ಕಲಬುರಗಿ | ಕೆಬಿಎನ್ ವಿವಿಯಿಂದ ಮೊದಲ ಡಾಕ್ಟರೇಟ್ ಪದವಿ ಪಡೆದ ನಿಖತ್ ಫಾತೀಮಾ

ಕಲಬುರಗಿ: ಇಲ್ಲಿನ ಖಾಜಾ ಬಂದೇ ನವಾಝ್ (ಕೆಬಿಎನ್) ವಿಶ್ವ ವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಸಂಶೋಧನಾರ್ಥಿ ನಿಖತ್ ಫಾತೀಮಾ ಅವರು ಮಂಡಿಸಿದ ಪ್ರಬಂಧಕ್ಕಾಗಿ ವಿವಿಯಿಂದ ಮೊದಲ ಡಾಕ್ಟರೇಟ್ ಪದವಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ತಂತ್ರಜ್ಞಾನ ಮತ್ತ ಇಂಜಿನಿಯರಿಂಗ್ ವಿಭಾಗದ ಉಪನ್ಯಾಸಕಿ ಡಾ.ಸಮೀನಾ ಬಾನು ಅವರು ಅವರ ಮಾರ್ಗದರ್ಶನದಲ್ಲಿ ನಿಖತ್ ಫಾತೀಮಾ ಅವರು 'ದೃಶ್ಯ ಮಾಧ್ಯಮ ಬದಲಾವಣೆಯ ಮತ್ತು ಬಳಸಿಕೊಂಡು ವಂಚನೆ ತಡೆಗಟ್ಟಲು ವಿಧಾನʼಗಳ ಕುರಿತಾಗಿ ಪ್ರಬಂಧ ಮಂಡಿಸಿದ್ದಾರೆ.
ನಿಖತ್ ಫಾತೀಮಾ ಕೆಬಿಎನ್ ವಿಶ್ವ ವಿದ್ಯಾಲಯ ಸ್ಥಾಪಿತ ಬಳಿಕ ಮೊದಲ ಡಾಕ್ಟರೇಟ್ ಪದವಿ ಪಡೆದ ವಿದ್ಯಾರ್ಥಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
Next Story





