ಕಲಬುರಗಿ | ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಭೀಕರ ಹತ್ಯೆ

ರಿತೇಶ್ ಧೂಳಪ್ಪ (30)
ಕಲಬುರಗಿ : ಕಲ್ಲಿನಿಂದ ಜಜ್ಜಿ ವ್ಯಕ್ತಿಯೋರ್ವನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಗರದ ವಿಜಯನಗರ ಬಡಾವಣೆಯ ಚರ್ಚ್ ಬಳಿ ರವಿವಾರ ಸಂಜೆ ನಡೆದಿದೆ.
ವಿಜಯನಗರದ ನಿವಾಸಿ ರಿತೇಶ್ ಧೂಳಪ್ಪ (30) ಮೃತರು ಎಂದು ತಿಳಿದು ಬಂದಿದೆ.
ಹಳೆ ವೈಷಮ್ಯ ಹಿನ್ನಲೆಯಲ್ಲಿ ಸ್ನೇಹಿತರೇ ಕೊಲೆಯಾಡಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಕುರಿತು ರಾಘವೇಂದ್ರ ನಗರ (ಆರ್ಜಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
Next Story





