ಕಲಬುರಗಿ | ಜಯಂತಿಗಳಲ್ಲಿ ವೈಭವೀಕರಣ ಬೇಡ : ಮಾಡಿಯಾಳ್ಕರ್

ಕಲಬುರಗಿ: 'ಪ್ರಸ್ತುತ ಎಲ್ಲ ಕಡೆಗಳಲ್ಲಿ ಜಯಂತಿಗಳು ವೈಭವೀಕರಣ ಆಗಿರುವುದಕ್ಕೆ' ಉಪನ್ಯಾಸಕ ರಮೇಶ್ ಮಾಡಿಕಾಳಕರ್ ಕಳವಳ ವ್ಯಕ್ತಪಡಿಸಿದರು.
ಆಳಂದ ಪಟ್ಟಣದ ಪಾಟೀಲ ಲೇಔಟ್ ನಲ್ಲಿ ಡಾ.ಬಿ.ಅರ್.ಅಂಬೇಡ್ಕರ್ ಸಮಗ್ರ ಅಭಿವೃದ್ಧಿ ಸಹಕಾರ ಸಂಘದ ವತಿಯಿಂದ ರವಿವಾರ ಹಮ್ಮಿಕೊಂಡ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಢಿದರು.
ಅಂಬೇಡ್ಕರ್ ಅವರ ವಿಚಾರ ಧಾರೆಗಳು ಪ್ರಸ್ತುತ ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದರು.
ಉಪನ್ಯಾಸ ರಾಜಶೇಖರ್ ಕಡಗನ್, ನ್ಯಾಯವಾದಿ ದೇವಾನಂದ ಹೊದಲುರಕರ, ಪುರಸಭೆ ಸದಸ್ಯ ತಯಬ ಅಲಿ ಶೇಖ, ಸಂಘದ ಅಧ್ಯಕ್ಷ ನಾಮದೇವ ಕೊರಳ್ಳಿ, ಶಿಕ್ಷಕ ಮಹೇಶ ಕಾಂಬಳೆ ಮಾತನಾಡಿದರು.
ಪುರಸಭೆ ಸದಸ್ಯರಾದ ಲಕ್ಷ್ಮಣ ಝಳಕೀಕರ, ತಯಬಅಲಿ ಶೇಖ, ಅಬ್ದುಲ್ ವಾಹೀದ ಜರ್ದಿ, ಸೌರವ ಸಿದ್ಧಾರ್ಥ, ಅಂಬೇಡ್ಕರ್ ಅಭಿಮಾನಿಗಳು ಸಂಘದ ಪದಾಧಿಕಾರಿಗಳು ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆಯಲ್ಲಿ ಸಾಧಕರಿಗೆ ಸನ್ಮಾನಿಸಲಾಯಿತು.
ಮಹಾಲಿಂಗ ಜಮಾದಾರ ಸ್ವಾಗತಿಸಿದರು. ಜ್ಯೋತಿ ಮೂಲಿಮನಿ ಪ್ರಾರ್ಥನೆ ಗೀತೆ ಹಾಡಿದರು. ಯುವ ಮುಖಂಡ ಸುನೀಲ್ ಹಿರೋಳಿಕರ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಅಮೃತರಾವ್ ಹಿರೋಳಿಕರ ಪ್ರಾಸ್ತಾವಿಕವಾಗಿ ಮಾತನಾಡಿದರು.





