ್ರಮ ಬಡಿಗೇರ, ಪರಶುರಾಮ್ ನಡಗಟ್ಟಿ, ಸಿದ್ದು ಜಳಕಿ, ಶರಣು ಕಟ್ಟಿ, ಮಾನಪ್ಪ ಹೊಸಮನಿ, ರವಿ ಸರಕಾರ, ರವಿ ಡ್ಯಾನ್ಸರ್, ನಾಗು, ದೇವಿಂದ್ರ ಬಡಿಗೇರ, ವಿಶ್ವ ಆಲೂರ ಸೇರಿದಂತೆ ಇತರರು ಭಾಗವಹಿಸಿದರು.







