ಕಲಬುರಗಿ| ಶಹಾಬಾದ್‌ಗೆ ನೂತನ ತಹಶೀಲ್ದಾರ್ ರಾಗಿ ನೀಲಪ್ರಭ ಬಬಲಾದ ಅಧಿಕಾರ ಸ್ವೀಕಾರ

ಕಲಬುರಗಿ: ಶಹಾಬಾದ್‌ಗೆ ನೂತನ ತಹಶೀಲ್ದಾರ್ ಆಗಿ ನೀಲಪ್ರಭ ಬಬಲಾದ ಅವರು ಗುರುವಾರ ಇಲ್ಲಿನ ತಾಲ್ಲೂಕ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಶಹಾಬಾದ್ ತಹಶೀಲ್ದಾರ್ ಜಗದೀಶ್ ಚೌರ್ ಅವರನ್ನು ವರ್ಗಾವಣೆ ಮಾಡಿದ ಬಳಿಕ ತೆರವಾದ ಸ್ಥಾನಕ್ಕೆ ನೀಲಪ್ರಭ ಎಸ್.ಬಬಲಾದ್ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ನೀಲಪ್ರಭ ರವರು ಅಧಿಕಾರ ಹಸ್ತಾಂತರ ಮಾಡಿಕೊಂಡರು.
ನೀಲಪ್ರಭ ಬಬಲಾದ್ ರವರು ಈ ಮೊದಲು 2019 ರಲ್ಲಿ ಕಾಳಗಿ ನೂತನ ತಾಲ್ಲೂಕಿನ ತಹಶೀಲ್ದಾರ್ ರಾಗಿ 2 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಪ್ರಸ್ತುತ ಗುರಮಿಠಕಲ್ ತಾಲ್ಲೂಕಿನಲ್ಲಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತಿದ್ದರು.
ಎರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಜಗದೀಶ ಚೌರ ರವರ ವರ್ಗಾವಣೆಯಾಗಿದ್ದು, ಅವರಿಗೆ ಯಾವುದೇ ಸ್ಥಳವನ್ನು ತೋರಿಸಿಲ್ಲ, ನೀಲಪ್ರಭ ಬಬಲಾದ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ್ಗುರುರಾಜ ಸಂಗಾವಿ, ಅಣವೀರಪ್ಪ, ಶಶಿಶೇಖರ, ರಾಜೇಶ, ಮುನೀರ, ಶ್ರೀಮಂತ ರಾಮಕೋಟೆ, ಹಣಮಂತರಾವ ಪಾಟೀಲ, ಶ್ರೀನಿವಾಸ ಮನ್ನತಟ್ಟಿ, ಗಂಗಾಧರ ವಾಘಮಾರೆ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.





