ಕಲಬುರಗಿ | ಕಾಳಗಿ, ಚಿಂಚೋಳಿ ತಾಲ್ಲೂಕಿನಲ್ಲಿ ಬೆಳೆ ಹಾನಿ ಪ್ರದೇಶ ವೀಕ್ಷಿಸಿದ ಸಂಸದ ಸಾಗರ್ ಖಂಡ್ರೆ

ಕಲಬುರಗಿ: ಜಿಲ್ಲೆಯಾದ್ಯಂತ ಕಳೆದ ತಿಂಗಳು ಹೆಚ್ಚು ಮಳೆಯಾಗಿ ಅತಿವೃಷ್ಟಿ ಸಂಭವಿಸಿದ್ದರಿಂದ ಬೀದರ್ ಲೋಕಸಭಾ ಸಂಸದ ಸಾಗರ್ ಖಂಡ್ರೆ ಅವರು, ಚಿಂಚೋಳಿ ಮತ್ತು ಕಾಳಗಿ ತಾಲ್ಲೂಕಿನ ರೈತರ ಜಮಿನುಗಳಿಗೆ ಭೇಟಿ ನೀಡಿ, ಬೆಳೆ ಹಾನಿ ಪ್ರದೇಶ ವೀಕ್ಷಿಸಿದರು.
ಚಿಂಚೋಳಿ ತಾಲ್ಲೂಕಿನ ನಾಗಾಯಿದಲಾಯಿ, ಕೊಳ್ಳುರ್, ಪೊಲಕಪಳ್ಳಿ ತಾಂಡ, ಚಂದಾಪುರ್ ಪಟೇಲ್ ಕಾಲೋನಿ, ಚಿಂಚೋಳಿ ಹಾಗೂ ಕಾಳಗಿ ತಾಲ್ಲೂಕಿನ ಕೊರವಿ, ಕುಡ್ಡಳ್ಳಿ, ಕೊಡ್ಲಿ, ಸೇರಿ, ಕಾಳಗಿ ಪಟ್ಟಣದ ರೈತರ ಜಮೀನುಗಳಿಗೆ ಭೇಟಿ ನೀಡಿ ಹಾನಿ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.
ಕಾಳಗಿ ತಾಲೂಕಿನಲ್ಲಿಯೇ ಸುಮಾರು 10 ಸಾವಿರ ಹೆಕ್ಟರ್ ಕ್ಕಿಂತ ಹೆಚ್ಚು ಪ್ರದೇಶ ಬೆಳೆ ಹಾನಿಯಾಗಿದ್ದು, 62 ಮನೆಗಳು ಬಿದ್ದಿವೆ. ಅದರಲ್ಲಿ ಸುಮಾರು16 ಸಾವಿರ ರೈತರು ಸಂಕಷ್ಟಕ್ಕಿಡಾಗಿದ್ದಾರೆ. NDRF ಮತ್ತು SDRF ನಿದಿಯಲ್ಲಿ ಮಳೆಯಾಶ್ರಿತ ಪ್ರದೇಶಗಳಿಗೆ ಪ್ರತಿ ಹೆಕ್ಟರಗೆ 8500 ರೂ. ಮತ್ತು ಖಚಿತ ನೀರಾವರಿ ಪ್ರದೇಶಗಳಿಗೆ 17,000 ರೂ. ಹಾಗೂ ಮನೆಯು 20 ಪ್ರತಿಶತ ಹಾಳಾಗಿದ್ದರೆ 6,50,050 ರೂ. ಪ್ರತಿಶತಕ್ಕೆ 30,000 ಮನೆಯೊಳಗೆ ನೀರು ನುಗ್ಗಿದರೆ 5,000 ರೂ. ಪರಿಹಾರ ಸಿಗುತ್ತದೆ ಎಂದರು.
ಬೆಳೆ ವಿಮೆ ಮಾಡಿಸಿದ ರೈತರು ತಮ್ಮ ಬೆಳೆ ಹಾನಿ ಆದ 72 ಘಂಟೆಯೊಳಗೆ ದೂರು ನೀಡಬೇಕು. ಟೋಲ್ ಫ್ರೀ ನಂಬರ್ ಸಂಪರ್ಕ ಆಗದ ಕಾರಣ ರೈತರು ಖುದ್ದಾಗಿ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ದೂರು ನೀಡಿ ಸ್ವೀಕೃತಿ ಪಡೆಯಬೇಕು ಎಂದು ಸಲಹೆ ನೀಡಿದರು.
ಕೆಕೆ ಆರ್ ಡಿಬಿ ಅಡಿಯಲ್ಲಿ ನನ್ನ ಕ್ಷೇತ್ರಕ್ಕೆ 4 ಕೋಟಿ 90 ಲಕ್ಷ ರೂ. ಅನುದಾನ ಸಿಕ್ಕಿದೆ. ಆ ಅನುದಾನ ಸಂಪೂರ್ಣವಾಗಿ ಚಿಂಚೋಳಿ ಕ್ಷೇತ್ರದ ಅಭಿವೃದ್ಧಿಗೆ ನೀಡಿದ್ದೇನೆ ಮತ್ತು ನನ್ನ ಅವಧಿ ಮುಗಿಯುವರೆಗೆ ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಬರುವ ಎಲ್ಲಾ ಗ್ರಾಮಗಳಿಗೆ ಭೇಟಿ ಮಾಡಬೇಕೆಂಬುದು ನನ್ನ ಆಶಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಸುಭಾಷ್ ರಾಥೋಡ್, ಮಾಜಿ ಜಿ.ಪಂ.ಸದಸ್ಯ ರಾಜೇಶ್ ಗುತ್ತೇದಾರ್, ತಹಶೀಲ್ದಾರ್ ಪೃಥ್ವಿರಾಜ್ ಪಾಟೀಲ್, ತಾಪಂ ಇಓ ಬಸಲಿಂಗಪ್ಪ ಡಿಗ್ಗಿ, ಕೃಷಿ ಅಧಿಕಾರಿ ಸರೋಜಾ, ಪಂ.ಪಂ.ಮುಖ್ಯಾಧಿಕಾರಿ ಪಂಕಜಾ, ಪಂಚ ಗ್ಯಾರಂಟಿ ಅಧ್ಯಕ್ಷ ರಾಘವೇಂದ್ರ ಗುತ್ತೇದಾರ, ವೇದ ಪ್ರಕಾಶ್ ಮೋಟಗಿ, ಅವಿನಾಶ್ ಗುತ್ತೇದಾರ್, ಪ್ರದೀಪ್ ಡೊಣ್ಣೂರ, ಶರಣು ಮಜ್ಜಿಗಿ, ಜಿಯಾವುದ್ದಿನ್ ಸೌದಾಗರ್, ನಾಗರಾಜ ಚಿನ್ನ, ಹಿರಲಾಲ್, ಸಂತೋಷ್ ಕಡೂಬುರ್, ಅಮೃತರಾವ ಪಾಟೀಲ್, ಪ್ರಕಾಶ್ ಹಲವರಿದ್ದರು.







