ಕಲಬುರಗಿ| ವ್ಯಕ್ತಿಯ ಹತ್ಯೆ; ಆರೋಪಿಯ ಬಂಧನ

ಕಲಬುರಗಿ: ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸೇಡಂ ಪಟ್ಟಣದ ಉಡಗಿ ಕಮಾನ್ ಬಳಿ ಮಂಗಳವಾರ ಬೆಳಗಿನ ಜಾವ ನಡೆದಿದೆ.
ಲಾರಿಗಳ ಮಾಲೀಕ ಎಂದು ಹೇಳಲಾಗುತ್ತಿರುವ ಸೇಡಂ ಪಟ್ಟಣದ ನಿವಾಸಿ ಶೇಖ್ ರಿಯಾಝ್ (45) ಕೊಲೆಯಾದವರು. ಸೇಡಂ ಸಮೀಪದ ಹಯ್ಯಾಳ ಗ್ರಾಮದ ನಿವಾಸಿ ಝಹೀರ್ ಶಾಬುದ್ದೀನ್ (26) ಕೊಲೆ ಆರೋಪಿ ಎಂದು ತಿಳಿದುಬಂದಿದೆ. ಆತನನ್ನು ಪೊಲೀಸರು ಬಂಧಿಸಿದ್ದಾರೆ.
ರಿಯಾಝ್ ಇಂದು ಮುಂಜಾನೆ ವಾಸವಧತ್ತಾ ಸಿಮೆಂಟ್ ಕಾರ್ಖಾನೆಯಿಂದ ಮನೆಗೆ ತೆರಳುತ್ತಿದ್ದ ವೇಳೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ ರಿಯಾಝ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಬಂಧಿಸಿದ ಆರೋಪಿಯನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಸೇಡಂ ಪೊಲೀಸರು ತಿಳಿಸಿದ್ದಾರೆ.
Next Story







