ಕಲಬುರಗಿ | ಫೆ.22ರಿಂದ ಜವಾಹರ್ ಬಾಲ್ ಮಂಚ್ನ ರಾಷ್ಟ್ರೀಯ ಸಮ್ಮೇಳನ : ಪೋಸ್ಟರ್ ಬಿಡುಗಡೆ

ಕಲಬುರಗಿ: ಜಿಲ್ಲಾ ಕಾಂಗ್ರೆಸ್ ಸಮಿತಿ, ಜವಾಹರ್ ಬಾಲ್ ಮಂಚ್ ವತಿಯಿಂದ ಫೆ.22 ಮತ್ತು 23ರಂದು ಬೆಂಗಳೂರಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಆವರಣದಲ್ಲಿ ರಾಷ್ಟ್ರ ಮಟ್ಟದ 2ನೇ ಜವಾಹರ್ ಬಾಲ್ ಮಂಚ್ನ ರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ವೀಕ್ಷಕ ಪ್ರಮೋದ್ ಪಾಟೀಲ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಜವಾಹರ್ ಬಾಲ್ ಮಂಚ್ ನ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, 25ಕ್ಕಿಂತ ಹೆಚ್ಚು ರಾಜ್ಯದ ರಾಜ್ಯಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ರಾಷ್ಟ್ರೀಯ ಪದಾಧಿಕಾರಿಗಳು ಸೇರಿ ಸುಮಾರು 400 ಜನ ಭಾಗವಹಿಸಲಿದ್ದು, ಮಕ್ಕಳಿಗೆ ದೇಶದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವಾಗಿದೆ ಎಂದರು.
ಈ ಕಾರ್ಯಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್ ಸಮಿತಿ, ಜವಾಹರ್ ಬಾಲ್ ಮಂಚ್ ನ ರಾಜ್ಯಾಧ್ಯಕ್ಷ ಮೈನುದ್ದಿನ್ ಎಚ್.ಜೆ.ಅಧ್ಯಕ್ಷತೆ ವಹಿಸಲಿದ್ದಾರೆ. ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ, ಪ್ರಿಯಾಂಕಾ ಗಾಂಧಿ, ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಜವಾಹರ್ ಬಾಲ್ ಮಂಚ್ನ ರಾಷ್ಟ್ರೀಯ ಅಧ್ಯಕ್ಷ ಡಾ.ಜಿ.ವಿ.ಹರಿ, ಸಚಿವ ಪ್ರಿಯಾಂಕ್ ಖರ್ಗೆ, ಅಧ್ಯಕ್ಷ ಉದಯ ಚಿಬ್, ಮಾಜಿ ಅಧ್ಯಕ್ಷ ಬಿ.ವಿ.ಶ್ರೀನಿವಾಸ, ಉಸ್ತುವಾರಿಗಳಾದ ಕೃಷ್ಣಾ ಅಲ್ಲವಾರು, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ಹಾಗೂ ಅನೇಕ ಸಚಿವರು ಮತ್ತು ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದರು.
ಮುಖಂಡರಾದ ಧರ್ಮರಾಜ ಬಿ.ಹೇರೂರ, ಸಂತೋಷ ಪಾಟೀಲ್, ಸಂತೋಷ ಗುಡೂರ, ಸಂಗಯ್ಯ ಸ್ವಾಮಿ, ಕೃಷ್ಣಾ ಸಿಂಧೆ, ಅಮೀನಾ ಬೇಗಂ, ಮಲ್ಲಪ್ಪ ಪೂಜಾರಿ, ಸಮೀನ್ ಶೇಖ್, ರಾಣಪ್ಪ, ನರಸಪ್ಪ, ಸಂಜೀವಕುಮಾರ, ಸೈಯಿದಾ ಟಿ.ಫಾತಿಮಾ ಇತರರಿದ್ದರು.







