ಕಲಬುರಗಿ | ಭಾರತದ ನ್ಯಾಶನಲ್ ಆಂಟಿ ಕರಪ್ಶನ್, ಕಾರ್ಯಾಚರಣೆ ಸಮಿತಿ ಪದಾಧಿಕಾರಿಗಳ ಸಮಾವೇಶ

ಕಲಬುರಗಿ: ಭಾರತದ ನ್ಯಾಶನಲ್ ಆಂಟಿ ಕರಪ್ಶನ್ ಮತ್ತು ಕಾರ್ಯಾಚರಣೆ ಸಮಿತಿ ಕರ್ನಾಟಕ ಘಟಕದಿಂದ ಬೆಂಗಳೂರಿನ ಮೌರ್ಯ ಹೋಟೆಲ್ ಸಭಾಂಗಣದಲ್ಲಿ ಪದಾಧಿಕಾರಿಗಳ ಸಮಾವೇಶ ಮತ್ತು ಶಪಥ ಗ್ರಹಣ ಕಾರ್ಯಕ್ರಮ ನೆರವೇರಿತು.
ನಿಶ್ಚಲಾನಂದ ಸ್ವಾಮಿಯವರು ಕಾರ್ಯಕ್ರಮ ಉದ್ಘಾಟಿಸಿದರು. ಸಮಿತಿ ರಾಷ್ಟ್ರೀಯ ಅಧ್ಯಕ್ಷರಾದ ಡಾ.ರಾಜೇಶ್ ಶುಕ್ಲಾರ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಬಲವರ್ಧನೆ ಮತ್ತು ಪರಿಣಾಮಕಾರಿ ಕಾರ್ಯಾಚರಣೆಯಿಂದ ಭ್ರಷ್ಟಾಚಾರ ಮತ್ತು ಅತ್ಯಾಚಾರದಂತಹ ದುಷ್ಟ ಕ್ಷೇತ್ರಗಳನ್ನು ತಡೆಗಟ್ಟುವುದಷ್ಟೇ ಅಲ್ಲ. ನಿರ್ಮೂಲನೆ ಮಾಡಬಹುದೆಂದು ಸಮಾವೇಶದಲ್ಲಿ ಒಕ್ಕೊರಲಿನಿಂದ ಕರೆ ನೀಡಲಾಯಿತು.
ಪದಾಧಿಕಾರಿ ಮತ್ತು ಸದಸ್ಯರಿಗೆ ಡಾ.ರಾಜೇಶ್ ಶುಕ್ಲಾ, ಡಾ.ಎ.ಎಸ್.ಭದ್ರಶೆಟ್ಟಿಯವರು ಶಪಥವನ್ನು ಬೋಧಿಸಿದರು.
ಸಂಘಟನೆಯ ಕಾರ್ಯ ಚಟುವಟಿಕೆಗಳಲ್ಲಿ ಇಡೀ ಭಾರತ ದೇಶದಲ್ಲಿಯೇ ಹೆಚ್ಚು ಸಾಧನೆಗೈದ ದಕ್ಷಿಣ ಭಾರತದ ಅಧ್ಯಕ್ಷರಾದ ಡಾ.ಎ.ಎಸ್.ಭದ್ರಶೆಟ್ಟಿಯವರಿಗೆ ಪ್ರಥಮ ಸ್ಥಾನದ ಪ್ರಶಸ್ತಿ, ದಕ್ಷಿಣ ಭಾರತದ ಪ್ರಧಾನ ಕಾರ್ಯದರ್ಶಿ ಶಾಮರಾವ್ ಪ್ಯಾಟಿ, ರಾಜ್ಯ ಕಾರ್ಯದರ್ಶಿ ದಯಾನಂದ, ಜಿಲ್ಲಾ ಅಧ್ಯಕ್ಷರಾದ ಶಿವಕುಮಾರ, ರುದ್ರಪ್ಪ, ಸುರೇಶ ಕಲಶೆಟ್ಟಿ ಮತ್ತು ಮಾಧ್ಯಮ ಮುಖ್ಯಸ್ಥ ವಿಜಯಕುಮಾರ ಬಿರಾದಾರ ಇವರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಕಲಬುರಗಿಯ ಅಧ್ಯಕ್ಷ ಬಿ.ಆರ್.ಚವ್ಹಾಣ, ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ರಾಂಪುರೆ, ಆಡಳಿತ ಮಂಡಳಿ ನಿರ್ದೇಶಕ ಸೂರ್ಯ ಕುಮಾರ್ ಮತ್ತು ಸಂಜು ಕುಮಾರ ಸಹಿತ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.







