ಕಲಬುರಗಿ | ಎಪಿಎಂಸಿಗೆ ನಫೆಡ್ ಸಹಾಯಕ ವ್ಯವಸ್ಥಾಪಕ ನಿರ್ದೇಶಕರ ಭೇಟಿ

ಕಲಬುರಗಿ : ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದ (ನಫೆಡ್) ಸಹಾಯಕ ವ್ಯವಸ್ಥಾಪಕ ನಿರ್ದೇಶಕ ಸುನೀಲಕುಮಾರ್ ಸಿಂಗ್ ಅವರು ಎಂಎಸ್‍ಪಿ ಅಡಿಯಲ್ಲಿ ತೊಗರಿ ಖರೀದಿ ಚಟುವಟಿಕೆಯನ್ನು ಪರಿಶೀಲಿಸಲು ಎಪಿಎಂಸಿ ಯಾರ್ಡ್‍ಗೆ ಭೇಟಿ ನೀಡಿದರು.
ರೈತರು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ ಖರೀದಿ ಚಟುವಟಿಕೆ ಮತ್ತು ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ನಫೆಡ್ ರಾಜ್ಯ ಮುಖ್ಯಸ್ಥ ವಿನಯಕುಮಾರ್, ಆಹಾರ ಧಾನ್ಯ ಮತ್ತು ಬೀಜ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಂತೋಷ ಲಂಗಾರ್, ಎಪಿಎಂಸಿ ಕಾರ್ಯದರ್ಶಿ ಅಲಾಭಕ್ಷ, ತೊಗರಿ ಮಂಡಳಿಯ ನಾಗರಾಜು, ಕೆಎಸಿಎಂಎಫ್ ಮ್ಯಾನೇಜರ್ ಶೃತಿ ಸಜ್ಜನ್, ಆರ್-ಎಂ ಕೆಎಸ್‍ಡಬ್ಲ್ಯೂಸಿ ಕಲಬುರಗಿ ವಿಭಾಗದ ಮಹೇಶ್, ವೀರೇಶ್ ಗುಳೇದ್, ನಫೆಡ್ ಸಿಬ್ಬಂದಿ ಮತ್ತು ಎಪಿಎಂಸಿ ಕಾರ್ಯದರ್ಶಿ ಉಪಸ್ಥಿತರಿದ್ದರು.
Next Story





